ಕನಸಲ್ಲಿ ರೇಪ್ ಮಾಡಲು ಬಂದವನಾರು? ನಿದ್ರೆಯಲ್ಲೂ ಕಾಡಿತಾ ಮಾಂತ್ರಿಕನ ಮ್ಯಾಜಿಕ್
ಕನಸು.. ಯಾರಿಗೆ ಬೀಳೋದಿಲ್ಲ ಹೇಳಿ. ಎಲ್ರಿಗೂ ಬೀಳುತ್ತೆ. ಎಲ್ರೂ ಕನಸು ಕಾಣೋರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಕನಸು. ಕೆಲವ್ರಿಗೆ ಭವಿಷ್ಯದ ಬಗ್ಗೆ ಕನಸು, ಮತ್ತೆ ಕೆಲವ್ರಿಗೆ ಪ್ರೀತಿಯ ಮಧುರ ಕನಸು, ಮತ್ತೂ ಹಲವ್ರಿಗೆ ಮುಂದಾಗೋ ಅನಾಹುತದ ಕನಸು.. ಇನ್ನೂ ಕೆಲವ್ರಿಗೆ ಅರ್ಥವೇ ಆಗದ ಕನಸು.. ಒಟ್ನಲ್ಲಿ ಎಲ್ರಿಗೂ ಕನಸಂತೂ ಬೀಳುತ್ತೆ. ಆದ್ರೆ ಇವತ್ತಿನ ನಮ್ಮ ಸ್ಟೋರಿಯಲ್ಲಿ ಅದೇ ಕನಸು ಒಬ್ಬಾಕೆಯನ್ನ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರೋ ಹಾಗ್‌ ಮಾಡ್ಬಿಟ್ಟಿದೆ. ಅರೆ.. ಕನಸಿಗೂ.. ಪೊಲೀಸ್‌ ಸ್ಟೇಷನ್‌ಗೂ ಏನ್‌ ಸಂಬಂಧ ಅಂದ್ರಾ..?

ಕತ್ತಲಾಗ್ತಿದ್ದಂತೆ ಕಾಡೋ ಮಂಚ.. ಎಳೆಯೋ ಕಣ್ರೆಪ್ಪೆ.. ಒಮ್ಮೆ ಮಂಚಕ್ಕೆ ಹೋಗಿ ಬಿದ್ರೆ ಎಷ್ಟೋ ಮಂದಿ ಈ ಲೋಕದ ಜೊತೆ ಕನೆಕ್ಷನ್​​ ಕಳ್ಕೊಂಡ್‌ ಬಿಡ್ತಾರೆ. ಬೆಡ್ಡು ಬಿಗಿದಪ್ಪಿಕೊಳ್ತಿದ್ದಂತೆ ಕನಸೆಂಬ ಮಾಯಾಲೋಕ ತೆರೆದುಕೊಂಡು ಬಿಡುತ್ತೆ. ಹೊಸ ಲೋಕದಲ್ಲಿ ವಿಹಾರ ಶುರುವಾಗುತ್ತೆ.. ರಿಯಲ್ಲಾಗೇ ಏನೋ ನಡೀತಿದೆ ಅನ್ನುವಂತೆ ಘಟನೆಗಳು ನಡೀತಾ ಹೋಗುತ್ವೆ..

