ಪೋರ್ನ್​​ ವಿಡಿಯೋ ಕೇಸಲ್ಲಿ ಬಂಧಿತನಾದ ಶಿಲ್ಪಾ ಶೆಟ್ಟಿ ಪತಿ; ರಾಜ್​ ಕುಂದ್ರಾ ವಾಟ್ಸಪ್ ಚಾಟ್​​​​ ಲೀಕ್​​

ಪೋರ್ನ್​​ ವಿಡಿಯೋ ಕೇಸಲ್ಲಿ ಬಂಧಿತನಾದ ಶಿಲ್ಪಾ ಶೆಟ್ಟಿ ಪತಿ; ರಾಜ್​ ಕುಂದ್ರಾ ವಾಟ್ಸಪ್ ಚಾಟ್​​​​ ಲೀಕ್​​

ಪೋರ್ನ್​​ ವಿಡಿಯೋ ಕೇಸಲ್ಲಿ ಬಂಧನವಾಗಿರುವ ಖ್ಯಾತ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್​ ಕುಂದ್ರಾ ಅವರು ತನ್ನ ಪಾಟ್ನರ್ಸ್​ ಜೊತೆಗೆ ಮಾಡಿರುವ ವಾಟ್ಸಪ್​​ ಚಾಟ್​ ಲೀಕ್​​​​ ಆಗಿದೆ. ವಾಟ್ಸಪ್​​ ಚಾಟ್​ ಬಿಡುಗಡೆಯಾದ ಬಳಿಕ ಪ್ರಕರಣದಲ್ಲಿ ರಿಯಾನ್​​ ಥಾರ್ಪ್​​​​​ ಬಂಧನಾವಾಗಿದೆ. ರಾಜ್ ಕುಂದ್ರ ಜೊತೆಗೆ ಸೇರಿ ಪೋರ್ನ್​​ ಸಿನಿಮಾಗಳನ್ನು ಸೃಷ್ಟಿಸಿ ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿದ್ದರು ಎಂಬ ಆರೋಪದ ಅಡಿ ಅರೆಸ್ಟ್​ ಮಾಡಲಾಗಿದೆ. ಇನ್ನು ಲೀಕ್​​ ಆದ ವಾಟ್ಸಪ್​​ ಚಾಟ್ ಕೇಸ್​​ನ ಪ್ರಮುಖ ಸಾಕ್ಷಿ ಎಂದು ಹೇಳಲಾಗುತ್ತಿದೆ​​

ಮುಂಬೈನ ಕ್ರೈಮ್ ಬ್ರಾಂಚ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಾಜ್​​ ಕುಂದ್ರಾ ಸಿಕ್ಕಿಬಿದ್ದಿದ್ದಾರೆ. ಐದು ತಿಂಗಳ ಹಿಂದೆ 2021 ಫೆಬ್ರವರಿ ತಿಂಗಳಿನಲ್ಲಿ ಬಂದ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಕಾರ್ಯಾಚರಣೆ ವೇಳೆ ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಂದ್ರಾ ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿದೆ.

ಇನ್ನು, ರಾಜ್​ ಕುಂದ್ರಾ ಬಂಧನವೂ ನಟಿ ಶಿಲ್ಪಾ ಶೆಟ್ಟಿಗೆ ಆಘಾತ ತಂದಿದೆ. ತನ್ನ ಗಂಡನನ್ನು ಪಾರ್ನ್​ ಸಿನಿಮಾಗಳನ್ನು ಮಾಡುತ್ತಿದ್ದ ಜಾಲವೊಂದರ ಪ್ರಕರಣದಲ್ಲಿ ಬಂಧಿಸಿರುವುದಂತೂ ನಿಜಕ್ಕೂ ಅವಮಾನಕರ.

ಫೆಬ್ರವರಿ 2021ರಂದು ಕುಂದ್ರಾ ವಿರುದ್ಧ ದೂರು ಬಂದಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆ್ಯಪ್​ಗಳಲ್ಲಿ ಅಪ್ಲೋಡ್​​ ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಕರಣ ಸಂಬಂಧ ಕುಂದ್ರಾ ಬಂಧನವಾಗಿದೆ. ಇಡೀ ಪ್ರಕರಣದ ರುವಾರಿ ಅವರು. ತನಿಖೆ ಪ್ರಗತಿಯಲ್ಲಿದೆ, ಹೀಗಾಗಿ ಏನು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಏನಿದು ಪ್ರಕರಣ?

ಕೆಂಡ್ರಿಂಗ್​ ಹೆಸರಿನ ಇಂಗ್ಲೆಂಡ್​ ಮೂಲದ ಕಂಪನಿ ಮೇಲೆ ರಾಜ್​ 10 ಕೋಟಿ ಹೂಡಿಕೆ ಮಾಡಿದ್ದರು. ಉಮೇಶ್​ ಎಂಬಾತನೊಂದಿಗೆ ಕೈಜೋಡಿಸಿದ್ದ ಕುಂದ್ರಾ, ಪೋರ್ನ್​​ ವಿಡಿಯೋಗಳನ್ನು ವಿವಿಧ ಆ್ಯಪ್​​ಗಳಲ್ಲಿ ಅಪ್ಲೋಡ್​ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಬಂಧನವಾಗಿರುವ ಮತ್ತೊಬ್ಬ ಆರೋಪಿ ಉಮೇಶ್​​ ಜತೆಗೆ ಕುಂದ್ರಾ ಒಪ್ಪಂದ ಮಾಡಿಕೊಂಡಿದ್ದರಂತೆ.

The post ಪೋರ್ನ್​​ ವಿಡಿಯೋ ಕೇಸಲ್ಲಿ ಬಂಧಿತನಾದ ಶಿಲ್ಪಾ ಶೆಟ್ಟಿ ಪತಿ; ರಾಜ್​ ಕುಂದ್ರಾ ವಾಟ್ಸಪ್ ಚಾಟ್​​​​ ಲೀಕ್​​ appeared first on News First Kannada.

Source: newsfirstlive.com

Source link