ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಹಕ್ಕು ವಿಪಕ್ಷಕ್ಕೆ ಇಲ್ಲ: ಎಂಪಿ ರೇಣುಕಾಚಾರ್ಯ | MP Renukacharya on Karnataka Politics Congress JDS PM Modi Bitcoin and Hamsalekha issue


ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಹಕ್ಕು ವಿಪಕ್ಷಕ್ಕೆ ಇಲ್ಲ: ಎಂಪಿ ರೇಣುಕಾಚಾರ್ಯ

ಎಂ.ಪಿ. ರೇಣುಕಾಚಾರ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಜೆಡಿಎಸ್ ಚಿಗುರುವ ಮರ ಅಲ್ಲ. ಹಳೆ ಬೇರು ಹೊಸ ಚಿಗುರು ಸೇರಿ ಮರ ಸೊಬಗು. ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಹಕ್ಕು ವಿಪಕ್ಷಕ್ಕೆ ಇಲ್ಲ. ಬಿಜೆಪಿಯಲ್ಲಿ ಯಾರ ಮಕ್ಕಳಿಗೆ ಟಿಕೆಟ್ ಕೊಟ್ಟರೂ ಗೆಲ್ತಾರೆ. ಅವರು ಸಂಘಟನೆಯಿಂದ ಬಂದವರು, ಗೆದ್ದು ಬರ್ತಾರೆ ಅಷ್ಟೇ. ಬಿ.ಎಸ್​. ಯಡಿಯೂರಪ್ಪನವರ ಮಗ ಎಂದು ಗೆದ್ದು ಬರಲ್ಲ. ದೇವೇಗೌಡರು ತಮ್ಮ ಕುಟುಂಬ ಸಾಲಾಗಿ‌ ನಿಲ್ಲಿಸುತ್ತಿದ್ದಾರೆ. ಅದಕ್ಕೆ ಜನರೇ ಉತ್ತರ ಕೊಡ್ತಾರೆ ಎಂದು ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಹೆಚ್.​ಡಿ. ಕುಮಾರಸ್ಚಾಮಿ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುತ್ತೆ. ಹತಾಶೆಯಿಂದ ಬಿಟ್ ಕಾಯಿನ್ ಆರೋಪ ಮಾಡುತ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಸಾಮಾನ್ಯ ಜನರಿಗೆ ಏನೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಕಾಂಗ್ರೆಸ್​ನವರ ಹೇಳಿಕೆ ನಂಬಲ್ಲ. ಕೊರೊನಾ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಇಂದು ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಇಂದು ನೀವು ರಾಜ ಮಹಾರಾಜರ ರೀತಿ ಬದುಕುತ್ತಿದ್ದೀರಿ. ಅದರ ಹಿನ್ನೆಲೆ ಏನೆಂದು ಜನರ ಮುಂದೆ ಬಿಚ್ಚಿಡುತ್ತೇವೆ. ಬಿಟ್ ಕಾಯಿನ್​ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಹೇಳಿಕೆಗೆ ವ್ಯಾಪಕ ಖಂಡನೆ
ಪೇಜಾವರ ಶ್ರೀಗಳ ಕುರಿತು ಹಂಸಲೇಖ ಹೇಳಿಕೆ ವಿಚಾರವಾಗಿ ಶಾಸಕ ರೇಣುಕಾಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಹಂಸಲೇಖ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇತ್ತು. ಹಿಂದೂಗಳ ಭಾವನೆ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಕೀಳುಮಟ್ಟದ ಹೇಳಿಕೆ ನೀಡಿ ಹಂಸಲೇಖ ಪ್ರಚಾರ ಪಡೆದಿದ್ದಾರೆ. ಇನ್ಮುಂದೆ ಇಂತಹ ಹೇಳಿಕೆ ಕೊಟ್ಟರೆ ಸರಿಯಿರಲ್ಲ. ನಾವು ಕಲೆಗೆ ಗೌರವ ಕೊಡುವವರು. ಈ ರೀತಿ ಹೇಳಿಕೆ ಕೊಡಬಾರದೆಂದು ಎಚ್ಚರಿಕೆ ಕೊಡುತ್ತೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಪೇಜಾವರ ಶ್ರೀಗಳ ಕುರಿತು ಹಂಸಲೇಖ ಕ್ಷಮೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸುರೇಶ್‌ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರೀತಿಯೂ ಕ್ಷಮೆ‌ ಕೇಳಬಹುದೆನ್ನುವುದು ವಿಶೇಷ. ಹಂಸಲೇಖರವರು ಮನಸ್ಸಿನ ಕಹಿಯನ್ನೆಲ್ಲ ಕಕ್ಕಿದ ಮೇಲೆ, ಕೆಲವೊಂದು ಮಾತು ವೇದಿಕೆಗಲ್ಲವೆಂದು ಕ್ಷಮೆ ಕೇಳಿದ್ದಾರೆ. ಹೀಗೆ ಕ್ಷಮೆ ಕೇಳಬಹುದೆಂಬ ಸಂಗತಿ ಇಂದು ಗೊತ್ತಾಯಿತು. ಬೇಷರತ್ತಾಗಿ ಕ್ಷಮೆಕೇಳುವ ದೊಡ್ಡ ಗುಣ ಹಂಸಲೇಖರಿಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುರೇಶ್‌ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಹೇಳಿಕೆಗೆ ಪರ್ಯಾಯ ಅದಮಾರುಶ್ರೀ ಖಂಡನೆ ವ್ಯಕ್ತಪಡಿಸಿದ್ದಾರೆ. ಮನುಷ್ಯನಿಗೆ ಕರ್ತವ್ಯಗಳು, ಜವಾಬ್ದಾರಿಗಳು ಇರುತ್ತವೆ. ಅವರವರ ದೃಷ್ಟಿಕೋನ ಎಂಬುದೂ ಇರುತ್ತದೆ. ಹಂಸಲೇಖ ನೋಡಿದ ಪ್ರಪಂಚ ಅಷ್ಟೇ ಎಂದು ತಿಳಿಯುತ್ತೆ. ಪೇಜಾವರಶ್ರೀ ಬಗ್ಗೆ ನಿಂದನೆ ಮಾಡಿದವರ ಬಗ್ಗೆ ಕನಿಕರ ಇದೆ. ವಿಶಾಲವಾದ ದೃಷ್ಟಿ ಅವರಿಗೆ ಇಲ್ಲ ಎನ್ನುವ ಬೇಸರವೂ ಇದೆ ಎಂದು ಉಡುಪಿಯಲ್ಲಿ ಪರ್ಯಾಯ ಅದಮಾರು ಶ್ರೀ ಹೇಳಿದ್ದಾರೆ.

ಇದನ್ನೂ ಓದಿ: Hamsalekha: ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಕ್ಷಮೆ ಕೋರಿದ ಹಂಸಲೇಖ

ಇದನ್ನೂ ಓದಿ: ಪ್ರಚಾರಕ್ಕಾಗಿ ಜನ ಹೀಗೆ ಮಾಡ್ತಾರೆ; ಶಿಶುಪಾಲನಿಗೆ ಕೃಷ್ಣನೇ ಶಾಸ್ತಿ ಮಾಡಿದ್ದ -ಹಂಸಲೇಖ ಟೀಕೆಗೆ ವಿಶ್ವಪ್ರಸನ್ನ ತೀರ್ಥಶ್ರೀ ಉತ್ತರ

TV9 Kannada


Leave a Reply

Your email address will not be published. Required fields are marked *