ಪ್ರಭಾಸ್ ಫ್ಯಾನ್​ ಆತ್ಮಹತ್ಯೆ ಪತ್ರಕ್ಕೆ ಬೆದರಿತಾ ಚಿತ್ರತಂಡ? ‘ರಾಧೆ ಶ್ಯಾಮ್​’​ ಕಡೆಯಿಂದ ಸಿಕ್ತು ಸೂಪರ್​ ಅಪ್​ಡೇಟ್​ | Prabhas Pooja Hegde starrer Radhe Shyam first song to be released on 15 November


ಪ್ರಭಾಸ್ ಫ್ಯಾನ್​ ಆತ್ಮಹತ್ಯೆ ಪತ್ರಕ್ಕೆ ಬೆದರಿತಾ ಚಿತ್ರತಂಡ? ‘ರಾಧೆ ಶ್ಯಾಮ್​’​ ಕಡೆಯಿಂದ ಸಿಕ್ತು ಸೂಪರ್​ ಅಪ್​ಡೇಟ್​

ಪ್ರಭಾಸ್​, ಪೂಜಾ ಹೆಗ್ಡೆ

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಮತ್ತು ಕರಾವಳಿ ಚೆಲುವೆ ಪೂಜಾ ಹೆಗ್ಡೆ (Pooja Hegde) ಜೋಡಿಯ ‘ರಾಧೆ ಶ್ಯಾಮ್​’ (Radhe Shyam) ಸಿನಿಮಾದ ಅಪ್​ಡೇಟ್​ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಅಂಥವರಿಗೆಲ್ಲ ಈಗ ಗುಡ್​ ನ್ಯೂಸ್​ ಸಿಕ್ಕಿದೆ. ಚಿತ್ರತಂಡದಿಂದ ಏನೂ ಹೊಸ ವಿಚಾರ ತಿಳಿಯುತ್ತಿಲ್ಲ ಎಂದು ಬೇಸತ್ತಿದ್ದ ಓರ್ವ ಅಭಿಮಾನಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಪತ್ರ ಬರೆದಿದ್ದ. ಅದರ ಬೆನ್ನಲ್ಲೇ ‘ರಾಧೆ ಶ್ಯಾಮ್​’ ನಿರ್ಮಾಪಕರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ದಿನಾಂಕ ಕೂಡ ನಿಗದಿ ಆಗಿದೆ. ಸೋಮವಾರ (ನ.15) ಸಂಜೆ 5 ಗಂಟೆಗೆ ಸಾಂಗ್​ ರಿಲೀಸ್​ ಆಗಲಿದೆ ಎಂದು ‘ಯುವಿ ಕ್ರಿಯೇಷನ್ಸ್​’ ಅಧಿಕೃತ ಟ್ವಿಟರ್​ ಖಾತೆ ಮೂಲಕ ತಿಳಿಸಲಾಗಿದೆ.

ಅಭಿಮಾನಿಗಳು ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಈಗಾಗಲೇ ಈ ಸಿನಿಮಾದ ಟೀಸರ್​ಗಳು ರಿಲೀಸ್​ ಆಗಿದ್ದು, ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿವೆ. ವಿಕ್ರಮಾದಿತ್ಯ ಎಂಬ ಪಾತ್ರವನ್ನು ಪ್ರಭಾಸ್​ ನಿಭಾಯಿಸುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಪ್ರಭಾಸ್​ ಅವರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ‘ರಾಧೆ ಶ್ಯಾಮ್​’ ಭಿನ್ನವಾಗಿ ಮೂಡಿಬಂದಿದೆ ಎಂಬುದಕ್ಕೆ ಟೀಸರ್​ಗಳೇ ಸಾಕ್ಷಿ ಒದಗಿಸುತ್ತಿವೆ. ಲವರ್​ ಬಾಯ್​ ಗೆಟಪ್​ನಲ್ಲಿ ಪ್ರಭಾಸ್​ ರಂಜಿಸಲಿದ್ದಾರೆ.

ಅಭಿಮಾನಿಯ ಆತ್ಮಹತ್ಯೆ ಪತ್ರದಲ್ಲಿ ಏನಿತ್ತು?

‘ಈವರೆಗೆ ನಾನು ಯಾವುದೇ ಲೆಟರ್​ ಬರೆದಿಲ್ಲ. ಆದರೆ ಸೂಸೈಡ್​ ಲೆಟರ್​ ಬರೆಯುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಕೊನೇ ಪಕ್ಷ ನನ್ನ ಸಾವನ್ನು ನೋಡಿದ ಬಳಿಕವಾದರೂ ರಾಧೆ ಶ್ಯಾಮ್​ ತಂಡದವರು ಅಪ್​ಡೇಟ್​ ನೀಡುತ್ತಾರೆ ಎಂದುಕೊಂಡಿದ್ದೇನೆ. ಸಾಕಾಗಿ ಹೋಗಿದೆ. ಇನ್ಮೇಲೆ ಕೇಳುವುದಿಲ್ಲ. ನನ್ನ ಈ ಆತ್ಮಹತ್ಯೆ ನಿರ್ಧಾರಕ್ಕೆ ‘ಯುವಿ ಕ್ರಿಯೇಷನ್ಸ್​’ ಮತ್ತು ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ಅವರೇ ಕಾರಣ’ ಎಂದು ಪ್ರಭಾಸ್​ ಅವರ ಹುಚ್ಚು ಅಭಿಮಾನಿಯು ಸೂಸೈಡ್​​ ಲೆಟರ್​ನಲ್ಲಿ ಬರೆದಿದ್ದ. ಅದು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ಪ್ರಭಾಸ್​ ಕೈಯಲ್ಲಿವೆ ಹಲವು ಚಿತ್ರಗಳು:

‘ಬಾಹುಬಲಿ’ ಯಶಸ್ಸಿನ ಬಳಿಕ ಪ್ರಭಾಸ್ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಆ ನಂತರ ಅವರು ಅಭಿನಯಿಸಿದ ‘ಸಾಹೋ’ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಹಾಗಂತ ಅವರಿಗೆ ಇರುವ ಬೇಡಿಕೆ​ ಕಿಂಚಿತ್ತೂ ಕಡಿಮೆ ಆಗಲಿಲ್ಲ. ಈಗ ಪ್ರಭಾಸ್​ ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಓಂ ರಾವುತ್​ ನಿರ್ದೇಶನದ ‘ಆದಿಪುರುಷ್​’, ಪ್ರಶಾಂತ್ ನೀಲ್​ ನಿರ್ದೇಶನದ ‘ಸಲಾರ್​’, ರಾಧಾ ಕೃಷ್ಣ ಕುಮಾರ್​ ನಿರ್ದೇಶನದ ‘ರಾಧೆ ಶ್ಯಾಮ್​’ ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ. 2022ರ ಜ.14ರಂದು ‘ರಾಧೆ ಶ್ಯಾಮ್​’ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

TV9 Kannada


Leave a Reply

Your email address will not be published. Required fields are marked *