ಎಂತೆಂಥಾದ್ದೋ ಕನಸುಗಳು.. ಕೆಲವ್ರಿಗೆ ಪ್ರೀತಿಯ ಮಧುರ ಕನಸು.. ಮನಸೂರೆಗೊಂಡ ಪ್ರಿಯತಮೆಯ ಕನಸು.. ಕೆಲವ್ರಿಗೆ ಭವಿಷ್ಯದಲ್ಲಿ ಜಗತ್‌ ಶ್ರೀಮಂತನಾದ ಕನಸು.. ಮದುವೆಯ ಕನಸು.. ಮಕ್ಕಳ ಕನಸು.. ಹೀಗೆ ಏನೇನೋ ಕನಸುಗಳು.. ಕೆಲವ್ರಿಗಂತೂ ಬೆಳಗ್ಗೆದ್ದು ಕೂತಾಗ ಕನಸಲ್ಲಿ ಬಂದವ್ರು ಯಾರು, ಯಾಕ್‌ ಬಂದ್ರು, ಏನಂದ್ರು.. ಅವ್ರಿಗೂ ನಮಗೂ ಏನ್‌ ಸಂಬಂಧ, ಎಲ್ಲಿ ನೋಡಿದ್ವಿ.. ಹೀಗೆ ಏನಂದ್ರೆ ಏನೂ ಅರ್ಥವಾಗೋದಿಲ್ಲ.. ಅಂತಹ ಕನಸು ಬೀಳೋದೂ ಇದೆ.. ಇವತ್ತಿನ ನಮ್ಮ ಎಪಿಸೋಡ್‌ ಕೂಡ ಹೀಗೆ ಕಾಡಿದ ಕನಸನ್ನ ಬೆನ್ನತ್ತಿ.

ಈ ಸ್ಟೋರಿ ದೂರದ ಬಿಹಾರ ರಾಜ್ಯದ್ದು. ಇಲ್ಲಿನ ಔರಂಗಾಬಾದ್‌ ಜಿಲ್ಲೆಯ ಸ್ಟೋರಿ ಇದು. ಗೃಹಿಣಿ ಈಕೆ. ತಾನಾಯ್ತು, ತನ್ನ ಕುಟುಂಬ ಆಯ್ತು ಅಂತ ಇದ್ದವಳು. ಆದ್ರೆ ಇತ್ತೀಚೆಗೆ ಆಕೆಗೆ ಮಲಗೋಕೆ ಅಂತ ರಾತ್ರಿ ಬೆಡ್‌ ಮೇಲೆ ತಲೆಯಿಟ್ರೆ ಸಾಕು ಕನಸು ಬೀಳೋಕೆ ಶುರುವಾಗ್ತಿತ್ತು. ಅದೂ ಎಂಥಾ ಕನಸು ಗೊತ್ತಾ.. ಆ ಕನಸು ಬಿತ್ತು ಅಂದ್ರೆ ಸಾಕು ಮಹಿಳೆ ಮಧ್ಯರಾತ್ರಿಯಲ್ಲೂ ಧಡ್‌ ಅಂತ ಎದ್ದು ಕೂರ್ತಿದ್ಲು. ಮೈ ಬೆವರೋಕೆ ಶುರುವಾಗ್ತಿತ್ತು. ಗಂಟಲಲ್ಲಿನ ದ್ರವ ಒಣಗ್ತಿತ್ತು. ಏನ್‌ ಮಾಡೋಕೂ ಆಗದ ಪರಿಸ್ಥಿತಿ. ರಾತ್ರಿಯ ಕರಾಳತೆ ಮತ್ತಷ್ಟು ಭಯ ಹುಟ್ಟಿಸ್ತಿತ್ತು. ಕನಸಲ್ಲಿ ನಡೀತಾ ಇದ್ದಿದ್ದನ್ನ ನೆನೆಸಿಕೊಳ್ತಿದ್ದಂತೆ ಮೈಪೂರ್ತಿ ನಡುಕ. ಮಧ್ಯರಾತ್ರಿಯ ನೀರವ ಮೌನದಲ್ಲಿ ಎದೆ ಬಡಿತವೇ ಕೇಳೋವಷ್ಟು ಆತಂಕ. ಯಾಕಂದ್ರೆ ಬೀಳ್ತಾ ಇದ್ದ ಕನಸೇ ಅಂಥಾದ್ದು. ಅದು ಕನಸೇ ಆಗಿರ್ಬಹುದು. ಆದ್ರೆ ಪದೇ ಪದೇ ಕಾಡ್ತಿತ್ತು. ಪ್ರತಿದಿನ ರಾತ್ರಿ ಮಲಗಿದ್ದ ವೇಳೆ ಅದೇ ಕನಸು ಬೀಳ್ತಿತ್ತು.

ಮಹಿಳೆ ನರಕಯಾತನೆ ಅನುಭವಿಸೋಕೆ ಶುರು ಮಾಡಿದ್ಲು. ಈ ಕನಸು ನೈಟ್‌ಮೇರ್‌ ಆಗ್ಬಿಟ್ಟಿತ್ತು. ಕೆಟ್ಟ ಕನಸಾಗಿಬಿಟ್ಟಿತ್ತು. ಯಾಕಾದ್ರೂ ರಾತ್ರಿಯಾಗುತ್ತೋ ಅನ್ನೋ ಭಯ ಕಾಡೋಕೆ ಶುರುವಾಗಿತ್ತು. ನಿದ್ದೆ ಅಂದ್ರೇನೇ ಎದೆಯಲ್ಲಿ ಅವಲಕ್ಕಿ ಕುಟ್ಟೋ ಸೌಂಡ್‌ ಆಗ್ತಿತ್ತು. ಕೊನೆಗೆ ಕನಸಿಂದ ಬಚಾವಾಗ್ಬೇಕು ಅನ್ನೋ ಕಾರಣಕ್ಕೆ ಆ ಮಹಿಳೆ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಏರಿಬಿಡ್ತಾಳೆ.

ಕನಸಿಂದ ಕಾಪಾಡಿ ಕಾಪಾಡಿ ಅಂತ ಈಕೆ ಹೋಗಿದ್ದೆಲ್ಲಿ ಗೊತ್ತಾ..?
ರಕ್ಷಣೆ ಕೋರಿ, ನ್ಯಾಯ ಕೋರಿ ಸ್ಟೇಷನ್‌ ಮೆಟ್ಟಿಲೇರಿದ ಮಹಿಳೆ!

ವಿಚಿತ್ರ ಅನ್ಸುತ್ತಲ್ವಾ.. ಮಲಗೋವಾಗ ಬೀಳೋ ಕನಸಿಗೆ ಪೊಲೀಸರೇನು ಮಾಡ್ತಾರೆ..? ಪೊಲೀಸ್ರು ಏನ್‌ ರಕ್ಷಣೆ ನೀಡ್ತಾರೆ..? ಹೇಗ್‌ ರಕ್ಷಣೆ ನೀಡ್ತಾರೆ..? ಕುಡ್ವಾ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದಾಗ ಖುದ್ದು ಪೊಲೀಸರೇ ದಂಗಾಗಿ ಹೋಗಿದ್ರು. ಯಾಕಂದ್ರೆ ಇಂಥಾ ಕಂಪ್ಲೇಂಟ್‌ ಅವ್ರ ಇತಿಹಾಸದಲ್ಲೇ ಕಂಡಿರ್ಲಿಲ್ಲ. ಈವರೆಗೆ ಇಂಥಾ ಯಾವ ಕೇಸ್‌ ಹಿಸ್ಟರಿಯೂ ಬಂದಿರ್ಲಿಲ್ಲ. ಅಷ್ಟಕ್ಕೂ ಆಕೆ ಕೊಟ್ಟ

ಕಂಪ್ಲೇಂಟ್‌ ಏನು..? ಆಕೆಯ ಕನಸಲ್ಲಿ ಅಂಥಾದ್ದೇನಾಗ್ತಿತ್ತು..?
ಆಕೆಯ ನಿದ್ದೆಯಲ್ಲಿ ಬರ್ತಿದ್ದ ಅವನು ಬದುಕು ನರಕ ಮಾಡಿದ್ದ!

