ಪ್ಯಾರಿಸ್​ನಲ್ಲಿ ಜ್ಯೂ.ಎನ್​ಟಿಆರ್​; ಕುಟುಂಬ ಸಮೇತ ಫ್ರಾನ್ಸ್​ಗೆ ತೆರಳಿದ ಸ್ಟಾರ್​ ನಟ | Jr Ntr Visited Paris With His Family ahead of RRR Release


ಪ್ಯಾರಿಸ್​ನಲ್ಲಿ ಜ್ಯೂ.ಎನ್​ಟಿಆರ್​; ಕುಟುಂಬ ಸಮೇತ ಫ್ರಾನ್ಸ್​ಗೆ ತೆರಳಿದ ಸ್ಟಾರ್​ ನಟ

ಜ್ಯೂ.ಎನ್​ಟಿಆರ್​

ಜ್ಯೂ. ಎನ್​ಟಿಆರ್​ ‘ಆರ್​ಆರ್​ಆರ್’ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿ ಕೊಂಚ ರಿಲೀಫ್​ ಆಗಿದ್ದಾರೆ. ಇತ್ತೀಚೆಗೆ ಅವರು ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಶೀಘ್ರವೇ ಅವರು ‘ಆರ್​ಆರ್​ಆರ್​’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಜ್ಯೂ.ಎನ್​ಟಿಆರ್​ ಕುಟುಂಬ ಸಮೇತ ಫ್ರಾನ್ಸ್​ನ ಪ್ಯಾರಿಸ್​ಗೆ​ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.

ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ್ದಾರೆ.  ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ಜ್ಯೂ.ಎನ್​ಟಿಆರ್​ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಕಾರಣಕ್ಕೆ ಉಳಿದ ಎಲ್ಲಾ ಪ್ರಾಜೆಕ್ಟ್​ಗಳ ಕೆಲಸವನ್ನು ಮುಂದೂಡುವಂತೆ ಅವರು ಸೂಚಿಸಿದ್ದಾರೆ. ಪ್ರಚಾರದ ಮಧ್ಯೆಯೂ ಅವರು ಪ್ಯಾರಿಸ್​ಗೆ ತೆರಳಿದ್ದಾರೆ. ಪತ್ನಿ ನಂದಮೂರಿ ಪ್ರಣತಿ, ಮಕ್ಕಳಾದ ಅಭಯ್​ ರಾಮ್​ ಮತ್ತ್ತು ಭಾರ್ಗವ್​ ರಾಮ್​ ಕೂಡ ಟ್ರಿಪ್​ಗೆ ತೆರಳಿದ್ದಾರೆ.

ಕೊವಿಡ್ ಕಾಣಿಸಿಕೊಂಡ ನಂತರ ಜ್ಯೂ.ಎನ್​ಟಿಆರ್​ ಅವರು ಕುಟುಂಬದ ಜತೆ ಎಲ್ಲಿಯೂ ಹೊರಗೆ ತೆರಳಿರಲಿಲ್ಲ. ಕೊವಿಡ್​ ಎರಡನೇ ಅಲೆ ಈಗ ಕಡಿಮೆ ಆಗಿದೆ. ಈ ಕಾರಣಕ್ಕೆ ಅವರು ಕುಟುಂಬದ ಜತೆ ಪ್ಯಾರಿಸ್​ ತೆರಳಿದ್ದಾರೆ. ಎಸ್​.ಎಸ್​. ರಾಜಮೌಳಿ ಅವರು ಶೀಘ್ರವೇ ಆರ್​ಆರ್​ಆರ್​ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

ಜ್ಯೂ.ಎನ್​ಟಿಆರ್​ ಅವರು ಜಾಹೀರಾತು ಶೂಟಿಂಗ್​ಗಾಗಿ ಮುಂಬೈಗೆ ತೆರಳಬೇಕಿತ್ತು. ಆದರೆ, ಆ ಕೆಲಸವನ್ನು ಸದ್ಯಕ್ಕೆ ಹೋಲ್ಡ್​ನಲ್ಲಿ ಇರಿಸಿದ್ದಾರೆ. ಇನ್ನು, ಕೊರಟಾಲ ಶಿವ ಜತೆ ಜ್ಯೂ.ಎನ್​ಟಿಆರ್​ ಸಿನಿಮಾ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ಈ ಸಿನಿಮಾ ಮುಹೂರ್ತ ನಡೆಯಬೇಕಿತ್ತು. ಅದನ್ನು ಕೂಡ ಜ್ಯೂ.ಎನ್​ಟಿಆರ್​ 2021ಕ್ಕೆ ಪೋಸ್ಟ್​ಪೋನ್​ ಮಾಡಿದ್ದಾರೆ.

ನೈಜ ಘಟನೆ ಆಧರಿಸಿ ‘ಆರ್​ಆರ್​ಆರ್​’ ಸಿನಿಮಾ ತಯಾರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ‘ದೋಸ್ತಿ..’ ಹಾಡು ಬಿಡುಗಡೆ ಆಗಿತ್ತು. ಇತ್ತೀಚೆಗೆ ರಿಲೀಸ್​ ಆದ  ಎರಡನೇ ಗೀತೆ ‘ಹಳ್ಳಿ ನಾಟು..’ ಎಲ್ಲೆಲ್ಲೂ ರಾರಾಜಿಸುತ್ತಿದೆ. ಈ ಹಾಡಿನಿಂದಾಗಿ ಚಿತ್ರದ ಮೇಲಿನ ಕ್ರೇಜ್​ ಹೆಚ್ಚುವಂತಾಗಿದೆ. 2022ರ ಜ.7ರಂದು ಈ ಸಿನಿಮಾ ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆ ದಿನಕ್ಕಾಗಿ ಸಿನಿಪ್ರಿಯರು ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್​ಟಿಆರ್​ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *