ಪೋಕ್ಸೋ ಪ್ರಕರಣ: ಮುರುಘಾ ಶ್ರೀ ಸೇರಿ ಮೂವರ ವಿರುದ್ಧ ಆರೋಪ ದೃಢಪಟ್ಟಿದೆ -ಚಿತ್ರದುರ್ಗ ಎಸ್​ಪಿ – Chitradurga POCSO case: charge against Murugha sri, Rashmi, Paramashivaiah proved says Chitradurga SP


ಆದರೆ, ಎ3 ಮಠದ ಉತ್ತರಾಧಿಕಾರಿ ಮತ್ತು ಎ5 ಗಂಗಾಧರಯ್ಯ – ಇವರಿಬ್ಬರ ವಿರುದ್ಧ ಆರೋಪಗಳಿಗೆ ಈವರೆಗೆ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ತನಿಖೆ ಜಾರಿಯಲ್ಲಿದ್ದು ಸಾಕ್ಷ್ಯಾಧಾರ ಸಂಗ್ರಹ ಮಾಡುತ್ತಿದ್ದೇವೆ. ಸಾಕ್ಷ್ಯಾಧಾರ ಸಂಗ್ರಹಿಸಿ ಅಂತಿಮ ಚಾರ್ಜ್​​ಶೀಟ್​ ಸಲ್ಲಿಸುತ್ತೇವೆ ಎಂದು ಚಿತ್ರದುರ್ಗ ಎಸ್​ಪಿ ಸ್ಪಷ್ಟಪಡಿಸಿದ್ದಾರೆ.

ಪೋಕ್ಸೋ ಪ್ರಕರಣ: ಮುರುಘಾ ಶ್ರೀ ಸೇರಿ ಮೂವರ ವಿರುದ್ಧ ಆರೋಪ ದೃಢಪಟ್ಟಿದೆ -ಚಿತ್ರದುರ್ಗ ಎಸ್​ಪಿ

ಮುರುಘಾ ಶರಣರು, ರಶ್ಮಿ, ಪರಮಶಿವಯ್ಯ ವಿರುದ್ಧ ಆರೋಪಗಳು ದೃಢಪಟ್ಟಿದೆ -ಚಿತ್ರದುರ್ಗ ಎಸ್​ಪಿ

TV9kannada Web Team

| Edited By: sadhu srinath

Nov 07, 2022 | 3:49 PM
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ (Protection of Children from Sexual Offences (POCSO) Act) ಜೈಲುಪಾಲಾಗಿರುವ ಮುರುಘಾ ಶರಣರ (Muruga Mutt seer Shivamurthy Murugha Sharanaru) ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರು. ತನಿಖೆ ಭಾಗಶಃ ಪೂರ್ಣಗೊಂಡಿದ್ದು ಚಾರ್ಜ್​ಶೀಟ್​ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್​ ಹೇಳಿದ್ದಾರೆ. ಅಕ್ಟೋಬರ್​ 27ರಂದೇ ತನಿಖಾಧಿಕಾರಿ ಅನಿಲ್ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಚಾರ್ಜ್​ಶೀಟ್​ನ ಸಿಸಿ ನಂಬರ್​ ಬರುವುದು ಬಾಕಿಯಿದೆ. ಈ ಮಧ್ಯೆ, ಎ1 ಡಾ. ಶಿವಮೂರ್ತಿ ಮುರುಘಾ ಶರಣರು, ಎ2 ವಾರ್ಡನ್​ ರಶ್ಮಿ ಮತ್ತು ಎ4 ಪರಮಶಿವಯ್ಯ ವಿರುದ್ಧ ಆರೋಪಗಳು ದೃಢಪಟ್ಟಿವೆ ಎಂದು ಚಿತ್ರದುರ್ಗ ಎಸ್​ಪಿ (Chitradurga SP) ಹೇಳಿದ್ದಾರೆ.

ಆದರೆ, ಎ3 ಮಠದ ಉತ್ತರಾಧಿಕಾರಿ ಮತ್ತು ಎ5 ಗಂಗಾಧರಯ್ಯ – ಇವರಿಬ್ಬರ ವಿರುದ್ಧ ಆರೋಪಗಳಿಗೆ ಈವರೆಗೆ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ತನಿಖೆ ಜಾರಿಯಲ್ಲಿದ್ದು ಸಾಕ್ಷ್ಯಾಧಾರ ಸಂಗ್ರಹ ಮಾಡುತ್ತಿದ್ದೇವೆ. ಸಾಕ್ಷ್ಯಾಧಾರ ಸಂಗ್ರಹಿಸಿ ಅಂತಿಮ ಚಾರ್ಜ್​​ಶೀಟ್​ ಸಲ್ಲಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.