ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಗಲಾಟೆ ಹಿಂದಿನ ಮಾಸ್ಟರ್ ಮೈಂಡ್‌ಗಾಗಿ ಶೋಧ, ವಸೀಂ ಮೊಬಾಲಿಕ್ ಪಠಾಣ್‌ ಡೆಡ್‌ಲೈನ್ ಅಂತ್ಯ | Hubballi dharwad violence case Wasim mubalik Pathan dead line ends today


ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಗಲಾಟೆ ಹಿಂದಿನ ಮಾಸ್ಟರ್ ಮೈಂಡ್‌ಗಾಗಿ ಶೋಧ, ವಸೀಂ ಮೊಬಾಲಿಕ್ ಪಠಾಣ್‌ ಡೆಡ್‌ಲೈನ್ ಅಂತ್ಯ

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಗಲಾಟೆ ಹಿಂದಿನ ಮಾಸ್ಟರ್ ಮೈಂಡ್‌ಗಾಗಿ ಶೋಧ, ವಸೀಂ ಮೊಬಾಲಿಕ್ ಪಠಾಣ್‌ ಡೆಡ್‌ಲೈನ್ ಅಂತ್ಯ

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿ ಗಲಭೆಯ ದಿನದ ಒಂದೊಂದೇ ವಿಡಿಯೋಗಳು, ಗಲಭೆಯ ಹಿಂದಿನ ಒಂದೊಂದೇ ಷಡ್ಯಂತ್ರಗಳು ಖಾಕಿ ತನಿಖೆಯಲ್ಲಿ ಬಯಲಾಗ್ತಿವೆ. ಇವತ್ತು ಹೊರ ಬಂದಿರೋ ಈ ತಲೆ ಕಡೀಬೇಕು ಅನ್ನೋ ಘೋಷಣೆ ಕೂಗೋ ವಿಡಿಯೋ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ದಂಗೆ ಎಬ್ಬಿಸೋಕೆ ಗುಂಪು ಸೇರಿದ್ದ ಮಂದಿ ಭಯಾನಕ ಘೋಷಣೆಗಳನ್ನ ಕೂಗಿರೋದು, ದಳ್ಳುರಿಗೆ ಪ್ರಚೋದನೆ ನೀಡಿರೋದು ಬಟಾ ಬಯಲಾಗಿದೆ. ಒಂದೆಡೆ ಸ್ಪೋಟಕ ವಿಡಿಯೋಗಳು ಹೊರ ಬೀಳ್ತಾ ಇದ್ರೆ. ಅಂದು ಘೋಷಣೆ ಕೂಗಿದವರ ಪಕ್ಕದಲ್ಲೇ ಇದ್ದ ಮೌಲ್ವಿ ವಸೀಂ ಮೊಬಲಿಕ್ ಪಠಾಣ್ ಹೈದರಾಬಾದ್ಗೆ ಎಸ್ಕೇಪ್ ಆಗಿದ್ದಾನೆ. ಸದ್ಯ ಗಲಾಟೆ ಹಿಂದಿನ ಮಾಸ್ಟರ್ ಮೈಂಡ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು ನಾಪತ್ತೆಯಾದ ವಸೀಂ ಮೊಬಾಲಿಕ್ ಪಠಾಣ್‌ಗೆ ಶರಣಾಗುವಂತೆ ಡೆಡ್‌ಲೈನ್ ಕೊಟ್ಟಿದೆ.

