ಪೋಷಕರು ಹೆಣ್ಮಕ್ಕಳಿಗೆ ಮೊಬೈಲ್ ನೀಡಬಾರದು: ಉ. ಪ್ರದೇಶ ಮಹಿಳಾ ಆಯೋಗದ ಸದಸ್ಯೆ

ಪೋಷಕರು ಹೆಣ್ಮಕ್ಕಳಿಗೆ ಮೊಬೈಲ್ ನೀಡಬಾರದು: ಉ. ಪ್ರದೇಶ ಮಹಿಳಾ ಆಯೋಗದ ಸದಸ್ಯೆ

ಲಖನೌ: ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು. ಹುಡುಗಿಯರು ಹುಡುಗರ ಜೊತೆ ಮಾತನಾಡುತ್ತಾ ನಂತರ ಅವರ ಜೊತೆಯೇ ಓಡಿಹೋಗ್ತಾರೆ. ಒಂದು ವೇಳೆ ಮೊಬೈಲ್ ನೀಡಿದರೂ ಆಗಾಗ ಪೋಷಕರು ಮೊಬೈಲ್​ನ್ನು ಪರೀಕ್ಷಿಸುತ್ತಿರಬೇಕು. ತಾಯಿಯಂದಿರ ನಿರ್ಲಕ್ಷ್ಯದಿಂದಲೇ ಇಂಥ ಘಟನೆಗಳು ನಡೆಯುತ್ತವೆ ಎಂದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ಹೇಳಿಕೆ ನೀಡಿದ್ದಾರೆ.

ಮೀನಾಕುಮಾರಿಯವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಮಹಿಳಾ ಆಯೋಗದ ಸದಸ್ಯೆಯಾಗಿ ಇಂಥ ಹೇಳಿಕೆಗಳನ್ನ ನೀಡುತ್ತಿರುವುದು ದುರಂತ ಎಂದು ಹಲವರು ಮೀನಾ ಕುಮಾರಿ ವಿರುದ್ಧ ಕಿಡಿಕಾರಿದ್ದಾರೆ.

ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಮೀನಾ ಕುಮಾರಿ ನನ್ನ ಹೇಳಿಕೆಯನ್ನ ತಿರುಚಲಾಗಿದೆ. ನಾನು ಹೇಳಿದ್ದು ಪೋಷಕರು ತಮ್ಮ ಮಕ್ಕಳ ಮೊಬೈಲ್​ನ್ನು ಆಗಾಗ ಪರೀಕ್ಷಿಸಿ ಅವರು ಅದನ್ನು ಶಿಕ್ಷಣಕ್ಕಾಗಿ ಬಳಸುತ್ತಿದ್ದಾರೋ ಅಥವಾ ಬೇರೆ ಕಾರಣಕ್ಕೆ ಬಳಸುತ್ತಿದ್ದಾರೋ ಎಂದು ಖಚಿತಪಡಿಸಿಕೊಳ್ಳಬೇಕು ಎಂದು. ನಾನು ಹುಡುಗಿಯರು ಮೊಬೈಲ್ ಫೋನ್ ಬಳಸಿದರೆ ಹುಡುಗರ ಜೊತೆ ಓಡಿಹೋಗ್ತಾರೆಂದು ಎಂದು ನಾನು ಹೇಳಿಯೇ ಇಲ್ಲ ಅಂತಾ ಸಮರ್ಥಿಸಿಕೊಂಡಿದ್ದಾರೆ.

The post ಪೋಷಕರು ಹೆಣ್ಮಕ್ಕಳಿಗೆ ಮೊಬೈಲ್ ನೀಡಬಾರದು: ಉ. ಪ್ರದೇಶ ಮಹಿಳಾ ಆಯೋಗದ ಸದಸ್ಯೆ appeared first on News First Kannada.

Source: newsfirstlive.com

Source link