ಬಳ್ಳಾರಿ: ಅಕ್ರಮವಾಗಿ ರೆಮ್​ಡಿಸಿವರ್​ ಇಜೆಕ್ಷನ್​ನನ್ನ ಅಧಿಕ ಬೆಲೆಗೆ ಮಾರಾಟ ಮಾಡ್ತಿದ್ದವರನ್ನ ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ರೆಮ್‌ಡಿಸಿವಿರ್ ಇಂಜೆಕ್ಷನ್​ಗಳನ್ನ 30 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ.

ಉದ್ಯಮಿ ಪೋಲಾ ಪ್ರವೀಣ, ವಿಜಯನಗರ ಕೃಷ್ಣದೇವರಾಯ ವಿವಿಯ ಸಿಂಡಿಕೇಟ್ ಸದಸ್ಯ ಡಾ‌ ಮರ್ಚೇಡ್ ಮಲ್ಲಿಕಾರ್ಜುನಗೌಡ, ಮೆಡಿಕಲ್ ಏಜೆನ್ಸಿ ಮಾಲೀಕ ವೆಂಕಟೇಶ ಬಾಬು ಬಂಧಿತ ಆರೋಪಿಗಳು. ಪ್ರಕರಣದ ಆರೋಪಿ ಕಿಶೋರ್‌ನನ್ನ ಕಳೆದ ವಾರವೇ ಬಂಧನ ಮಾಡಿದ ಪೊಲೀಸ್​ ಟೀಮ್.. ಮತ್ತೆ ಮೂವರನ್ನ ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ.

The post ಪ್ರಭಾವಿಗಳಿಂದಲೇ ಅಕ್ರಮ ರೆಮ್​ಡಿಸಿವಿರ್ ಮಾರಾಟ.. ಹೆಡೆಮುರಿ ಕಟ್ಟಿದ ಪೊಲೀಸ್ appeared first on News First Kannada.

Source: newsfirstlive.com

Source link