ಒಂದೇ ಒಂದು ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಇಮೇಜ್​ನೇ ಬದಲಾಯಿಸಿಬಿಡ್ತು. ಕನ್ನಡ ಸಿನಿಮಾ ಹಾಗೂ ತಂತ್ರಜ್ಞರು ಅಂದ್ರೆ ಅಸಡ್ಡೆ ತೋರ್ತಿದ್ದ ಅಕ್ಕ ಪಕ್ಕದೂರಿನ ಸಿನಿಮಾ ಮಂದಿ, ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಸಿನಿಮಾದಿಂದ ಕನ್ನಡ ಸಿನಿಮಾಗಳ ಮೇಲೆ ಕಣ್ಣಿಟ್ರು. ಅಲ್ಲದೇ ನಿರ್ದೇಶಕ ಪ್ರಶಾಂತ್ ನೀಲ್​ ಕಾಲ್​ ಶೀಟ್​​ಗಾಗಿ ಕ್ಯೂ ನಿಂತಿದ್ದಾರೆ. ಸದ್ಯ ನರಾಚಿ ಸೃಷ್ಟಿಕರ್ತ ನೀಲ್ ನಟ ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈ ಗ್ಯಾಫ್​ನಲ್ಲಿ ನೀಲ್- ಪ್ರಭಾಸ್ ಕಾಂಬಿನೇಷನ್​ನಲ್ಲಿ ಮತ್ತೊಂದು ಚಿತ್ರ ಮೂಡಿ ಬರಲಿದೆ ಅನ್ನೋ ಸುದ್ದಿ ಹೈದರಬಾದ್​ನಿಂದ ಬೆಂಗಳೂರಿನವರೆಗೂ ಹಬ್ಬಿದೆ.

ಹೌದು.. ಸದ್ಯ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇನ್ನೂ ನಾಲ್ಕೈದು ವರ್ಷಕ್ಕೆ ಆಗುವಷ್ಟು ಬ್ಯುಸಿಯಾಗಿದ್ದಾರೆ. ಹಾಗಿದ್ದರೂ ಇವರಿಬ್ಬರ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಪ್ರಶಾಂತ್ ನೀಲ್ ‘ಸಲಾರ್’ ಮುಗಿಸಿ ಜೂನಿಯರ್​ NTR ​ ಜೊತೆ ಸಿನಿಮಾ ಮಾಡೊದು ಪಕ್ಕಾ ಆಗಿದೆ. ಇದಾಗಿಯೂ ಪ್ರಶಾಂತ್ ನೀಲ್ ಮತ್ತೊಮ್ಮೆ ಪ್ರಭಾಸ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಅನ್ನೋ ಸುದ್ದಿ ಇದೀಗ ಸದ್ದು ಮಾಡ್ತಿದೆ. ಮೂಲಗಳ ಪ್ರಕಾರ ಪ್ರಭಾಸ್ ಜೊತೆ ಪ್ರಶಾಂತ್ ನೀಲ್, ಸಲಾರ್​ಗೂ ಮುಂಚೆ ಬೇರೆ ಸಿನಿಮಾ ಮಾಡಬೇಕಿತ್ತು. ಕಾರಣಾಂತರಗಳಿಂದ ಅದಕ್ಕೂ ಮುಂಚೆ ಸಲಾರ್ ಸಿನಿಮಾ ಕೈಗೆತ್ತಿಕೊಂಡ್ರು.

