ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣ ಕುರಿತಂತೆ ಕಂಪ್ಲೀಟ್​ ಲಾಕ್​ಡೌನ್ ಮಾಡುವ ಕುರಿತಂತೆ ಪ್ರಧಾನಿ ಮೋದಿ ಅವರ ನಿರ್ದೇಶನದ ಮೇರೆಗೆ ನಾವು ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಕೆ.ಸಿ.ರೆಡ್ಡಿಯವರ 119ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಎಂ, ಪ್ರಧಾನಿಗಳು ಇಂದು ದೇಶವನ್ನು ಉದ್ದೇಶ ಮಾತನಾಡಲಿದ್ದಾರೆ. ಅವರು ಏನೂ ಮಾರ್ಗದರ್ಶನ ನೀಡಲಿದ್ದಾರೆ ಎಂಬುವುದನ್ನು ಕಾದು ನೋಡುತ್ತಿದ್ದೇವೆ. ನಾವು ಕೂಡ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಅವರ ಕ್ಷೇತ್ರಗಳಿಗೆ ತೆರಳಿದ್ದಾರೆ. ಸಚಿವರ ನಿತ್ಯ ಕಾರ್ಯವೈಖರಿ ಬಗ್ಗೆ ವರದಿ ಪಡೆದುಕೊಳ್ಳುತ್ತೇನೆ. ಸದ್ಯ ಸುಪ್ರೀಂ ಕೋರ್ಟ್​​ ಸರ್ಕಾರಕ್ಕೆ ನಿರ್ದೇಶನ ನೀಡಿರುವುದರಿಂದ ಯಾವ ತೀರ್ಮಾನವನ್ನು ಕೈಗೊಳ್ಳಲಿದೆ ಎಂಬುವುದನ್ನು ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದರು.

The post ಪ್ರಧಾನಿಗಳ ನಿರ್ದೇಶನದ ಮೇರೆಗೆ ಲಾಕ್​​ಡೌನ್ ಬಗ್ಗೆ ನಾವು ತೀರ್ಮಾನ ಮಾಡ್ತೇವೆ- ಸಿಎಂ appeared first on News First Kannada.

Source: newsfirstlive.com

Source link