ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ದೇಶದಲ್ಲಿ ಹೆಚ್ಚಾಗಿ ಕೇಳಿ ಬಂದ ಸುದ್ದಿ ಅಂದ್ರೆ ಅದು ಡ್ರಗ್ಸ್​​​​​. ಡ್ರಗ್​ ಲಿಂಕ್​​​​ ಬೆನ್ನತ್ತಿದ್ದ ಪೊಲೀಸರ ತನಿಖೆ ಮುಂಬೈನಲ್ಲಿ ಆರಂಭಗೊಂಡಿದ್ದರು ಕೂಡ ಅದು ದೇಶಾದ್ಯಂತ ಹಬ್ಬೋದಕ್ಕೆ ಶುರು ಆಗಿತ್ತು. ಬಾಲಿವುಡ್​ನಿಂದ ಹಿಡಿದು ಸ್ಯಾಂಡಲ್​​ವುಡ್​​ ವರೆಗೂ ಅದರ ಲಿಂಕ್​ ಇತ್ತು ಅನ್ನೋದು ತನಿಖೆಯ ಸಂದರ್ಭದಲ್ಲಿ ಗೊತ್ತಾಗಿತ್ತು.

ಅದಾದ ಮೇಲೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ತನಿಖೆಗಳು ಚುರುಕುಗೊಂಡು ಡ್ರಗ್ಸ್​​ ವಿರುದ್ದ ಆಪರೇಷನ್​​ ಕೂಡ ಶುರು ಆಗಿತ್ತು. ಅದಾದ ಮೇಲೆ ಲಾಕ್​​ಡೌನ್ ಆಗಿಬಿಡ್ತು. ಅಲ್ಲಿಗೆ ಎಲ್ಲವು ತಣ್ಣಗಾಗಿತ್ತು. ಅಲ್ಲೊಬ್ಬ ಇಲ್ಲೊಬ್ಬ ತನಿಖೆಯಿಂದ ದೇಶಾದ್ಯಂತ ಸದ್ದು ಮಾಡುವಂತಾಗಿತ್ತು. ಅದು ಕೇವಲ ಮುಂಬೈಗೆ ಮಾತ್ರ ಸೀಮಿತವಾಗಿರದೇ, ದೇಶದ ಮೂಲೆ ಮೂಲೆಗೂ ತನಿಖೆ ಹಬ್ಬಿತ್ತು. ಅದಾದ ಮೇಲೆ ಅಲ್ಲೊಬ್ಬ ಇಲ್ಲೊಬ್ಬ ಅನ್ನೊ ಹಾಗೆ ಪೆಡ್ಲರ್​​ಗಳು ತಗ್ಲಾಕಿಕೊಳ್ಳುತ್ತಿದ್ದರು. ಆದ್ರೆ ಕಿಂಗ್​ಪಿನ್​​ಗಳು ಮಾತ್ರ ತೆರೆಮರೆಯಲ್ಲಿಯೇ ಇದ್ದುಕೊಂಡು ತಮ್ಮ ಕೆಲಸವನ್ನ ಮುಂದುವರೆಸಿದ್ದರು. ಆದ್ರೆ ಈಗ ಮಂಗಳೂರು ಪೊಲೀಸರು ನಡೆಸಿರೋ ಭರ್ಜರಿ ಕಾರ್ಯಾಚರಣೆಯಿಂದ ಡ್ರಗ್​ ಲಿಂಕ್​​ನ ಪ್ರಮುಖ ಕೊಂಡಿ ತಗ್ಲಾಕ್ಕೊಂಡಂಗಾಗಿದೆ.

