ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ “ಪುಷ್ಪ” ಚಿತ್ರದಲ್ಲಿ ನಟಿ ಸಮಂತಾ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಹೌದು ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಸಿನಿಮಾ ವಿಚಾರದಲ್ಲೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇನ್ನು ಸಮಂತಾ ಪುಷ್ಪ ಚಿತ್ರದ ಐಟಂ ಸಾಂಗ್ನಲ್ಲಿ ಸಮಂತಾ ಕಾಣಿಸಿಕೊಳಲಿದ್ದಾರೆ ಎಂಬ ಗಾಸಿಪ್ ಕೇಳಿಬಂದಿದೆ.
ನಿರ್ದೇಶಕ ಸುಕುಮಾರ್ ಕಲ್ಪನೆಯಲ್ಲಿ ಪುಷ್ವ ಚಿತ್ರ ಮೂಡಿಬಂದಿದು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನು ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ಸಮಂತಾ ನಡುವೆ ಉತ್ತಮ ಒಡನಾಟವಿದೆ. ಈ ಹಿಂದೆ ಸುಕುಮಾರ್ ನಿರ್ದೇಶನದ ರಂಗಸ್ಥಳಂ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಅಭಿನಯಿಸಿದ್ದರು. ಹೀಗಾಗಿ ಸಮಂತಾ “ಪುಷ್ಪ” ಸಿನಿಮಾದ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ ಎಂಬುದು ಟಾಲಿವುಡ್ ಸಿನಿ ಪಂಡಿತರ ವಾದ.
ಸಮಂತಾಗೂ ಮೊದಲು ಪುಷ್ಪ ಚಿತ್ರದ ಐಟಂ ಹಾಡಿಗೆ ಸನ್ನಿ ಲಿಯೋನ್, ಪೂಜ ಹೆಗಡೆ, ನೋರಾ ಫತೇಹಿ ಅವರಿಗೆ ಆಫರ್ ನೀಡಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು ಆದ್ರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸದ್ಯ “ಪುಷ್ಪ” ಚಿತ್ರದ ಮೂರು ಹಾಡುಗಳು ಈಗಾಗಲೆ ರಿಲೀಸ್ ಆಗಿದ್ದು ನಾಲ್ಕನೇ ಹಾಡು ಇದೇ 19 ರಂದು ರಲೀಸ್ ಆಗಲಿದೆ. ಸದ್ಯ ಪುಷ್ಪ -1 ಚಿತ್ರ ಇದೇ ಡಿಸೆಂಬರ್ 17 ರಂದು ತೆಲುಗು,ಕನ್ನಡ, ಹಿಂದಿ ತಮಿಳು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
The post ಪ್ಯಾನ್ ಇಂಡಿಯಾ ‘ಪುಷ್ಪ’ದಲ್ಲಿ ಐಟಂ ಸಾಂಗ್ಗೆ ಸೊಂಟ ಬಳುಕಿಸ್ತಾರಾ ಸಮಂತಾ? appeared first on News First Kannada.