ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ ಮಾಡಲಾಗುತ್ತಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತ್ರತ್ವದಲ್ಲಿ ಈ ಪೂಜಾ ಕಾರ್ಯಕ್ರಮ ನಡೆಯುತ್ತಿದೆ.
ಬೆಳಗ್ಗೆ 8 ಗಂಟೆಗೆ ಸರಿಯಾಗಿ ಪ್ರಧಾನ ಯಾಗ ಕುಂಡದಿಂದ ಅಗ್ನಿ ವಿಹರಣೆ ನಡೆಯಲಿದೆ. ಆ ಬಳಿಕ ಪ್ರಧಾನ ಕುಂಡದಲ್ಲಿ ಗಣಯಾಗ ಪ್ರಾರಂಭವಾಗಲಿದೆ. ಬಳಿಕ ಚತುರ್ವೇದ, ಗೋ ಪೂಜೆ, ಅಶ್ವಪೂಜೆ, ಗಣಪೂಜೆ ನಡೆಯಲಿದೆ.
ಬೆಳಗ್ಗೆ 9 ಗಂಟೆ ಹೊತ್ತಿಗೆ ಏಳು ಹೋಮ ಕುಂಡಗಳಲ್ಲಿ ಪ್ರಧಾನ ಹೋಮಗಳು ಪ್ರಾರಂಭ ಆಗಲಿದೆ. ಬೆಳಗ್ಗೆ 10.30ಕ್ಕೆ ಆರು ಹೋಮಕುಂಡಗಳಲ್ಲಿ ಪೂರ್ಣಾಹುತಿ, ಮಂಗಳಾರತಿ ಪೂಜೆ ನಡೆಯಲಿದೆ. 10.45 ರ ಸುಮಾರಿಗೆ ಆರು ಕುಂಡಗಳ ಅಗ್ನಿ ಪ್ರಧಾನ ಕುಂಡಕ್ಕೆ ಸಮರ್ಪಣೆ ಆಗಲಿದೆ. 11 ಗಂಟೆಗೆ ಪ್ರಧಾನ ಕುಂಡದಲ್ಲಿ ಕಲ್ಪೋಕ್ತ ಪೂಜೆ ಆರಂಭ ಆಗಲಿದೆ. 11.30ಕ್ಕೆ ಪೂರ್ಣಫಲ ಹೋಮ ಪೂರ್ಣಾಹುತಿ ಮತ್ತು 12 ಗಂಟೆಗೆ ಮಹಾಪೂಜೆ ಪ್ರಾರ್ಥನೆ ನಡೆಯಲಿದೆ.