ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ -ಭಯಾನಕ ವಿಡಿಯೋ


ಪ್ಯಾರಾಸೈಲಿಂಗ್​​ನಲ್ಲಿ ಎಂಜಾಯ್ ಮಾಡ್ತಿದ್ದಾಗ ಹಗ್ಗ ತುಂಡಾಗಿ ಬಿದ್ದ ಪರಿಣಾಮ ದಂಪತಿ ಸಮುದ್ರಕ್ಕೆ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಗುಜರಾತ್ ಮೂಲದ ದಂಪತಿ ವೀಕೆಂಡ್ ಕಳೆಯಲು ದಿಯುಗೆ ಬಂದಿತ್ತು. ದಿಯುನಲ್ಲಿರುವ ನಗೋವಾ ಬೀಚ್​​ನಲ್ಲಿ ಪ್ಯಾರಾಸೈಲಿಂಗ್​ನಲ್ಲಿ ಹಾರಾಟ ಮಾಡಲು ನಿರ್ಧರಿಸಿದೆ. ಅದರಂತೆ ಗಾಳಿಯಲ್ಲಿ ಮೇಲೆ ಹೋಗುತ್ತಿದ್ದಾಗ ಹಗ್ಗ ಕಟ್ಟಾಗಿ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.

ಆದರೆ ದಂಪತಿ ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ದಂಪತಿಗೆ ಮಗ ಕೂಡ ಇದ್ದ. ಆದರೆ ಆತ ಪ್ಯಾರಾಸೈಲಿಂಗ್ ಏರಿರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಪ್ಯಾರಾಸೈಲಿಂಗ್ ಕಂಪನಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *