ಪ್ರಭಾಸ್​ ಬಗ್ಗೆ ಹಬ್ಬಿದೆ 150 ಕೋಟಿ ರೂ. ಗಾಸಿಪ್​; ಸಂಬಳದ ವಿಷಯ ಕೇಳಿ ಹುಬ್ಬೇರಿಸಿದ ಫ್ಯಾನ್ಸ್​ | Prabhas reportedly getting Rs 150 Cr remuneration for Adipurush movie

ಪ್ರಭಾಸ್​ ಬಗ್ಗೆ ಹಬ್ಬಿದೆ 150 ಕೋಟಿ ರೂ. ಗಾಸಿಪ್​; ಸಂಬಳದ ವಿಷಯ ಕೇಳಿ ಹುಬ್ಬೇರಿಸಿದ ಫ್ಯಾನ್ಸ್​

ಪ್ರಭಾಸ್

ಪ್ಯಾನ್ ಇಂಡಿಯಾ ಸ್ಟಾರ್​ ಪ್ರಭಾಸ್​ ಅವರು ಸದ್ಯ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಕಾಲ್​ಶೀಟ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮೊದಲು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತ ಆಗಿದ್ದ ಅವರು ‘ಬಾಹುಬಲಿ’ ಚಿತ್ರದ ಯಶಸ್ಸಿನ ಬಳಿಕ ಬಹುಭಾಷೆಯಲ್ಲಿ ಜನಪ್ರಿಯತೆ ಗಳಿಸಿದರು. ಅದೇ ರೀತಿ ಅವರ ಸಂಭಾವನೆ ಕೂಡ ಹೆಚ್ಚಿದೆ. ಪ್ರಭಾಸ್​ ನಟಿಸುತ್ತಿರುವ ‘ಆದಿಪುರುಷ್​’ ಚಿತ್ರ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಪ್ರಭಾಸ್​ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಬಗ್ಗೆಯೂ ಈಗ ಗಾಸಿಪ್ ಹಬ್ಬಿದೆ. ಅದನ್ನು ಕೇಳಿ ಫ್ಯಾನ್ಸ್​ ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆದಿಪುರುಷ್​ ಸಿನಿಮಾ ತುಂಬ ಅದ್ದೂರಿಯಾಗಿ ಮೂಡಿಬರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬರೋಬ್ಬರಿ 500 ಕೋಟಿ ರೂ. ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ‘ತಾನಾಜಿ’ ಸಿನಿಮಾ ಮೂಲಕ ಭಾರಿ ಯಶಸ್ಸು ಕಂಡಿದ್ದ ನಿರ್ದೇಶಕ ಓಂ ರಾವುತ್​ ಅವರು ‘ಆದಿಪುರುಷ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದರಿಂದ ಅವರ ಕೆಲಸದ ಮೇಲೆ ನಿರ್ಮಾಪಕರಿಗೆ ಸಖತ್​ ಭರವಸೆ ಇದೆ. ಇನ್ನು, ಪ್ರಭಾಸ್​ಗೆ ಇರುವ ದೊಡ್ಡ ಫ್ಯಾನ್ಸ್​ ಫಾಲೋಯಿಂಗ್​ ನಂಬಿಕೊಂಡು ಇಷ್ಟೊಂದು ಬಜೆಟ್​ ಸುರಿಯಲಾಗಿದೆ.

ಆದಿಪುರುಷ್​ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಗಾಸಿಪ್​ ಹರಿದಾಡುತ್ತಿದೆ. ಈ ಮಾಹಿತಿ ಬಗ್ಗೆ ಕೆಲವರಿಗೆ ಅನುಮಾನ ಕೂಡ ಇದೆ. ಯಾಕೆಂದರೆ, ಪ್ರಭಾಸ್​ ನಟಿಸಿದ ಪ್ಯಾನ್​ ಇಂಡಿಯಾ ಸಿನಿಮಾ ‘ಸಾಹೋ’ ಸೋತಿತ್ತು. ಆ ಬಳಿಕ ಅವರಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಕೊಡಲು ಸಾಧ್ಯವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಆದಿಪುರುಷ್​ ಚಿತ್ರದಲ್ಲಿ ರಾವಣನಾಗಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಕೃತಿ ಸನೋನ್​ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. 2022ರ ಜ.14ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ‘ಕೆಜಿಎಫ್​’ ನಿರ್ದೇಶಕ ಪ್ರಶಾಂತ್​ ನೀಲ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ಸಲಾರ್​’ ಚಿತ್ರದಲ್ಲೂ ಪ್ರಭಾಸ್​ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ 25ನೇ ಸಿನಿಮಾ ಕೂಡ ಅನೌನ್ಸ್​ ಆಗಿದೆ.

ಇದನ್ನೂ ಓದಿ:

Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ

ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲಿರುವ ನಿರ್ದೇಶಕ; ‘ಬಾಹುಬಲಿ’ ನಟನಿಗೆ ಅಂಥದ್ದೇನಾಗಿದೆ?

TV9 Kannada

Leave a comment

Your email address will not be published. Required fields are marked *