ಪ್ರಭಾಸ್​​ ಅಭಿಮಾನಿಯ ಸೂಸೈಡ್​​ ನೋಟ್​ ವೈರಲ್; ತನ್ನ ಸಾವಿಗೆ ಇದೇ ಕಾರಣ ಎಂದ ಫ್ಯಾನ್!


ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್ ಅವರ ಅಭಿಮಾನಿಯೊಬ್ಬ ಡೆತ್​ ನೋಟ್​ ಬರೆದಿದ್ದು ತನ್ನ ಸಾವಿಗೆ ‘ರಾಧೆ ಶ್ಯಾಮ್’ ಚಿತ್ರತಂಡವೇ ಕಾರಣವಾಗುತ್ತದೇ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಹೌದು ‘ರಾಧೆ ಶ್ಯಾಮ್’ ಪ್ರಭಾಸ್​ ಮತ್ತು ಪೂಜ ಹೆಗಡೆ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್​ ಸಿನಿಮಾ. ನಿರ್ದೇಶಕ ರಾಧಾ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು, ಯುವಿ ಕ್ರಿಯೇಷನ್ಸ್ ಬ್ಯಾನರ್​ ನಡಿ ‘ರಾಧೆ ಶ್ಯಾಮ್’ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರತಂಡ ಚಿತ್ರದ ರಿಲೀಸ್ ದಿನಾಂಕವನ್ನು ಸಹ ಈಗಾಗಲೇ ಆನೌನ್ಸ್​ ಮಾಡಿದ್ದು ಮುಂದಿನ ವರ್ಷ ಜನವರಿ 14 ನೇ ತಾರೀಖು ‘ರಾಧೆ ಶ್ಯಾಮ್’ ಸಿನಿಮಾ ರಿಲೀಸ್​ ಆಗಲಿದೆ.

ಆದರೆ ಪ್ರಭಾಸ್ ಅಭಿಮಾನಿಯೊಬ್ಬ ‘ರಾಧೆ ಶ್ಯಾಮ್’ ಚಿತ್ರತಂಡ ಚಿತ್ರದ ಬಗ್ಗೆ ಯಾವುದೇ ಅಪ್​ಡೇಟ್ಸ್​ ನೀಡುತ್ತಿಲ್ಲ ಎಂಬ ಕಾರಣಕ್ಕೆ ಯುವಿ ಕ್ರಿಯೇಷನ್ಸ್ ತಂಡ ಮತ್ತು ನಿರ್ದೇಶಕ ರಾಧಾ ಕೃಷ್ಣ ವಿರುದ್ಧ ಡೆತ್​ನೋಟ್​ ಬರೆದಿದ್ದಾನೆ.

ನನ್ನ ಜೀವನದಲ್ಲಿ ಇಲ್ಲಿಯವರೆಗೆ ನಾನು ಯಾವುದೇ ಪತ್ರವನ್ನು ಬರೆದಿಲ್ಲ ಆದರೆ ಮೊದಲ ಬಾರಿಗೆ ನನ್ನ ನೆಚ್ಚಿನ ಹೀರೋ ಪ್ರಭಾಸ್​ ಚಿತ್ರಕ್ಕಾಗಿ ಡೆತ್​ನೋಟ್​ ಬರೆಯುತ್ತಿದ್ದೇನೆ. ನಾನು ಬಹಳ ದಿನಗಳಿಂದ ಪ್ರಭಾಸ್​ ಅವರ ‘ರಾಧೆ ಶ್ಯಾಮ್’ ಚಿತ್ರದ ಅಪ್​ಡೇಟ್ಸ್​ಗಾಗಿ ಕಾಯುತ್ತಿದ್ದೇನೆ. ಆದರೆ ಚಿತ್ರತಂಡ ಮಾತ್ರ ಪ್ರಭಾಸ್​ ಅಭಿಮಾನಿಗಳ ಮನವಿಗೆ ಸ್ಪಂದಿದುತ್ತಿಲ್ಲ. ನನ್ನ ಸಾವನ್ನು ನೋಡಿದ ಮೇಲಾದರೂ ಚಿತ್ರತಂಡ ಚಿತ್ರದ ಅಪ್​ಡೇಟ್​ ನೀಡುತ್ತದೆ ಎಂದು ಭಾವಿಸುತ್ತೇನೆ ನನ್ನ ಸಾವಿಗೆ ನಿರ್ದೇಶಕ ರಾಧಾ ಕೃಷ್ಣ ಮತ್ತು ಯುವಿ ಕ್ರಿಯೇಷನ್ಸ್ ತಂಡವೇ ಕಾರಣವಾಗುತ್ತದೇ ಎಂದು ಉಲ್ಲೇಖಿಸಿ ಡೆತ್​ನೋಟ್​ ಬರೆದಿದ್ದಾನೆ.

ಸದ್ಯ ಪ್ರಭಾಸ್​ ಅಭಿಮಾನಿ ಬರೆದಿರುವ ಈ ಡೆತ್​ನೋಟ್​ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

News First Live Kannada


Leave a Reply

Your email address will not be published. Required fields are marked *