ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಗೋಲ್ಡ್ ಮೆಡಲ್‌ ಪಡೆದಿದ್ದ ಮಹಿಳೆ ಅನುಮಾನಾಸ್ಪದ ಸಾವು

ಮೈಸೂರು: ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಗೋಲ್ಡ್ ಮೆಡಲ್‌ ಪಡೆದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

ಆಶಾ ಮೃತ ಗೃಹಿಣಿ. ಮಳವಳ್ಳಿಯ ನಾಗಾಪ್ರಸಾದ್ ಎಂಬಾತನನ್ನ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿ ಆಶಾ ಎಂಟು ವರ್ಷಗಳ ಹಿಂದೆ ಪ್ರೀತಿಸಿ‌ ಮದುವೆಯಾಗಿದ್ದರು. ಸದ್ಯ ಮೈಸೂರಿನಲ್ಲಿ ಆಶಾ, ನಾಗಾಪ್ರಸಾದ್ ವಾಸವಾಗಿದ್ದರು. ಆಶಾಗೆ ಹಣ‌ ತೆಗೆದುಕೊಂಡು ಬರುವಂತೆ ಗಂಡನಿಂದ ನಿರಂತರ ಕಿರುಕುಳ ನೀಡಲಾಗ್ತಿತ್ತು ಎಂದು ಆಶಾ ಕುಂಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಎರಡ್ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಕರಣ ಡೈವೋರ್ಸ್ ಹಂತಕ್ಕೆ ಹೋಗಿತ್ತು. ನಂತರ ಪ್ಯಾಮಿಲ್ ಕೋರ್ಟ್ ನಲ್ಲಿ ರಾಜಿ ಮಾಡಲಾಗಿತ್ತು. ಇದಾದ‌ ಮೇಲು ಪತಿಯಿಂದ ಕಿರುಕುಳ ಮುಂದುವರೆದಿದ್ದು ಹಣಕ್ಕಾಗಿ ದಿನೇ ದಿನೇ ಟಾರ್ಚರ್‌ ನೀಡ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಕೊರೊನಾ ಲಸಿಕೆ ಹಾಕಲು ಬಂದವರಿಗೆ ‘ದೇವರ’ ಕಾಟ.. ಯಾದಗಿರಿಯಲ್ಲಿ ಹೈಡ್ರಾಮಾ

ಕುಟುಂಬದವರಿಗೆ ನಿನ್ನೆಯಷ್ಟೇ ಕರೆ ಮಾಡಿ ಗಂಡನ ಮನೆ ಬಿಟ್ಟು ಪಿಜಿ ಯಲ್ಲಿರುತ್ತೇನೆ ಎಂದು ಆಶಾ ಹೇಳಿದ್ದಳಂತೆ. ಅದರ ಬೆನ್ನಲ್ಲೇ ಗಂಡ ನಾಗಪ್ರಸಾದ್ ಆಶಾ ಪೋಷಕರಿಗೆ ಕರೆ ಮಾಡಿ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನಂತೆ. ಇದರಿಂದ ಅನುಮಾನ ವ್ಯಕ್ತಪಡಿಸಿರುವ ಆಶಾ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ಕುರಿತು ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸತತ 5ನೇ ದಿನವೂ ಪೆಟ್ರೋಲ್​​​-ಡೀಸೆಲ್​​ ಬೆಲೆ ಏರಿಕೆ; ಬೆಂಗಳೂರಲ್ಲಿ ಎಷ್ಟಿದೆ ರೇಟ್​..?

News First Live Kannada

Leave a comment

Your email address will not be published. Required fields are marked *