ಪ್ರತ್ಯೇಕ ಕೋವಿಡ್ ಕೇಂದ್ರ ಸ್ಥಾಪಿಸಿ ಮುಗ್ಧ ಆದಿವಾಸಿಗಳ ಮನಸ್ಸು ಗೆದ್ದ ಜಿಲ್ಲಾಡಳಿತ

ಪ್ರತ್ಯೇಕ ಕೋವಿಡ್ ಕೇಂದ್ರ ಸ್ಥಾಪಿಸಿ ಮುಗ್ಧ ಆದಿವಾಸಿಗಳ ಮನಸ್ಸು ಗೆದ್ದ ಜಿಲ್ಲಾಡಳಿತ

ಚಾಮರಾಜನಗರ: ಕೋವಿಡ್ ಟೆಸ್ಟ್ ಹಾಗೂ ಕೋವಿಡ್ ಲಸಿಕೆಗೆ ಬುಡಕಟ್ಟು ಜನಾಂಗದ ಆದಿವಾಸಿಗಳು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆ ಸೋಲಿಗರಿಗಾಗಿಯೇ ಚಾಮರಾಜನಗರ ಜಿಲ್ಲಾಡಳಿತ ಕೇರ್ ಸೆಂಟರ್​ ಒಂದನ್ನ ತೆರೆದಿದೆ.

ರಾಜ್ಯದಲ್ಲೇ ಪ್ರಥಮ ಬಾರಿಗೆ ಸಮುದಾಯ ಆಧಾರಿತ ಆದಿವಾಸಿ ಕೋವಿಡ್ ಸೇವಾ ಕೇಂದ್ರ ಇದಾಗಿದ್ದು ಹನೂರು ತಾಲೂಕಿನ ಜೀರಿಗೆಗದ್ದೆ ಪೋಡಿನಲ್ಲಿ ಆದಿವಾಸಿ ಕೋವಿಡ್ ಸೇವಾ ಕೇಂದ್ರವನ್ನ ತೆರೆಯಲಾಗಿದೆ.

ಆರೋಗ್ಯ ಸಿಬ್ಬಂದಿ ಕಂಡರೆ ಸೋಲಿಗರು ಕಾಡಿನಲ್ಲಿ ಅವಿತುಕೊಳ್ಳುತ್ತಿದ್ದರು. ಒತ್ತಾಯ ಮಾಡಿ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದ್ರೂ ಕೋವಿಡ್ ಕೇರ್ ಸೆಂಟರ್​ಗೆ ತೆರಳಲು ಆದಿವಾಸಿಗಳ ಹಿಂದೇಟು ಹಾಕುತ್ತಿದ್ದರು. ದೂರದ ಕೋವಿಡ್ ಕೇರ್​ಗೆ ಹೋದ್ರೆ ಜೀವಕ್ಕೆ ತೊಂದರೆ ಎಂಬ ಅಪನಂಬಿಕೆ ಹಾಗೂ ಮತ್ತೊಂದು ಕಡೆ ಬೇರೆ ಸೋಂಕಿತರೊಂದಿಗೆ ಬೆರೆಯಲು ಸೋಲಿಗ ಸಮುದಾಯದವರು ನಕಾರ ವ್ಯಕ್ತಪಡಿಸಿದ್ದರು.

ನಾಲ್ಕು ದಿನಗಳ ಕಾಲ ಸತತ ಪ್ರಯತ್ನದ ಫಲವಾಗಿ ಸದ್ಯ ನೂರಾರು ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಪಾಸಿಟಿವ್ ಬಂದವರಿಗೆ ಆದಿವಾಸಿ ಕೋವಿಡ್ ಸೇವಾ ಕೇಂದ್ರದಲ್ಲಿ ಐಸೋಲೇಷನ್​ಗೆ ಇರಿಸಲಾಗಿದೆ. ತಮ್ಮೂರಿನಲ್ಲೇ ಇದ್ದೇವೆ ಎಂಬ ಭಾವನೆ ಮೂಡಿಸಲು ಸ್ಥಳೀಯವಾಗಿಯೇ ಆದಿವಾಸಿ ಕೋವಿಡ್ ಸೇವಾ ಕೇಂದ್ರ ನಿರ್ಮಿಸಲಾಗಿದ್ದು ಸದ್ಯ ಆದಿವಾಸಿಗಳು ಕೋವಿಡ್ ಟೆಸ್ಟ್​ಗೆ ಒಳಗಾಗಿ ಲಸಿಕೆಯನ್ನೂ ಹಾಕಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಪಾಸಿಟಿವ್ ಬಂದವರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.

ಪಾಸಿಟಿವ್ ಆಗಿದ್ದ 29 ಮಂದಿಯನ್ನ ಆದಿವಾಸಿ ಕೋವಿಡ್ ಸೇವಾ ಕೇಂದ್ರದಲ್ಲಿ ಐಸೋಲೇಷನ್​ನಲ್ಲಿ ಇರಿಸಲಾಗಿದ್ದು 20 ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೋವಿಡ್ ಲಸಿಕೆ ಬಗ್ಗೆಯು ಸೋಲಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.. ಜೀರಿಗೆ ಗದ್ದೆ, ಮಾವತ್ತೂರು, ಯರಗಬಾಳು, ಉದ್ದಟ್ಟಿ, ಹಾವಿನಮೂಲೆ ಮೊದಲಾದ ಹಾಡಿಗಳ 300 ಕ್ಕೂ ಹೆಚ್ಚು ಮಂದಿಗೆ ಲಸಿಕೆಯನ್ನೂ ನೀಡಲಾಗಿದೆ ಎಂಬ ಮಾಹಿತಿ ಇದೆ.

 

 

The post ಪ್ರತ್ಯೇಕ ಕೋವಿಡ್ ಕೇಂದ್ರ ಸ್ಥಾಪಿಸಿ ಮುಗ್ಧ ಆದಿವಾಸಿಗಳ ಮನಸ್ಸು ಗೆದ್ದ ಜಿಲ್ಲಾಡಳಿತ appeared first on News First Kannada.

Source: newsfirstlive.com

Source link