ಹೌದು.. ಆ ಒಬ್ಬ ವ್ಯಕ್ತಿ ಪ್ರತಿ ರಾತ್ರಿ ಕನಸಲ್ಲಿ ಬರ್ತಿದ್ದ.. ದಿಂಬಿಗೆ ತಲೆಯಾನಿಸ್ತಿದ್ದಂತೆ ನಿದ್ದೆ ಬರ್ತಿತ್ತು. ನಿದ್ದೆ ಬರ್ತಿದ್ದಂತೆ ಕನಸು ಶುರುವಾಗ್ತಿತ್ತು. ಸೀನ್‌ ಓಪನ್‌ ಆದ್ರೆ ಆ ವ್ಯಕ್ತಿಯ ಎಂಟ್ರಿ. ಪ್ರತಿ ದಿನ ಇದೇನೇ. ಬರೀ ಕನಸಲ್ಲಿ ಬಂದ್ರೆ ಮಹಿಳೆ ಖಂಡಿತಾ ಹೆದರಿಕೊಳ್ತಿರ್ಲಿಲ್ಲ. ಆದ್ರೆ ಆಗ್ತಾ ಇದ್ದಿದ್ದೇ ಬೇರೆ. ಬಂದವನು ನರಕ ನರಕ ತೋರಿಸ್ತಿದ್ದ.

ಪ್ರತಿ ರಾತ್ರಿ ಮಹಿಳೆಗೆ ಬೀಳ್ತಿತ್ತು ಅತ್ಯಾಚಾರದ ಕನಸು
ಪ್ರತಿನಿತ್ಯ ಮೃಗದಂತೆ ಎರಗಿ ಅತ್ಯಾಚಾರ ಮಾಡ್ತಿದ್ದ

ನಂಬೋಕೆ ಕಷ್ಟ ಅಲ್ವಾ.. ಇದೇ ಆ ಮಹಿಳೆ ಅನುಭವಿಸ್ತಿದ್ದ ನರಕ.. ಪ್ರತಿ ದಿನ ಕನಸಲ್ಲಿ ಬರ್ತಿದ್ದೋನು ಅದೇ ವ್ಯಕ್ತಿ. ಪ್ರತಿನಿತ್ಯ ಬಂದು ಅವ್ನು ಮಾಡ್ತಾ ಇದ್ದಿದ್ದು ಒಂದೇ ಕೃತ್ಯ. ಅದು ಅತ್ಯಾಚಾರ. ಕನಸು ಶುರುವಾಗ್ತಿದ್ದಂತೆ ಬರೋನು.. ಎಳೆದಾಡೋನು.. ಮೃಗದಂತೆ ವರ್ತಿಸೋನು.. ಮೈಮೇಲೆ ಬೀಳೋನು.. ಅತ್ಯಾಚಾರ ಮಾಡೋನು.. ಕನಸಲ್ಲಿ ಆತ ಕೊಡ್ತಿದ್ದ ಯಾತನೆಗೆ ಬೇಸತ್ತು ಹೋಗಿದ್ದಳು ಮಹಿಳೆ. ಬದುಕೋದೆ ಹಿಂಸೆ ಅನ್ನಿಸಿಬಿಟ್ಟಿತ್ತು. ಯಾಕಾದ್ರೂ ಜೀವಂತ ಇದೀನೋ ಅನ್ನಿಸಿಬಿಟ್ಟಿತ್ತು. ಹಾಗಾದ್ರೆ ಯಾರವನು..? ಅವನೇ ಯಾಕ್ ಬರ್ತಿದ್ದ..?

ನಡುರಾತ್ರಿ ಕನಸಲ್ಲಿ ಬಂದು ಮೃಗದಂತೆ ವರ್ತಿಸ್ತಿದ್ದೋನು ಯಾರು?
ಆರು ತಿಂಗಳ ಹಿಂದಿನ ಅದೊಂದು ಭೇಟಿ ಕನಸಿಗೆ ಹಾಡಿತಾ ನಾಂದಿ?

