ಪ್ರಭಾಸ್​​, ಪೂಜಾ ಹೆಗ್ಡೆ ಮತ್ತೊಂದು ರೊಮ್ಯಾಂಟಿಕ್​ ಸಾಂಗ್​ ಟೀಸರ್​ ಔಟ್​ ​


ಬಾಹುಬಲಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಲವ್​ ಕಪಲ್​ ಆಗಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ರಾಧೆ ಶ್ಯಾಮ್’. ಈ ಚಿತ್ರದ​ ಮತ್ತೊಂದು ಹಾಡಿನ ಪ್ರೋಮೋ ರಿಲೀಸ್​ ಆಗಿದೆ.

ಟೀಸರ್​, ಟ್ರೈಲರ್​ಗಳನ್ನು ಬಿಟ್ಟು ಚಿತ್ರಪ್ರೇಮಿಗಳು ಮನಸ್ಸಲ್ಲಿ ಗುನುಗುಟ್ಟುವಂತೆ ಮಾಡಿದ್ದ ಚಿತ್ರ ತಂಡ​ ಸಿನಿಮಾದ ಮತ್ತೊಂದು ‘ಸೋಚ್​ ಲೀಯೇ’ ಅನ್ನೋ ಫೀಲಿಂಗ್​ ಸಾಂಗ್​ ಪ್ರೋಮೋವನ್ನು ರಿಲೀಸ್​ ಮಾಡಿದೆ. ಇದೇ ತಿಂಗಳ 8ನೇ ತಾರೀಖು ಈ ಹಾಡು ಪೂರ್ಣವಾಗಿ ರಿಲೀಸ್​ ಆಗಲಿದೆ.

‘ರಾಧೆ ಶ್ಯಾಮ್’​ ಸಿನಿಮಾ ಒಂದು ಪಕ್ಕಾ ಲವ್​ ಸ್ಟೋರಿಯಾಗಿದ್ದು, ಮುಂದಿನ ವರ್ಷ ಜನವರಿ 14ನೇ ತಾರೀಖು ಕನ್ನಡ ಸೇರಿ 5 ಭಾಷೆಗಳಲ್ಲಿ ಏಕಕಾಲದಲ್ಲಿ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ಇನ್ನು’ರಾಧೆ ಶ್ಯಾಮ್’​ ಸಿನಿಮಾಗೆ ರಾಧಾಕೃಷ್ಣ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

The post ಪ್ರಭಾಸ್​​, ಪೂಜಾ ಹೆಗ್ಡೆ ಮತ್ತೊಂದು ರೊಮ್ಯಾಂಟಿಕ್​ ಸಾಂಗ್​ ಟೀಸರ್​ ಔಟ್​ ​ appeared first on News First Kannada.

News First Live Kannada


Leave a Reply

Your email address will not be published. Required fields are marked *