ಬೆಂಗಳೂರು: 2020-21 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇನ್ನೂ ಮುಗಿದಿಲ್ಲ. ಆಗಲೇ ಪ್ರತಿಷ್ಠಿತ ಕಾಲೇಜುಗಳು ಪ್ರಥಮ ಪಿಯುಸಿಗೆ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಮಾಡಿವೆ. ಇಂತಹ ಪ್ರತಿಷ್ಠಿತ ಕಾಲೇಜುಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಪಿಯುಸಿ ಬೋರ್ಡ್ ಎಲ್ಲಾ ಕಾಲೇಜುಗಳಿಗೂ ಎಚ್ಚರಿಕೆ ಸಂದೇಶ ನೀಡಿದೆ.

ಈ ಸಂಬಂಧ ಮಹತ್ವದ ಆದೇಶ ಹೊರಡಿಸಿರುವ ಪಿಯುಸಿ ಬೋರ್ಡ್ ಪಿಯುಸಿ ಬೋರ್ಡ್ ಮಾರ್ಗಸೂಚಿ ಪ್ರಕಟ ಮಾಡುವವರೆಗೂ 2021-22ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಮಾಡಬಾರದು ಅಂತ ಆದೇಶ ಹೊರಡಿಸಿದೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಆಗುವವರೆಗೂ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದಾಖಲಾತಿ ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರವಷ್ಟೆ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಮಾಡಬೇಕು. ಇಷ್ಟು ಮಾತ್ರವಲ್ಲ ಆನ್ ಲೈನ್ ತರಗತಿಗಳನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಎಚ್ಚರಿಕೆ ನೀಡಿದೆ.  ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

ಒಂದು ವೇಳೆ ನಿಯಮ ಮೀರಿ ದಾಖಲಾತಿ ನಡೆಸಿದರೆ, ಆನ್ ಲೈನ್ ತರಗತಿ ನೀಡಿದರೆ ಕಾಲೇಜು ಮಾನ್ಯತೆ ರದ್ದು ಮಾಡೋದಾಗಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಜಿಲ್ಲಾ ಡಿಡಿಪಿಯುಗಳು ಸೂಕ್ತ ನಿಗಾವಹಿಸಿ ಮಾಹಿತಿಯನ್ನ ತಮ್ಮ ವ್ಯಾಪ್ತಿಯ ಪ್ರಾಂಶುಪಾಲರಿಗೆ ನೀಡುವಂತೆ ಪಿಯುಸಿ ಬೋರ್ಡ್ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

The post ಪ್ರಥಮ ಪಿಯುಸಿ ದಾಖಲಾತಿ ಮಾಡಿಕೊಂಡ್ರೆ ಶಿಸ್ತು ಕ್ರಮ – ಪಿಯುಸಿ ಬೋರ್ಡ್ ಎಚ್ಚರಿಕೆ appeared first on Public TV.

Source: publictv.in

Source link