ನವದೆಹಲಿ: ದೇಶಕ್ಕೆ ವ್ಯಾಕ್ಸಿನ್​ ಸಹಕಾರ ನೀಡುವ ಕುರಿತು ನಿನ್ನೆ ಪ್ರಧಾನಿ ಮೋದಿ ಮತ್ತು ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಜಾಗತಿಕ ವ್ಯಾಕ್ಸಿನ್ ಹಂಚಿಕೆ ಹಾಗೂ ಭಾರತಕ್ಕೆ ವ್ಯಾಕ್ಸಿನ್ ನೀಡುವ ಕುರಿತು ಈ ವೇಳೆ ಇಬ್ಬರ ನಡುವೆ ಮಾತುಕತೆ ನಡೆದಿದ್ದು ಕಮಲಾ ಹ್ಯಾರಿಸ್ ವ್ಯಾಕ್ಸಿನ್​ನ ಭರವಸೆ ನೀಡಿದ್ದಾರೆ.

ಯುಎಸ್​ ಸರ್ಕಾರ ಕೊರೊನಾ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಹಕಾರ ನೀಡುತ್ತಿರುವುದಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಭಾರತ-ಯುಎಸ್​ ನಡುವೆ ವ್ಯಾಕ್ಸಿನ್ ಸಹಕಾರವನ್ನ ಮತ್ತಷ್ಟು ಬಲಪಡಿಸುವುದು ಹಾಗೂ ಕೋವಿಡ್​ ನಂತರದ ದಿನಗಳಲ್ಲಿ ಸಹಭಾಗಿತ್ವದ ಮೂಲಕ ಜಾಗತಿಕ ಆರೋಗ್ಯ ಮತ್ತು ಆರ್ಥಿಕತೆಯ ಸುಧಾರಣೆಯ ವಿಚಾರವಾಗಿಯೂ ಮಾತುಕತೆ ನಡೆದಿದೆ.

The post ಪ್ರಧಾನಿ ಮೋದಿ-ಕಮಲಾ ಹ್ಯಾರಿಸ್ ಫೋನ್ ಮಾತುಕತೆ: ವ್ಯಾಕ್ಸಿನ್​ ಭರವಸೆ ನೀಡಿದ ಯುಎಸ್​ ಉಪಾಧ್ಯಕ್ಷೆ appeared first on News First Kannada.

Source: newsfirstlive.com

Source link