ಕಳೆದ ಏಳು ವರ್ಷಗಳಿಂದ ರೇಡಿಯೋದಲ್ಲಿ ಪ್ರಸಾರವಾಗುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಸುಮಾರು 30 ಕೋಟಿ ರೂಪಾಯಿ ಆದಾಯ ಗಳಿಸಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಅನುರಾಗ್ ಠಾಕೂರ್, 2014ರಲ್ಲಿ ಆರಂಭವಾದ ಮನ್ ಕಿ ಬಾತ್ ಕಾರ್ಯಕ್ರಮ ಈವರೆಗೂ 78 ಸರಣಿಗಳಲ್ಲಿ ಪ್ರಸಾರವಾಗಿದೆ. ಈವರೆಗೆ ಸುಮಾರು 30 ಕೋಟಿ ರೂಪಾಯಿ ಆದಾಯ ಗಳಿಸಿದೆ ಅಂತಾ ತಿಳಿಸಿದ್ದಾರೆ.

ಮನ್​​ ಕಿ ಬಾತ್ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರದಂದು 11 ಗಂಟೆಗೆ ರೇಡಿಯೋದಲ್ಲಿ ಪ್ರಸಾರವಾಗಲಿದೆ. ಅಲ್ಲದೇ ದೇಶದಾದ್ಯಂತ 91 ಖಾಸಗಿ ಸ್ಯಾಟಲೈಟ್​ ಟಿವಿ ಚಾನೆಲ್​​ ಹಾಗೂ ಕೇಬಲ್​, ಡಿಟಿಹೆಚ್​​ ಪ್ಲಾಟ್​​​ ಫಾರಂನಲ್ಲೂ ಪ್ರಸಾರವಾಗುತ್ತಿದೆ. 2014-15ರಲ್ಲಿ 1.16 ಕೋಟಿ ರೂಪಾಯಿ, 2015-16ರಲ್ಲಿ 2.81 ಕೋಟಿ ರೂಪಾಯಿ, 2016-17ರಲ್ಲಿ 5.14 ಕೋಟಿ ರೂಪಾಯಿ, 2017-18ರಲ್ಲಿ 10.64 ಕೋಟಿ ರೂಪಾಯಿ, 2018-19ರಲ್ಲಿ 7.47 ಕೋಟಿ ರೂಪಾಯಿ, 2019-20ರಲ್ಲಿ 2.56 ಕೋಟಿ ರೂಪಾಯಿ, 2020-21 ರಲ್ಲಿ 1.02 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ.

The post ಪ್ರಧಾನಿ ಮೋದಿ ‘ಮನ್ ಕಿ ಬಾತ್’ನಿಂದ ಸರ್ಕಾರಕ್ಕೆ ₹30 ಕೋಟಿ ಆದಾಯ appeared first on News First Kannada.

Source: newsfirstlive.com

Source link