ಇದೇ ನೋಡಿ ಇಂಟ್ರೆಸ್ಟಿಂಗ್‌ ವಿಚಾರ. ಪ್ರತಿದಿನ ಆ ಮಹಿಳೆಯ ಕನಸಲ್ಲಿ ಬರ್ತಿದ್ದ ವ್ಯಕ್ತಿ ಅಪರಿಚಿತನೇನಲ್ಲ. ಮಹಿಳೆಗೆ ಪರಿಚಯ ಇದ್ದೋನೆ. ಸುಮಾರು ಆರು ತಿಂಗಳ ಪರಿಚಯ. ಆದ್ರೆ ಹಾಗೆ ಪರಿಚಯ ಇರೋನು ಹೀಗ್‌ ಯಾಕ್‌ ಮಾಡ್ತಿದ್ದ..? ಆತನಿಗೂ ಈ ಮಹಿಳೆಗೂ ಏನ್‌ ಸಂಬಂಧ..? ಕನಸೇ ಆಗಿರಬಹುದು ಇದು. ಆದ್ರೆ ಅವ್ನೇ ರೇಪ್ ಮಾಡ್ತಿದ್ದ ಕನಸು ಯಾಕ್ ಬೀಳ್ತಿತ್ತು. ಹಾಗಾದ್ರೆ ಆರು ತಿಂಗಳ ಹಿಂದೆ ಆದ ಪರಿಚಯದ ಹಿಂದಿರೋ ಸ್ಟೋರಿ ಏನು..?

ಕಾಳಿ ಬರಿ ದೇಗುಲಕ್ಕೆ ಹೋಗಿದ್ದಾಗ ಪರಿಚಯವಾಗಿದ್ದ ಮಾಂತ್ರಿಕ!
ಮಗನ ಕಾಯಿಲೆ ಗುಣವಾಗೋಕೆ ಹೇಳಿಕೊಟ್ಟಿದ್ದ ಒಂದು ಮಂತ್ರ!

ಇದೇ ನೋಡಿ ಇಂಟ್ರೆಸ್ಟಿಂಗ್ ವಿಚಾರ. ಈ ಮಹಿಳೆ ಮತ್ತು ಕನಸಲ್ಲಿ ಬರ್ತಿದ್ದ ಆ ವ್ಯಕ್ತಿಯ ಪರಿಚಯ ಆರು ತಿಂಗಳು ಹಿಂದಿನದ್ದು. ಅಂದ್ರೆ ಜನವರಿ ತಿಂಗಳ ಆರಂಭದ ಕತೆಯಿದು. ಅಲ್ಲಿಂದಾನೇ ಈ ಒಂದು ಕನಸಿನ ಕತೆಯ ಫ್ಲಾಶ್‌ಬ್ಯಾಕ್‌ ಶುರುವಾಗೋದು.

ಮಗನಿಂದ ಪರಿಚಯವಾಗಿದ್ದ ಮಂತ್ರವಾದಿ!
ಈ ಮಹಿಳೆಯ ಪುತ್ರ ತೀವ್ರ ಅನಾರೋಗ್ಯಕ್ಕೆ ಈಡಾಗಿರ್ತಾನೆ. ಹಲವು ವೈದ್ಯರಿಗೆ ತೋರಿಸಿದ್ರೂ ಗುಣಮುಖನಾಗಿರಲಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿರ್ತಾಳೆ ಮಹಿಳೆ. ಆದ್ರೂ ಪ್ರಯೋಜನವಾಗಿರ್ಲಿಲ್ಲ. ಕೊನೆಗೆ ಆ ದೇವ್ರೇ ಕಾಪಾಡ್ಲಿ ಅಂತ ಕಾಳಿಬರಿ ದೇಗುಲಕ್ಕೆ ತೆರಳಿದ್ದಳು ಮಹಿಳೆ. ಇದೇ ದೇಗುಲದಲ್ಲಿ ಇರ್ತಿದ್ದ ಮಂತ್ರವಾದಿ ಪ್ರಶಾಂತ್ ಚತುರ್ವೇದಿ. ಈ ವೇಳೆ ಪ್ರಶಾಂತ್‌ನ ಶಕ್ತಿಯ ಬಗ್ಗೆ ಮಹಿಳೆಗೆ ಹಲವಾರು ಮಂದಿ ಹೇಳಿದ್ರು. ಈತ ತುಂಬಾ ಪವರ್‌ಫುಲ್‌ ಮಾಂತ್ರಿಕ, ಗುಣಮುಖನಾಗಿ ಮಾಡ್ತಾನೆ ಎಂದಿದ್ರು. ಹೀಗಾಗಿ ಮಗನನ್ನ ಉಳಿಸಿಕೊಡು ಅಂತ ಈ ಮಹಿಳೆ ಅಂಗಲಾಚಿದ್ಲು. ಈ ವೇಳೆ ಮಾಂತ್ರಿಕ ಪ್ರಶಾಂತ್‌ ಚತುರ್ವೇದಿ ಒಂದು ಮಂತ್ರವನ್ನ ಹೇಳಿಕೊಟ್ಟಿದ್ದನಂತೆ.

