ಬೆಳಗಾವಿ: ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಿದ (ZyCov-D)ಸಿಕೋವ್- ಡಿ ಲಸಿಕೆ ಮೂರು ಹಂತಗಳ ಕ್ಲಿನಿಕಲ್ ಪ್ರಯೋಗ ಮುಗಿಸಿದೆ. 12 ರಿಂದ 18 ವರ್ಷದೊಳಗಿನ 20 ಮಕ್ಕಳ ಮೇಲೆ ಯಶಸ್ವಿಯಾಗಿ ಪ್ರಯೋಗ ನಡೆದಿದ್ದು.. ಲಸಿಕೆಗಳನ್ನು ನೀಡಿದ ಎರಡು ತಿಂಗಳ ನಂತರದಲ್ಲಿ ಕ್ಲಿನಿಕಲ್ ಪರೀಕ್ಷೆಗಳಿಗೆ ಒಳಗಾದ 20 ಮಕ್ಕಳಲ್ಲಿ, ಯಾರೊಬ್ಬರಲ್ಲೂ ಲಸಿಕೆಯ ಅಡ್ಡಪರಿಣಾಮಗಳು ಅಥವಾ ಇತರ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ ಎಂದು ಜೀವನ್ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ ನ್ಯೂಸ್​​ಫಸ್ಟ್ ಗೆ ತಿಳಿಸಿದ್ದಾರೆ.

ಕಳೆದ ವರ್ಷ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ ದೇಶದ 12 ಕೇಂದ್ರಗಳಲ್ಲಿ ಈ ಆಸ್ಪತ್ರೆ ಕೂಡ ಒಂದು. ಕಳೆದ ಎರಡು ತಿಂಗಳಿನಿಂದ ಎಲ್ಲಾ 20 ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ನಿಯಮಿತವಾಗಿ ತಮ್ಮ ಆಸ್ಪತ್ರೆಯ ವೈದ್ಯರು ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಮಕ್ಕಳು ಪರೀಕ್ಷಿಸಲ್ಪಟ್ಟ ಎಲ್ಲರೂ ಆರೋಗ್ಯವಾಗಿದ್ದಾರೆ. ಎಲ್ಲಾ ಮಕ್ಕಳ ಪೋಷಕರು ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲು ಸ್ವಯಂಪ್ರೇರಣೆಯಿಂದ ಕರೆತಂದಿದ್ದರು. ಎಲ್ಲಾ 20 ಮಕ್ಕಳ ಪೋಷಕರ ಆಡಿಯೋ ಮತ್ತು ವಿಡಿಯೋ ಒಪ್ಪಿಗೆಗಳನ್ನು ಪರೀಕ್ಷೆಗೆ ಒಳಪಡಿಸುವ ಮೊದಲು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಮಕ್ಕಳ ಮೇಲಿನ ಪ್ರಯೋಗಗಳು ಉತ್ತಮವಾಗಿ ನಡೆದಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಕ್ಕಳಲ್ಲಿ ರಕ್ತದ ಮಾದರಿಗಳು ಮತ್ತು ಪ್ರತಿಕಾಯಗಳನ್ನು ಮುಂದಿನ 12 ತಿಂಗಳವರೆಗೆ ನಿಯಮಿತವಾಗಿ ಪರೀಕ್ಷಿಸಲಾಗುವುದು ಎಂದಿರುವ ಅವರು ಮಕ್ಕಳಿಗೆ (ZyCov-D) ಲಸಿಕೆ ಶೀಘ್ರ ಸಿಗುವ ಭರವಸೆಯನ್ನ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.

The post ಪೋಷಕರಿಗೆ ಗುಡ್​ನ್ಯೂಸ್: ಬೆಳಗಾವಿಯಲ್ಲಿ ನಡೆದ ZyCov-D ವ್ಯಾಕ್ಸಿನ್ ಪ್ರಯೋಗ ಯಶಸ್ವಿ appeared first on News First Kannada.

Source: newsfirstlive.com

Source link