ಪ್ರತಾಪ್​ ಸಿಂಹಗೆ ಇಮ್ಮೆಚುರ್ಡ್ ರಾಜಕಾರಣಿ ಅಂದಿದ್ಯಾಕೆ ಸಿದ್ದರಾಮಯ್ಯ?


ಬೆಂಗಳೂರು: ಬಿಟ್​ ಕಾಯಿನ್​ ಪ್ರಕರಣ ಸಂಬಂಧಿಸಿದಂತೆ ಸಿದ್ದರಾಮಯ್ಯನಯನವರಿಗೆ ಇಡಿ ನೋಟಿಸ್​ ಕಳುಹಿಸಬೇಕು ಎಂಬ ಪ್ರತಾಪ್​ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಪ್ರತಾಪ್​ ಸಿಂಹ ಇಮ್ಮೆಚುರ್ಡ್​ ರಾಜಕಾರಣಿ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರ ಬಗ್ಗೆ ನಾನು ಮಾತಾಡಲ್ಲ. ಪ್ರತಾಪ್ ಸಿಂಹ ಅವ್ರಿಗೆ ಪ್ರಜ್ಞಾವಂತಿಕೆ ಇಲ್ಲ. ಅವರು ಇಮ್ಮೆಚ್ಯುರ್ಡ್ ಪೊಲಿಟಿಶಿಯನ್, ಅವರಿಗಿನ್ನು ಮೆಚ್ಯುರಿಟಿ ಬರಬೇಕು ಎಂದು ವ್ಯಂಗ್ಯವಾಡಿದ್ದಾರೆ.

2016ರಲ್ಲಿ ನಾವು ಅಧಿಕಾರದಲ್ಲಿ ಇದ್ದಾಗ ಈ ಬಿಟ್​ ಕಾಯಿನ್​ ಕೇಸ್​ ಇರಲಿಲ್ಲ. ಪ್ರಕರಣ ದಾಖಲಾದಾಗ ಹೋಂ ಮಿನಿಸ್ಟರ್ ಆಗಿದ್ದಿದ್ದು ಬಸವರಾಜ್ ಬೊಮ್ಮಾಯಿ‌. ಶ್ರೀಕಿಯನ್ನು ಅರೆಸ್ಟ್ ಮಾಡಿದಾಗ ಹೋಂ ಮಿನಿಸ್ಟರ್ ಆಗಿದ್ದು ಬೊಮ್ಮಾಯಿ‌. ಶ್ರೀಕಿಗೆ ಬೇಲ್ ಸಿಕ್ಕಾಗ ಹೋಂ ಮಿನಿಸ್ಟರ್ ಆಗಿದ್ದಿದ್ದು ಬೊಮ್ಮಾಯಿ‌ ಅವ್ರೇ ಹಾಗಾಗಿ ಇದಕ್ಕೆ ಉತ್ತರ ಕೊಡಬೇಕಾದೋರು ಮಾನ್ಯ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅಬರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

The post ಪ್ರತಾಪ್​ ಸಿಂಹಗೆ ಇಮ್ಮೆಚುರ್ಡ್ ರಾಜಕಾರಣಿ ಅಂದಿದ್ಯಾಕೆ ಸಿದ್ದರಾಮಯ್ಯ? appeared first on News First Kannada.

News First Live Kannada


Leave a Reply

Your email address will not be published.