ಈ ಮಂತ್ರವನ್ನ ಪಠಿಸಿ, ಪೂಜಾ ವಿಧಿ ಪೂರೈಸಿದ್ರೆ ಮಗ ಹುಷಾರಾಗ್ತಾನೆ ಎಂದಿದ್ದನಂತೆ. ಆದ್ರೆ ಎಷ್ಟೇ ಭಕ್ತಿಯಿಂದ ಮಂತ್ರ ಪಠಿಸಿದ್ರೂ 15 ದಿನದ ಬಳಿಕ ಮಗ ಸಾವನ್ನಪ್ಪಿದ. ಮಂತ್ರವಾದಿಗೆ ಅಷ್ಟು ದುಡ್ಡು ಸುರಿದ್ರೂ ಯಾಕ್‌ ಮಗ ಸತ್ತ ಅಂತ ಆತನನ್ನೇ ಕೇಳೋಕೆ ಮತ್ತೊಮ್ಮೆ ಭೇಟಿ ಮಾಡಿದ್ಲು ಮಹಿಳೆ. ಈ ವೇಳೆಯೇ ಮಾಂತ್ರಿಕ ಪ್ರಶಾಂತ್ ಚತುರ್ವೇದಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ಈ ಸಂದರ್ಭದಲ್ಲಿ ಪ್ರಾಣ ಕಳ್ಕೊಂಡಿದ್ನಲ್ಲಾ.. ಅದೇ ಮಗ ನನ್ನನ್ನ ಕಾಪಾಡ್ದ ಅನ್ನೋದು ಮಹಿಳೆ ಹೇಳೋ ಮಾತು. ಈ ಘಟನೆ ನಡೆದ ಬಳಿಕವೇ ಈಕೆಗೆ ಈತನೇ ಬಂದು ಅತ್ಯಾಚಾರ ಮಾಡೋ ಕನಸು ಬೀಳೋಕೆ ಶುರುವಾಗೋದು. ಸತತ ಆರು ತಿಂಗಳಿಂದ ಇದೇ ಕೆಟ್ಟ ಕನಸು. ಕೊನೆಗೆ ಈ ಕನಸಿನಿಂದ ಬೇಸತ್ತ ಮಹಿಳೆ ಪ್ರಶಾಂತ್‌ ಚತುರ್ವೇದಿ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾಳೆ.