ಮಂಗಳೂರು ಪೊಲೀಸರಿಂದ ಬೆಂಗಳೂರಿನಲ್ಲಿ ಭರ್ಜರಿ ಭೇಟೆ
ಹೌದು. ಮಂಗಳೂರು ಪೊಲೀಸರು ನಡೆಸಿರೋ ಕಾರ್ಯಚರಣೆಯಿಂದ ಇಬ್ಬರು ಡ್ರಗ್​​​ ಲಿಂಕ್​​​ನ ದಕ್ಷಿಣ ಭಾರತದ ಪ್ರಮುಖ ಕೊಂಡಿಗಳೇ ತಗ್ಲಾಕ್ಕೊಂಡಿರೋ ರೀತಿ ಕಾಣುತ್ತಿದೆ. ಖಚಿತ ಮಾಹಿತಿ ಆಧರಿಸಿ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಚರಣೆ ನಡೆಸಿ ಡ್ರಗ್​​ ಕಿಂಗ್ ಪಿನ್​ಗಳನ್ನ ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಇವರೇ ನೋಡಿ ಆ ಪುಣ್ಯಾತ್ಮರು. ಹೀಗೆ ಪೊಲೀಸರ ಜೊತೆ ಕೈಗೆ ಕೋಳ ತೊಡಗಿಸಿಕೊಂಡು ಮುಖಕ್ಕೆ ಮಾಸ್ಕ್ ಹಾಕಿರೋರೆ ಇಬ್ಬರು ಡ್ರಗ್​ ಲಿಂಕ್​​​ನ ಕಿಂಗ್​ ಪಿನ್​ಗಳು..

ಇನ್ನು ಈಗಷ್ಟೆ ಮುಖದ ಮೇಲೆ ಮಿಸೆ ಗಡ್ಡ ಚಿಗುರಿ ಬೆಳದಂತೆ ಕಾಣ್ತಿದೆ. ಈತನ ಹೆಸರು ರಮೀಜ್​​​. ವಯಸ್ಸು 24. ಮೂಲತಃ ಕಾಸರಗೋಡು ಮೂಲದ ಯುವಕ. ಹುಟ್ಟಿದ್ದು ಬೆಳದಿದ್ದು ಎಲ್ಲವು ಕಾಸರಗೋಡಿನಲ್ಲೇ. ಆದ್ರೆ ಕಾಲೇಜು ಓದು ಮುಗಿಸಿ ಬಂದು ಸೆಟಲ್ ಆಗಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಸೆಟಲ್ ಆಗಬೇಕು ಅಂತಾ ನಿರ್ಧರಿಸಿದ್ದು ಡ್ರಗ್​ ಸಪ್ಲೈಧಾರಿ ಮೂಲಕ.

ಈ ನಮೀಜ್​ ಬೆಂಗಳೂರಿಗೆ ಬಂದು ಸೆಟಲ್ ಆದಮೇಲೆ ಹೇಗೋ ಮಾಡಿ ಇಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲೆ ಅಡ್ಡಾಡುತ್ತಿದ್ದ ನೈಜಿರಿಯನ್ ಪ್ರಜೆಗಳ ಸಂಪರ್ಕವನ್ನ ಬೆಳೆಸಿಕೊಂಡಿದ್ದ. ಅವರ ಸಂಪರ್ಕವನ್ನ ಬೆಳೆಸಿಕೊಂಡ ಮೇಲೆ ನೋಡಿ ಅಸಲಿ ಆಟ ಶುರು ಮಾಡಿಕೊಂಡಿದ್ದು. ಅದರ ಜೊತೆಯಲ್ಲಿ ಒಂದು ದೊಡ್ಡ ಕನಸನ್ನು ಕೂಡ ಕಾಣೋದಕ್ಕೆ ಶುರು ಮಾಡಿದ್ದ.

ಡ್ರಗ್​ ಮಾಫಿಯಾಗೆ ಎಂಟ್ರಿ ಕೊಟ್ಟಿದ್ದ ಈ ನಮೀಜ್​ಗೆ ಮೊದಲು ಪರಿಚಯವಾಗಿದ್ದೇ ನೈಜೀರಿಯಾ ಮೂಲದ ಸ್ಟಾನ್ಲೀ ಚಿಮಾ. ಇಬ್ಬರು ಸೇರಿಕೊಂಡು ಡ್ರಗ್​ ಮಾಫಿಯಾದಲ್ಲಿ ಕೆಲಸ ಮಾಡ್ತಿದ್ರು. ಮಂಗಳೂರು ಮತ್ತು ಕೇರಳ ಭಾಗದ ವಿದ್ಯಾರ್ಥಿಗಳು ಹಾಗೂ ಯುವಕ ಯುವತಿಯರನ್ನೇ ಟಾರ್ಗಟ್ ಮಾಡಿಕೊಂಡು ಅವರಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದರು. ಅದರಲ್ಲೂ ಪ್ರಮುಖವಾಗಿ ಸಿಂಥೆಟಿಕ್​ ಡ್ರಗ್ಸ್​ ಸರಬರಾಜು ಮಾಡ್ತಿದ್ರು ಅನ್ನೋದು ತನಿಖೆ ವೇಳೆ ತಿಳಿದು ಬಂದಿದೆ.

