ಸ್ಯಾಂಡಲ್​ವುಡ್​ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ ನಂತರ ಪಕ್ಕದ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲೂ ಮಿಂಚಿದ ನಟಿ ಕನ್ನಡತಿ ಪ್ರಣೀತಾ ಸುಭಾಷ್​. ಕಳೆದ ವರ್ಷ ತಮ್ಮ ಮೊದಲ ಬಾಲಿವುಡ್​ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿ ಸರ್ಪ್ರೈಸ್​ ಕೂಡ ನೀಡಿದ್ದರು. ಇದೀಗ ಅದೇ ಬಾಲಿವುಡ್​ ಸಿನಿಮಾ, ಬರೋಬ್ಬರಿ ಒಂದು ವರ್ಷಗಳ ಕಾಲ ಥಿಯೇಟರ್​ಗಳಿಗಾಗಿ ಕಾದು ಫೈನಲೀ OTT ಯಲ್ಲಿ ರಿಲೀಸ್​ ಆಗ್ತಿದೆ.

ಹೌದು.. ನಟಿ ಪ್ರಣೀತಾ ಸುಭಾಷ್​ ಡೆಬ್ಯೂ ಬಾಲಿವುಡ್​ ಸಿನಿಮಾ ಹಂಗಾಮಾ-2 ಸದ್ಯ OTTಗೆ ಲಗ್ಗೆ ಇಡೋಕೆ ಸಜ್ಜಾಗ್ತಿದೆ. 2003ರಲ್ಲಿ ತೆರೆ ಕಂಡ ಅಕ್ಷಯ್​ ಖನ್ನಾ ಅಭಿನಯದ ಹಂಗಾಮಾ ಸಿನಿಮಾದ ಸೀಕ್ವೆಲ್​ ಇದಾಗಿದೆ. ನಿರ್ದೇಶಕ ಪ್ರಿಯದರ್ಶನ್​ ಹಂಗಾಮಾ ಎರಡು ಭಾಗಗಳಿಗೂ ಆ್ಯಕ್ಷನ್​ ಕಟ್​ ಹೇಳಿದ್ದು, ರತನ್​ ಜೈನ್ ಹಾಗೂ ಗಣೇಶ್​ ಜೈನ್​​ ಬಂಡವಾಳ ಹೂಡಿದ್ದಾರೆ.

ಸದ್ಯ ನಿರ್ಮಾಪಕ ರತನ್​ ಜೈನ್​ ಹಂಗಾಮಾ -2 OTTಯಲ್ಲಿ ರಿಲೀಸ್​ ಆಗ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಒಂದು ವರ್ಷಗಳ ಕಾಲ ಥಿಯೇಟರ್​ಗಳು ತೆರೆಯುತ್ತವೆ ಅಂತ ಕಾದಿರೋದಾಗಿ ತಿಳಿಸಿದ್ದಾರೆ. ಇತ್ತೀಚೆಗೆ OTT ಯಲ್ಲಿ ಬಂದಿರುವ ಸಿನಿಮಾಗಳು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ ಅನ್ನೋ ಸುದ್ದಿ ಇದ್ದು, ಹಂಗಾಮಾ-2 ಸಿನಿಮಾವನ್ನ OTTಯಲ್ಲಿ ರಿಲೀಸ್​ ಮಾಡಿದ ಬಳಿಕ ಮತ್ತೆ ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡುವ ಯಾವುದೇ ಪ್ಲ್ಯಾನ್​ ರತನ್​ ಜೈನ್​​ಗೆ ಇಲ್ಲ ಅಂತಾನೂ ಹೇಳಿದ್ದಾರೆ.

ಪ್ರಣೀತಾ ಸುಭಾಷ್​ ಜೊತೆ ನಟಿ ಶಿಲ್ಪಾ ಶೆಟ್ಟಿ, ಪರೇಶ್​ ರಾವಲ್​, ಜಾನಿ ಲೆವರ್​, ಮೀಝಾನ್​ ಜಾಫ್ರಿ, ರಾಜ್​ಪಾಲ್​ ಯಾದವ್​ ಬಣ್ಣ ಹಚ್ಚಿದ್ದಾರೆ. ಹಂಗಾಮಾ ಮೊದಲ ಭಾಗದ ನಾಯಕ ನಟ ಅಕ್ಷಯ್​ ಖನ್ನಾ ಸೀಕ್ವೆಲ್​ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ವಿಶೇಷ ಬರಹ: ರಕ್ಷಿತಾ- ಫಿಲ್ಮ್​​ ಬ್ಯೂರೋ

The post ಪ್ರಣೀತಾ ಸುಭಾಷ್​ ಡೆಬ್ಯೂ ಬಾಲಿವುಡ್​ ಸಿನಿಮಾ OTT ತೆಕ್ಕೆಗೆ appeared first on News First Kannada.

Source: newsfirstlive.com

Source link