ಎಂಥಾ ವಿಚಿತ್ರ ಕೇಸ್‌ ನೋಡಿ.. ಇಷ್ಟೆಲ್ಲವನ್ನೂ ತಮ್ಮ ಮುಂದೆ ಈಕೆ ಬಿಚ್ಚಿಡ್ತಿದ್ದಂತೆ ಪೊಲೀಸರು ಏನ್‌ ಮಾಡಿರ್ಬಹುದು. ಕನಸ್ಸಲ್ಲಾದ್ರೇನು ಕೇಸ್‌ ರೇಪ್‌ದು ತಾನೇ. ತಕ್ಷಣ ಕ್ರಮಕ್ಕೆ ಮುಂದಾಗ್ತಾರೆ. ಮಹಿಳೆ ಲಿಖಿತ ದೂರು ದಾಖಲಿಸ್ತಿದ್ದಂತೆ ಪ್ರಶಾಂತ್ ಚತುರ್ವೇದಿಯನ್ನ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸ್ತಾರೆ. ಆದ್ರೆ ಈ ವೇಳೆ ಚತುರ್ವೇದಿ, ನನಗೆ ಆ ಮಹಿಳೆಯ ಪರಿಚಯವೇ ಇಲ್ಲ, ನಾನ್ಯಾವತ್ತೂ ಮೀಟ್‌ ಆಗಿಲ್ಲ ಅಂದಿದ್ದ. ಈತನ ವಿರುದ್ಧ ಇರೋ ಆರೋಪಕ್ಕೆ ಯಾವುದೇ ಪ್ರೂಫ್‌ ಇಲ್ದಿರೋ ಕಾರಣ ಪೊಲೀಸರು ಸ್ಟೇಷನ್‌ ಬೇಲ್‌ನಲ್ಲಿ ಆತನನ್ನ ಬಿಟ್ಟು ಕಳುಹಿಸಿದ್ದಾರೆ.

ಆದ್ರೂ ಎಂಥಾ ವಿಚಿತ್ರ ಪ್ರಕರಣ.. ರೇಪ್ ಆಗಿರೋದು ಕನಸಲ್ಲಿ.. ಆದ್ರೆ ಮಹಿಳೆ ಪೊಲೀಸ್ ಸ್ಟೇಷನ್‌ ಮೆಟ್ಟಿಲೇರಿದ್ಲು. ಪೊಲೀಸ್ರು ಈ ಬಗ್ಗೆ ಆಕೆಯಿಂದ ರಿಟನ್‌ ಕಂಪ್ಲೇಂಟೂ ದಾಖಲಿಸಿಕೊಳ್ತಾರೆ, ಮಂತ್ರವಾದಿಯನ್ನ ವಿಚಾರಣೆಗೂ ಒಳಪಡಿಸ್ತಾರೆ. ಆತ ನನಗಾಕೆಯ ಪರಿಚಯ ಇಲ್ಲ ಅಂತಿದ್ದಾನೆ. ಇನ್ನೇನ್‌ ಮಾಡ್ತಾರೆ ಪೊಲೀಸ್ರು..? ಬಹುಶಃ ಆಕೆಯ ಕನಸಿನ ಲೋಕಕ್ಕೆ ತಾವೂ ಎಂಟ್ರಿ ಕೊಟ್ಟು ಅತ್ಯಾಚಾರ ಮಾಡ್ತಿರೋ ಆರೋಪಿಯನ್ನ ಸೆರೆ ಹಿಡೀಬೇಕಷ್ಟೇ. ಅಥವಾ ವಸ್ತುನಿಷ್ಠವಾಗಿ ಯೋಚಿಸಿದ್ರೆ, ಆ ಮಹಿಳೆಯನ್ನ ಒಬ್ಬ ತಜ್ಞ ಸೈಕಿಯಾಟ್ರಿಸ್ಟ್​ ಹತ್ರ ಕಳುಹಿಸಬೇಕಾಗಿತ್ತು.

The post ಪ್ರತಿರಾತ್ರಿ ಮಹಿಳೆಗೆ ಅತ್ಯಾಚಾರದ ಕನಸು.. ನ್ಯಾಯ ಕೋರಿದ್ದಕ್ಕೆ ಪೊಲೀಸರು ಕೈಗೊಂಡ ಕ್ರಮವೇನು? appeared first on News First Kannada.

Source: newsfirstlive.com

Source link