ಮೋದಿ ಭೇಟಿ ನಂತರ ಮಮತಾ ಬ್ಯಾನರ್ಜಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದು ರಾಷ್ಟ್ರಪತಿಯವರು ಭೇಟಿಯ ಫೋಟೋ ಟ್ವೀಟ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ- ನರೇಂದ್ರ ಮೋದಿ
ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಗುರುವಾರ ನಾಲ್ಕು ದಿನಗಳ ಪ್ರವಾಸಕ್ಕಾಗಿ ದೆಹಲಿಗೆ ಬಂದಿರುವ ಮಮತಾ ಆಗಸ್ಟ್ 7ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ನೀತಿ ಆಯೋಗದ ಸಭೆಗೆ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ ವರ್ಷ ಮಮತಾ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಪಶ್ಚಿಮ ಬಂಗಾಳಕ್ಕೆ ಬರಬೇಕಿದ್ದ ಜಿಎಸ್ಟಿ ಬಾಕಿ ಸೇರಿದಂತೆ ಹಲವಾರು ವಿಷಯಗಳನ್ನು ಮಮತಾ ಚರ್ಚಿಸಲಿದ್ದಾರೆ ಎಂದು ಟಿಎಂಸಿ ಮೂಲಗಳು ಹೇಳಿದ್ದವು.
West Bengal CM @MamataOfficial met PM @narendramodi. pic.twitter.com/dvkHC7G8Ky
— PMO India (@PMOIndia) August 5, 2022
Chief Minister of West Bengal Mamata Banerjee called on President Droupadi Murmu at Rashtrapati Bhavan pic.twitter.com/4rU2iNR3T7
— President of India (@rashtrapatibhvn) August 5, 2022
ಪ್ರಧಾನಿ ಮೋದಿ ಕಚೇರಿ ನರೇಂದ್ರ ಮೋದಿ ಮತ್ತು ಮಮತಾ ಭೇಟಿಯ ಫೋಟೋ ಟ್ವೀಟ್ ಮಾಡಿದೆ. ಉಪರಾಷ್ಟ್ರಪತಿ ಚುನಾವಣೆ ನಾಳೆ ನಡೆಯಲಿದ್ದು ಅದಕ್ಕೆ ಒಂದು ದಿನ ಮುಂಚೆ ಮಮತಾ-ಮೋದಿ ಭೇಟಿ ಹೆಚ್ಚಿನ ಪ್ರಾಧಾನ್ಯತೆ ವಹಿಸಿದೆ. ಮೋದಿ ಭೇಟಿ ನಂತರ ಮಮತಾ ಬ್ಯಾನರ್ಜಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದು ರಾಷ್ಟ್ರಪತಿಯವರು ಭೇಟಿಯ ಫೋಟೋ ಟ್ವೀಟ್ ಮಾಡಿದ್ದಾರೆ.