3 ದಿನದಿಂದ ನಾಪತ್ತೆಯಾಗಿರುವ ವಸೀಂ ಮೊಬಾಲಿಕ್ ಪಠಾಣ್‌ಗೆ ನೀಡಿರುವ ಡೆಡ್‌ಲೈನ್ ಇಂದಿಗೆ ಅಂತ್ಯಗೊಂಡಿದೆ. ಹಳೇ ಹುಬ್ಬಳ್ಳಿಯಲ್ಲಿ ಗಲಾಟೆಗೆ ಪ್ರಚೋದನೆ ನೀಡಿದ್ದ ಪಠಾಣ್ ಹುಬ್ಬಳ್ಳಿ ಗಲಾಟೆ ಬಳಿಕ ನಾಪತ್ತೆಯಾಗಿದ್ದರು. ವಸೀಂಗಾಗಿ ಶಿಗ್ಗಾಂವಿ, ಸವಣೂರು, ಬೆಳಗಾವಿಯಲ್ಲಿ ಶೋಧ ನಡೆಸಲಾಗಿತ್ತು. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಶರಣಾಗುವಂತೆ ಸೂಚಿಸಲಾಗಿತ್ತು. ಶರಣಾಗದಿದ್ದರೆ ಮುಂದೆ ನಡೆಯುವುದಕ್ಕೆ ಆತನೇ ಜವಾಬ್ದಾರಿ ಎಂದು ವಸೀಂ, ಆತನ ಕುಟುಂಬಕ್ಕೆ ಪೊಲೀಸರು ಎಚ್ಚರಿಕೆ ನೀಡಿದ್ದರು.

ಗಲಭೆಗೆ ಪ್ರಚೋದನೆ.. ಮೌಲ್ವಿ ಮಸಲತ್ತು ಪಕ್ಕಾ?
ಗಲಭೆ ಹೊತ್ತಲ್ಲಿ ಮೌಲ್ವಿ ವಸೀಂ ಪಠಾಣ್ ಕಮಿಷನರ್ ಕಾರಿನ ಮೇಲೆಯೇ ಹತ್ತಿ ರೊಚ್ಚಿಗೆದ್ದು ಮಾತನಾಡಿದ್ದರು. ಹುಬ್ಬಳ್ಳಿ ಹಿಂಸಾಚಾರದ ಮಾಸ್ಟರ್ ಮೈಂಡ್ಗಳಲ್ಲಿ ಈತನೂ ಒಬ್ಬ ಅನ್ನೋ ಅನುಮಾನ ಪೊಲೀಸರಿಗೆ ಬಂದಿತ್ತು. ಇದೀಗ ಇದೇ ಮೌಲ್ವಿ ಪ್ರಚೋದನೆ ನೀಡಿರೋದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಂತಾಗಿದೆ. ಯಾಕಂದ್ರೆ, ತಲೆ ಕಡಿಯಬೇಕು.. ತಲೆ ಕಡಿಯಬೇಕು ಅಂತಾ ಘೋಷಣೆ ಕೂಗಿದವರ ಪಕ್ಕದಲ್ಲೇ ಮೌಲ್ವಿ ವಸೀಂ ಪಠಾಣ್ ಇದ್ದ.

ಸದ್ಯ ಹುಬ್ಬಳ್ಳಿ ಪೊಲೀಸರು ಗಲಭೆಗೆ ಪ್ರಚೋದನೆ ನೀಡಿದ್ದ ಮೌಲ್ವಿ ಬೆನ್ನು ಬಿದ್ದಿದ್ದಾರೆ. ಆದ್ರೆ, ಈಗಿನ ಮಾಹಿತಿ ಪ್ರಕಾರ ಈತ ಹೈದರಾಬಾದ್ಗೆ ಎಸ್ಕೇಪ್ ಆಗಿದ್ದಾನೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮೌಲ್ವಿ ಮಾತ್ರವಲ್ಲ ಆತನ ಜೊತೆಗೆ ದಾಂದಲೆ ಮಾಡಿದ್ದ ಇನ್ನೂ 8 ಮಂದಿ ಎಸ್ಕೇಪ್ ಆಗಿದ್ದಾರಂತೆ. ಹೀಗಾಗೇ ಪೊಲೀಸರು ಎಲ್ಲೇ ಇದ್ರೂ ಬಂದು ಸರೆಂಡರ್ ಆಗುವಂತೆ ಮೌಲ್ವಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

TV9 Kannada


Leave a Reply

Your email address will not be published.