ಬೆಂಗಳೂರಲ್ಲಿ ಕುಳಿತೇ 14 ಕಡೆ ಡ್ರಗ್​ ಪೂರೈಕೆ
ಹೌದು. ಮಂಗಳೂರು ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಬೆಂಗಳೂರಿಗೆ ಬಂದು ನಮೀಜ್ ನನ್ನ ಎತ್ತಾಕ್ಕೊಂಡು ಹೋಗಿ ವಿಚಾರಣೆ ನಡೆಸಿದಾಗ ಆತ ಒಂದಷ್ಟು ವಿಚಾರಗಳನ್ನ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿ ನೈಜಿರಿಯಾದವರಿಂದ ಸಿಂಥಟಿಕ್ಸ್​​ ಡ್ರಗ್ ಪಡೆದುಕೊಂಡು ಅದನ್ನ ಮಂಗಳೂರು ಸೇರಿದಂತೆ ಕೇರಳದ 14 ಜಿಲ್ಲೆಗಳಿಗೆ ಸಪ್ಲೈ ಮಾಡುತ್ತಿದ್ದುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಆದ್ರೆ ಈತ ನೇರವಾಗಿ ಹೋಗಿ ಡ್ರಗ್ಸ್​ ಕೊಡುತ್ತಿರಲಿಲ್ಲ. ತನ್ನದೇ ಆದ ಒಂದು ನೆಟ್​​ವರ್ಕ್​ ಬೆಳಸಿಕೊಂಡಿದ್ದ ನಮೀಜ್​​. ಆ ನೆಟವರ್ಕ್​ ಮೂಲಕ ಡ್ರಗ್ ಸಪ್ಲೈ ಮಾಡುತ್ತಿದ್ದ ಅನ್ನೋದು ವಿಚಾರಣೆಯ ಸಂದರ್ಭದಲ್ಲಿ ತಿಳಿದುಬಂದಿದೆ.

ಕೇಳರದಲ್ಲಿ ಕಿಂಗ್ ಆಗಲು ಬಯಸಿದ್ದನಂತೆ
ನಮೀಜ್​​​, ಬೆಂಗಳೂರಿನಲ್ಲಿ ಇದ್ದುಕೊಂಡು ಕೇರಳದ 14 ಜಿಲ್ಲೆಗಳಿಗೆ ಸಿಂಥಟಿಕ್ಸ್​ ಡ್ರಗ್ ಸಪ್ಲೈ ಮಾಡುತ್ತಿದ್ದ ಅಂದ್ರೆ ಅದರಲ್ಲೇ ಅರ್ಥ ಮಾಡಿಕೊಳ್ಳಿ. ಅದ್ಯಾವ ರೀತಿ ತನ್ನ ನೆಟ್​ ವರ್ಕ್​  ಬೆಳೆಸಿಕೊಂಡಿದ್ದ ಅನ್ನೋದನ್ನ. ಅಲ್ಲದೇ ಕಳೆದ ಎರಡು ಮೂರು ವರ್ಷಗಳಿಂದ ಈ ಕೃತ್ಯ ಮಾಡಿಕೊಂಡು ಬಂದಿದ್ದಾನೆ ನಮೀಜ್​​​​. ಇನ್ನೊಂದು ವಿಚಾರ ಏನಂದ್ರೆ ಬೆಂಗಳೂರಿನಲ್ಲಿ ಬಹಳ ಮಂದಿ ನೈಜೀರಿಯನ್​ ಮೂಲದವರಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಈ ಅಕ್ರಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲ ಡ್ರಗ್ ಅನ್ನ ಯಾರೋ ಒಬ್ಬರ ಕೈಗೆ ಅಷ್ಟು ಸುಲಭವಾಗಿ ಕೊಡೋದಿಲ್ಲ. ಅವರಿಗೆ ನಂಬಿಕೆ ಬಂದ ಮೇಲೆ ಮಾತ್ರವೇ ಕೊಡೋದು. ಹೀಗೆ ನೈಜಿರಿಯನ್​ಗಳ ಬಳಿ ಡ್ರಗ್ಸ್​​ ಪಡೆದುಕೊಂಡು ಅದನ್ನ ಕೇರಳಕ್ಕೆ ಮತ್ತು ದಕ್ಷಿಣ ಕನ್ನಡ ಭಾಗದ ಕಡೆಗೆ ಪಾರ್ಸೆಲ್ ಕಳುಹಿಸುತ್ತಿದ್ದ. ಈ ಮೂಲಕ ಕೇರಳದಲ್ಲಿ ತನ್ನದೇ ಆದ ಸ್ಟ್ರಾಂಗ್​ ನೆಟ್​ವರ್ಕ್ ಮಾಡಿಕೊಂಡಿದ್ದ.

ಪ್ಯಾಬ್ಲೋ ಎಸ್ಕೋಬಾರ್ ಮಾದರಿ ಸಾಮ್ರಾಜ್ಯ ಕಟ್ಟಲು ಯೋಜನೆ
ನಮೀಜ್ ಒಂದು ಕನಸನ್ನ ಕಟ್ಟಿಕೊಂಡಿದ್ದ. ಅದು ಏನಂದ್ರೆ ತಾನು ಕೂಡ ಒಬ್ಬ ಪ್ಯಾಬ್ಲೋ ಎಸ್ಕೋಬಾರ್ ಥರಾ ಸಾಮ್ರಾಜ್ಯವನ್ನ ಆಳುವಂತಾಗಬೇಕು ಅನ್ನೋದು. ಯಾರು ಈ ಪ್ಯಾಬ್ಲೋ ಎಸ್ಕೊಬಾರ್ ಅಂದ್ರೆ, ಇವನು ಜಗತ್ತಿನ ಡ್ರಗ್ ಪೆಡ್ಲರ್​ಗಳಿಗೆ ಕಿಂಗ್. ಹಾಗಿತ್ತು ಪ್ಯಾಬ್ಲೋನ ಕೃತ್ಯ. ಕೊಲಂಬಿಯಾದಲ್ಲಿ ಈತನನ್ನು ಡ್ರಗ್ ಲಾರ್ಡ್, ಕಿಂಗ್ ಆಫ್ ಕೊಕೇನ್ ಎಂದೇ ಕರೆಯುತ್ತಾರೆ. ತನ್ನ ಚಾಣಾಕ್ಷತನದಿಂದ ಆಮೆರಿಕಾಗೆ ಮೊಟ್ಟ ಮೊದಲ ಬಾರಿ ಡ್ರಗ್ ಸಾಗಾಣಿಕೆಯ ದಾರಿ ಹಾಕಿಕೊಟ್ಟವನು. ಈತನ ಕೆಲಸಗಳು ಒಂದಕ್ಕಿಂತ ಒಂದು ಖತಾರ್ನಾಕ್ ಅಗಿದ್ದವು. ನಕಲಿ ಲಾಟರಿ ಟಿಕೆಟ್ ಹಂಚಿಕೆ, ಬೈಕ್ ಹಾಗೂ ಕಾರ್ ಕಳ್ಳತನ ಮತ್ತು ಶ್ರೀಮಂತರನ್ನು ಕಿಡ್ನಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಎಲ್ಲದಕ್ಕಿಂತ ಹೆಚ್ಚಾಗಿ ವಿಶ್ವದ ಇತಿಹಾಸದಲ್ಲೆ ದೊಡ್ಡ ಡ್ರಗ್ ಸಪ್ಲೈ ನೆಟ್ ವರ್ಕ್ ಸ್ಥಾಪಿಸಿದ ಕುಖ್ಯಾತಿ ಈತನಿಗಿದೆ. ಪ್ಯಾಬ್ಲೋ ಮಾಡಿರುವ ಖತರ್​ನಾಕ್​ ಕೆಲಸಗಳ ಬಗ್ಗೆ ಹೇಳೋಕೆ ಹೋದ್ರೆ ಸಮಯ ಸಾಕಾಗಲ್ಲ. ಇಡೀ ವಿಶ್ವವನ್ನೇ ನಡುಗಿಸಿದ ಡ್ರಗ್​ ಮಾಫಿಯಾ ಮೆಡಿಲಿನ್​​ ಡಾನ್​​ ಪೆಬ್ಲೊನಂತೆ ಈತ ಕೂಡ ಆಗಬೇಕು ಅಂತ ಅಂದುಕೊಂಡಿದ್ದ. 1980ರಿಂದ 1990ರಲ್ಲಿ ಡ್ರಗ್​​ ಜಾಲದಲ್ಲಿ ಈತನದ್ದೇ ಹವಾ ಇತ್ತು. ಬಹಳ ಚಿಕ್ಕ ವಯಸ್ಸಿನಲ್ಲೇ ಡ್ರಗ್​​​ ಮಾಫಿಯಾ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ. ಕೊಕೇನ್​​ ಉದ್ಯಮ ಬೆಳೀತಿದ್ದಂತೆ ಆತ ಕೂಡ ಚೆನ್ನಾಗಿ ದುಡ್ಡು ಮಾಡಲು ಆರಂಭಿಸಿದ. ಆತನಿಗೆ ಸುಮಾರು 25 ಬಿಲಿಯನ್ ಮೌಲ್ಯದ ಆಸ್ತಿ ಪಾಸ್ತಿ ಇತ್ತು. ಮನೆಯಲ್ಲಿಯೇ ಬಂಧಿಯಾಗಲೂ ಒಂದು ಜೈಲನ್ನ ಕೂಡ ನಿರ್ಮಿಸಿದ್ದ. ಅಲ್ಲದೆ ಮೃಗಾಲಯ, ಸೇರಿದಂತೆ ಬೇಕಾದ ಎಲ್ಲವನ್ನೂ ಮನೆಯಲ್ಲಿಯೇ ನಿರ್ಮಾಣ ಮಾಡುಕೊಂಡಿದ್ದ. ಹೀಗೆ ಸಾಮ್ರಾಜ್ಯವನ್ನ ಕಟ್ಟಿಕೊಂಡಿದ್ದ ಪಾಬ್ಲೋ ಎಸ್ಕೋಬಾರ್​​. ಹೇಗೆ ಮೆರಿದಿದ್ದನೋ ಹಾಗೇ ಅಂತ್ಯವಾಗಿದ್ದು ಕೂಡ ಒಂದು ರೋಚಕ ಕಥೆ.