ಅಂದಹಾಗೆ ಬಾಹುಬಲಿ ಮುಗಿಸಿದ ಬಳಿಕ ಪ್ರಭಾಸ್ ಜೊತೆ ಅಂತಹದ್ದೇ ದೊಡ್ಡ ಬಜೆಟ್​ ಸಿನಿಮಾ ಮಾಡಬೇಕು ಅಂತ ನಿರ್ಮಾಪಕ ದಿಲ್ ರಾಜು ಪ್ಲ್ಯಾನ್ ಮಾಡಿಕೊಂಡಿದ್ರಂತೆ. ಆದರೆ ಬಾಹುಬಲಿ ಚಿತ್ರಕ್ಕಾಗಿ ಐದು ವರ್ಷಗಳ ಕಾಲ ಪ್ರಭಾಸ್​ ಬೇರೆ ಸಿನಿಮಾಗಳನ್ನ ಕೈ ಬಿಟ್ಟಿದ್ದರು. ಮತ್ತೊಮ್ಮೆ ಅದೇ ಮಾದರಿಯ ಸಿನಿಮಾ ಕೈಗೆತ್ತಿಕೊಂಡ್ರೆ, ಇನ್ನೂ ಕೆಲವು ವರ್ಷಗಳು ಕಳೆದು ಹೋಗುತ್ತೆ ಅನ್ನೋ ಕಾರಣಕ್ಕೆ ಪ್ರಭಾಸ್ ಐತಿಹಾಸಿಕ ಚಿತ್ರದ ಅಲೋಚನೆ ಕೈ ಬಿಟ್ಟು ಕಮರ್ಷಿಯಲ್ ಸಿನಿಮಾ ಮಾಡೋಕೆ ಮನಸ್ಸು ಮಾಡಿದ್ರಂತೆ. ಈ ಗ್ಯಾಫ್​ನಲ್ಲಿ ಪ್ರಶಾಂತ್ ನೀಲ್ ಕಥೆ ಇಷ್ಟವಾಗಿ ಸಲಾರ್ ಚಿತ್ರಕ್ಕೆ ಪ್ರಭಾಸ್ ಕಮಿಟ್ ಆಗಿದ್ದಾರೆ. ಆದರೆ ದಿಲ್ ರಾಜು ತಮ್ಮ ಕನಸಿನ ಚಿತ್ರಕ್ಕಾಗಿ ಪೂರ್ವ ಸಿದ್ದತೆಯಲ್ಲಿದ್ದು, ಹಿಂದೆ ಚರ್ಚಿಸಿದಂತೆ ಪ್ರಭಾಸ್ ಅಭಿನಯದ 25ನೇ ಚಿತ್ರವನ್ನ ವಿಶೇಷವಾಗಿಸಲು ಪ್ಲಾನ್ ಮಾಡಿ ನಿರ್ದೇಶಕ ಪ್ರಶಾಂತ್ ನೀಲ್​ಗೆ ಬಲೇ ಬೀಸಿದ್ದಾರೆ.

ಯೆಸ್​.. ತಾವು ಮೊದಲು ಅಂದುಕೊಂಡಂತೆ ಪೌರಾಣಿಕ ಕಥೆಯನ್ನ ನೀಲ್​ ಕೈಲಿ ರೆಡಿ ಮಾಡಿಸಿ, ಆ ಚಿತ್ರವನ್ನೇ ಪ್ರಭಾಸ್ 25ನೇ ಸಿನಿಮಾ ಆಗಿ ಹೊರತರಲು ದಿಲ್ ರಾಜು ಈಗಾಗಲೇ ಕಸರತ್ತು ಶುರು ಮಾಡಿದ್ದಾರೆ. ಅಲ್ಲದೇ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಆದರೆ ಪ್ರಭಾಸ್ ಸದ್ಯ ಸಲಾರ್ ಹಾಗೂ ಆದಿಪುರುಷ್ ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ. ಜೊತೆಗೆ ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾವೂ ಶುರುವಾಗಬೇಕಿದೆ. ಇನ್ನೊಂದೆಡೆ ಪ್ರಶಾಂತ್​ ನೀಲ್ ಸಲಾರ್​ ಮುಗಿಸಿ, ಜೂನಿಯರ್ NTR ಚಿತ್ರಕ್ಕೆ ಕೈಗೆತ್ತಿಕೊಳ್ಳಲಿದ್ದಾರೆ. ಸೋ.. ಈ ಎಲ್ಲಾ ಕಮಿಟ್ಮೆಂಟ್​​​ಗಳು ಕಂಪ್ಲೀಟ್​ ಆದ ಮೇಲೆ ಮತ್ತೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಪೌರಣಿಕ ಚಿತ್ರದಲ್ಲಿ ಒಂದಾಗ್ತಾರೆ ಅನ್ನೋ ಮಾತು ಜೋರಾಗಿಯೇ ಚರ್ಚೆ ಆಗ್ತಿದೆ.

The post ಪ್ರಭಾಸ್​-ಪ್ರಶಾಂತ್​ ನೀಲ್​ ಮತ್ತೊಂದು ಸಿನಿಮಾ.? ನಿರ್ಮಾಪಕ ದಿಲ್​ ರಾಜು ಫುಲ್​ ಸ್ಕೆಚ್​ appeared first on News First Kannada.

Source: newsfirstlive.com

Source link