ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರವನ್ನು ಪ್ಯಾರಾ ಒಲಿಂಪಿಕ್ ಕ್ರೀಡೆಯಲ್ಲಿ ಪ್ರತಿನಿಧಿಸೋ ವಿಕಲಚೇತನ ಕ್ರೀಡಾಪಟುಗಳಿಗೆ ಲಾಕ್‍ಡೌನ್ ನಿಂದ ಮನೆಯಲ್ಲೇ ಕೂರುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಅವರಿಗೆ ಸಂಸ್ಥೆಯೊಂದು ಫುಡ್ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದೆ.

ರಾಜ್ಯ ಸರ್ಕಾರ ನೀಡಬೇಕಾಗಿದ್ದ ಪಿಂಚಿಣಿ ಹಣವನ್ನು ನೀಡಿಲ್ಲ. ರಾಜ್ಯದ ಹೆಸರನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಿರೋ ಇವರಿಗೆ ಪ್ರೋತ್ಸಾಹ ಹಣ ಸಿಕ್ಕಿಲ್ಲ. ಹಣವಿಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ. ಇತಂಹ ಸಮಯಲ್ಲಿ ವಿಜಯನಗರದ ಮ್ಯಾಟ್ರಿಕ್ಸ್ ಫಿಟ್ನೇಸ್ನ ಮಾಲೀಕರಾದ ನವೀನ್ ಮತ್ತು ಎನರ್ಜಿಟಿಕ್ ಗ್ರೀನ್ ಸಂಸ್ಥೆಯ ಅನೂಪ ರೆಡ್ಡಿ ಅವ್ರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಪಟುಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ಮ್ಯಾಟ್ರಿಕ್ಸ್ ಫಿಟ್ನೇಸ್ನ, ಎನರ್ಜಿಟಿಕ್ ಗ್ರೀನ್ ಸಂಸ್ಥೆಯ ಮಾಲೀಕರು ಸೇರಿಕೊಂಡು ಸಮಾಜದ ಕಡುವಬಡವರಿಗೆ ಇಲ್ಲಿವರೆಗೆ 1000ಕ್ಕೂ ಹೆಚ್ಚು ಆಹಾರದ ಕಿಟ್ಗಳನ್ನ ವಿತರಣೆ ಮಾಡಿದ್ದಾರೆ.  ಪ್ಯಾರಾ ಒಲಂಪಿಕ್ ಕ್ರೀಡಾಪಟುಗಳಿಗೂ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಇತರ ವರ್ಗದವರಿಗೆ ನೀಡಿದಂತೆ ವಿಶೇಪ ಪ್ಯಾಕೇಜ್ ಅನ್ನ ವಿಕಲಾಂಗಚೇತನರಿಗೂ ವಿಶೇಷ ಪ್ಯಾಕೇಜ್ ನೀಡಿಬೇಕು ಅಂತಾ ವಿಕಲಚೇತನ ಕ್ರೀಡಾಪಟುಗಳು ಒತ್ತಾಯ ಮಾಡಿದ್ದಾರೆ. ಜೊತೆಗೆ ಇತಂಹ ಸಮಯದಲ್ಲಿ ನಿಮ್ಮ ನಿಮ್ಮ ಕೈಲಾದ ಸಹಾಯವನ್ನ ಮಾಡಿ ಎಂದು ನವೀನ್ ಹಾಗೂ ಅನೂಪ ರೆಡ್ಡಿ ಹೇಳಿದ್ದಾರೆ.

The post ಪ್ಯಾರಾ ಒಲಂಪಿಕ್ ಕ್ರೀಡಾಪಟುಗಳಿಗೆ ಆಹಾರ ಕಿಟ್ ವಿತರಣೆ appeared first on Public TV.

Source: publictv.in

Source link