ನೋಡಿ ಪಾಬ್ಲೋ ರೀತಿ ನಮೀಜ್ ಹೆಸರು ಮಾಡಬೇಕು ಅಂತಾ ಕನಸನ್ನ ಕಟ್ಟಿಕೊಂಡಿದ್ದ. ಅದು ಇಷ್ಟು ಚಿಕ್ಕ ವಯಸ್ಸಿಗೆ ನಮೀಜ್​ ಬೆಂಗಳೂರಿನಲ್ಲಿದ್ದುಕೊಂಡು ಕೇರಳ ರಾಜ್ಯದಲ್ಲಿ ಆಳ್ವಿಕೆಯನ್ನ ನಡೆಸೋದಕ್ಕೆ ಆರಂಭಿಸಿದ್ದ. ಆದ್ರೆ ಅದಕ್ಕು ಮುನ್ನವೇ ಮಂಗಳುರು ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದ.

ತಿಂಗಳಿಗೆ 30 ಲಕ್ಷ ಸಂಪಾದನೆ 
ರಮೀಜ್ ಗೆ ಕೇರಳದಲ್ಲಿ ಒಂದು ವಾರಕ್ಕೆ ಕನಿಷ್ಟ 500 ಗ್ರಾಮ್ ಎಂಡಿಎಂಎ, ಎಲ್ಎಸ್​ಡಿ ಡ್ರಗ್ಸ್ ಬೇಡಿಕೆಯಿತ್ತು. ರಮೀಜ್ ಸಿಂಥಟಿಕ್ ಡ್ರಗ್ಸ್ ಕೇರಳಕ್ಕೆ ಪೂರೈಕೆ ಮಾಡುತ್ತಿದ್ದ. ಎಂಡಿಎಂಎ ಡ್ರಗ್ಸ್ ಶ್ರೀಮಂತರು ಮಾತ್ರ ಬಳಸುವ ಡ್ರಗ್ಸ್ ಎಂದೇ ಹೇಳಲಾಗುತ್ತದೆ. ಯಾಕಂದ್ರೆ, ಒಂದು ಗ್ರಾಮ್ ಎಂಡಿಎಂಎ ಗೆ ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿ ಮೌಲ್ಯ ಇದೆ. ಹೀಗಾಗಿ 500 ಗ್ರಾಮ್ ಡ್ರಗ್ಸ್​ ವಾರ ಒಂದರಲ್ಲೇ ಪೂರೈಕೆ ಮಾಡುತ್ತಿದ್ದುದೇ ಆಗಿದ್ದರೆ, 6 ಸಾವಿರ ದಿಂದ 7 ಸಾವಿರದವರೆಗೆ ಬೆಲೆ ಇದೆ. ಇದನ್ನೇ ಲೆಕ್ಕ ಹಾಕಿದ್ರೂ ರಮೀಜ್​ನದ್ದು ವಾರಕ್ಕೆ ಬರೋಬ್ಬರಿ 30 ಲಕ್ಷದ ವಹಿವಾಟು. ಇದೇ ಕಾರಣಕ್ಕೆ ರಮೀಜ್, ಪಾಬ್ಲೋ ಎಸ್ಕೋಬಾರ್ ರೀತಿ ಡ್ರಗ್ಸ್ ಮಾಫಿಯಾದ ಡಾನ್ ಆಗಲು ಸ್ಕೆಚ್ ಹಾಕಿದ್ದ. ಪಾಬ್ಲೋ ಎಸ್ಕೋಬಾರ್ ರೀತಿಯಲ್ಲೇ ತನ್ನ ನೆಟ್ವರ್ಕನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸಿಕೊಂಡಿದ್ದ.

ಇದೆ ರೀತಿ ತನ್ನ ಸಾಮ್ರಾಜ್ಯವನ್ನು ಬೆಳೆಸುತ್ತಿದ್ದ ರಮೀಜ್ ಗೆ ಮಂಗಳೂರು ಪೊಲೀಸರು ಕಡಿವಾಣ ಹಾಕಿದ್ದಾರೆ. ಇದೀಗ ರಮೀಜ್ ಪೊಲೀಸರ ಕೈಕೋಳಕ್ಕೆ ಸಿಕ್ಕಿ ಅಂದರ್ ಆಗಿದ್ದಾನೆ. ಆತನ ಜಾಲ ಇನ್ನು ಎಲ್ಲೆಲ್ಲಿ ಹರಡಿದೆ ಅನ್ನೊದರ ಬಗ್ಗೆ ತನಿಖೆ ನಡೆಸ್ತಾ ಇದ್ದಾರೆ. ಒಟ್ಟಾರೆ ಇಂಡಿಯಾಗೆ ಕೊಕೇನ್ ಕಿಂಗ್ ಆಗಲು ಹೊರಟ್ಟಿದ್ದ ರಮೀಜ್ ಈಗ ಜೈಲು ಪಾಲಾಗಿ. ಕಂಬಿಗಳ ಹಿಂದೆ ಲಾಕ್ ಆಗಿಬಿಟ್ಟಿದ್ದಾನೆ.

The post ಪ್ಯಾಬ್ಲೋ ಎಸ್ಕೋಬಾರ್ ಮಾದರಿ ಸಾಮ್ರಾಜ್ಯ ಕಟ್ಟಲು ಕನಸು ಕಾಣ್ತಿದ್ದ ಡ್ರಗ್ಸ್​ ಕಿಂಗ್​ಪಿನ್​ ಈಗ ಕಂಬಿ ಹಿಂದೆ appeared first on News First Kannada.

Source: newsfirstlive.com

Source link