ನವದೆಹಲಿ: ಕೊರೊನಾ ಸಂಕಷ್ಟದ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ರಷ್ಯಾ ದೇಶವೂ ಕೈ ಜೋಡಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿನ್​ ಪುಟಿನ್ ಹಾಗೂ ಭಾರತ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ಪುಟಿನ್ ಆಶ್ವಾಸನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪುಟಿನ್​ ಅವರೊಂದಿಗೆ ಮಾತುಕತೆ ನಡೆಸಿರುವ ಕುರಿತು ಸ್ವತಃ ಪ್ರಧಾನಿ ಮೋದಿ ಅವರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು, ಕೊರೊನಾ ಪರಿಸ್ಥಿತಿಯ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಕೊರೊನಾ ವಿರುದ್ಧ ಹೋರಾಟ ಮಾಡಲು ಬೆಂಬಲ ಹಾಗೂ ಸಹಕಾರ ನೀಡುತ್ತಿರುವ ರಷ್ಯಾ ಅಧ್ಯಕ್ಷರಿಗೆ ನಾನು ಧನ್ಯವಾದ ಹೇಳುತ್ತೇನೆ. ಭಾರತಕ್ಕೆ ಸ್ಪುಟ್ನಿಕ್​​​​-ವಿ ಲಸಿಕೆ ಪಡೆಯುವ ಕುರಿತು, ಎರಡು ದೇಶಗಳ ದ್ವಿಪಕ್ಷೀಯ ಭಾಂದವ್ಯದ ಕುರಿತು ಮಾತುಕತೆ ನಡೆಸಿದ್ದೇವೆ. ಪ್ರಮುಖವಾಗಿ ನವೀಕರಿಸಬಹುದಾದ ಹೈಡ್ರೋಜನ್​​​ ಕ್ಷೇತ್ರದಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಸ್ಪುಟ್ನಿಕ್-V ವ್ಯಾಕ್ಸಿನ್​ ಬಳಕೆಗೆ DCGI ನಿಂದಲೂ ಅನುಮತಿ.. ವ್ಯಾಕ್ಸಿನೇಷನ್​ಗೆ ಈಗ ಮತ್ತಷ್ಟು ವೇಗ

ಇತ್ತೀಚೆಗಷ್ಟೇ ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್-ವಿ ವ್ಯಾಕ್ಸಿನ್​ಗೆ ತುರ್ತು ಬಳಕೆಗೆ ಸರ್ಕಾರದ ಸಮಿತಿ ಲಸಿಕೆ ಅನುಮತಿ ನೀಡಿತ್ತು. ಆ ಬಳಿಕ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಸಹ ಅನುಮತಿ ನೀಡಿತ್ತು. ಈ ಮೂಲಕ ದೇಶದಲ್ಲಿ ಕೊರೊನಾಗೆ ಲಸಿಕೆಯಾಗಿ ಸ್ಪುಟ್ನಿಕ್ ಅನ್ನು ಬಳಸಲು ಅಧಿಕೃತ ಅನುಮತಿ ಲಭಿಸಿದೆ.

The post ಪ್ರಧಾನಿ ಮೋದಿ-ಪುಟಿನ್​ ಮಾತುಕತೆ.. ಕೊರೊನಾ ವಿರುದ್ಧ ಹೋರಾಟಕ್ಕೆ ಜೊತೆಗಿದ್ದೇವೆಂದ ರಷ್ಯಾ appeared first on News First Kannada.

Source: newsfirstlive.com

Source link