ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಶಿಬರೂರು ಕೊಡಮಣಿತ್ತಾಯ ದೈವದ ಮೋರೆ ಹೋದ ಅಭಿಮಾನಿ


ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪದ ನಂತರ ಅವರಿಗೆ ದೀರ್ಘಾಯುಷ್ಯ ನೀಡಲೆಂದು ಅನೇಕ ಕಡೆಗಳಲ್ಲಿ ಹೋಮಹವನ ನಡೆದಿದ್ದು ಇದೀಗ ಸುರತ್ಕಲ್ ಸಮೀಪದ ಪ್ರಸಿದ್ದ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲೂ ದೈವಕ್ಕೆ ತುಡರಬಲಿ ಸೇವೆಯನ್ನು ನೀಡಲಾಯಿತು.

ಪಂಜಾಬ್​ನಲ್ಲಿ ಪ್ರಕರಣ ನಡೆಯುತ್ತಿದಂತೆ, ನರೇಂದ್ರ ಮೋದಿಯವರ ಅಭಿಮಾನಿ ಶಿಬರೂರು ನಿವಾಸಿ ತುಕಾರಾಮ ಸಾಲಿಯಾನ್ ಅವರು ಮೋದಿಯವರಿಗೆ ಯಾವುದೇ ತೊಂದರೆ ಆಗಬಾರದೆಂದು ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ತಾನೂ ತುಡರಬಲಿ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು.

ಆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ತುಕರಾಮ ಸಾಲಿಯಾನ್ ಎಂಬವರು ತುಡರಬಲಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವ ಅಭಯ ನೀಡಿದ್ದು ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ. ಲೋಕದ ರಕ್ಷಣೆ ಮಾಡುವ ಮಾಯೆ ನಾನು. ನಿಮಗೆ ಭಯ ಬೇಡ, ಯಾವುದೇ ತೊಂದರೆ ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ ನೀಡಿದೆ.

ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಕರಾವಳಿಯಲ್ಲಿ ಅತ್ಯಂತ ಕಾರಣಿಕದ ದೈವಸ್ಥಾನವಾಗಿದೆ. ಇಲ್ಲಿನ ಮಣ್ಣು ಮತ್ತು ತೀರ್ಥ ಅತ್ಯಂತ ಪ್ರಸಿದ್ಧಿ ಹೊಂದಿದ್ದು, ಇಲ್ಲಿನ ತೀರ್ಥ ಮತ್ತು ಮಣ್ಣಿಗೆ ವಿಷವನ್ನು ಹೀರುವ ಶಕ್ತಿ ಇದೆ ಎಂಬ ನಂಬಿಕೆ ಸಹ ಇದೆ.

News First Live Kannada


Leave a Reply

Your email address will not be published. Required fields are marked *