ಹೈದರಾಬಾದ್: ಟಾಲಿವುಡ್ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾದ ಹಾಡನ್ನು ಹರಾಜಾಕಲು ಸಂಗೀತಾ ನಿರ್ದೇಶಕ ಗಿಬ್ರಾನ್ ಮುಂದಾಗಿದ್ದಾರೆ.

ಕೊರೊನಾದಿಂದ ದೇಶದಲ್ಲಿ ಸಾಕಷ್ಟು ಜನ ಕಷ್ಟ ಪಡುತ್ತಿದ್ದಾರೆ. ಈ ವೇಳೆ ಅನೇಕ ಸೆಲೆಬ್ರೆಟಿಗಳು ತಮ್ಮ ಕೈಲಾದಷ್ಟು ಸಹಾಯ ಜನರಿಗೆ ಮಾಡುತ್ತಿದ್ದಾರೆ. ಅದರಂತೆ ಸಂಗೀತ ನಿರ್ದೇಶಕ ಗಿಬ್ರಾನ್ ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇದೀಗ ಸಿದ್ಧರಾಗಿದ್ದಾರೆ. ನಟ ಡಾರ್ಲಿಂಗ್ ಪ್ರಬಾಸ್ ಅಭಿನಯದ ಸಾಹೋ ಸಿನಿಮಾದ ಹಾಡೊಂದನ್ನು ಹರಾಜಿಗೆ ಹಾಕುವ ಮೂಲಕ ಅದರಿಂದ ಬಂದ ಹಣದಲ್ಲಿ ಜನರಿಗೆ ಸಹಾಯ ಮಾಡಲು ಪ್ಲಾನ್ ಮಾಡಿದ್ದಾರೆ.

ಸಾಹೋ ಸಿನಿಮಾಗೆ ಸಂಗೀತ ನೀಡಿದ್ದ ಗಿಬ್ರಾನ್ ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್ ಸಾಂಗ್ ಕಂಪೋಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಾಂಗ್‍ನನ್ನು ಬಿಡುಗಡೆಗೊಳಿಸಲಾಗಲಿಲ್ಲ. ಆದರೆ ಇದೀಗ ಆ ಹಾಡನ್ನು ಎನ್‍ಎಫ್‍ಟಿ ವೆಬ್‍ಸೈಟ್ ಮೂಲಕ ಹರಾಜು ಹಾಕಲು ನಿರ್ಧರಿಸಿದ್ದು, ಅದರಿಂದ ಬಂದ ಹಣದಲ್ಲಿ ಶೇ 50 ರಷ್ಟು ತಮಿಳುನಾಡು ಸಿಎಂ ರಿಲೀಫ್ ಫಂಡ್‍ಗೆ ದೇಣಿಗೆ ನೀಡುತ್ತೇನೆ. ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಪರದಾಡುತ್ತಿರುವವರಿಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

ಈವರೆಗೂ ಆ ಹಾಡನ್ನು ನಿರ್ದೇಶಕ ಸುಜೀತ್ ಹಾಗೂ ನಾನು ಬಿಟ್ಟರೆ ಯಾರು ಕೇಳಿಲ್ಲ. ಅಲ್ಲದೆ ಆ ಹಾಡು ಬಹಳ ಸೊಗಸಾಗಿ ಮೂಡಿಬಂದಿದ್ದು, ನಮ್ಮಿಬ್ಬರಿಗೆ ಬಹಳ ಇಷ್ಟವಾಗಿತ್ತು ಎಂದು ಹೇಳಿದ್ದಾರೆ. ಇದನ್ನು ಓದಿ:ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

ಒಟ್ಟಾರೆ ಇದೇ ಪ್ರಪ್ರಥಮ ಬಾರಿಗೆ ವೆಬ್‍ಸೈಟ್ ಮೂಲಕ ಭಾರತದಲ್ಲಿ ಹಾಡೊಂದು ಹರಾಜಾಗುತ್ತಿದೆ ಎಂದೇ ಹೇಳಬಹುದು.

The post ಪ್ರಭಾಸ್ ಹಾಡು ಹರಾಜಾಕುತ್ತಿರುವ ಗಿಬ್ರಾನ್ appeared first on Public TV.

Source: publictv.in

Source link