ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ದಿನದಾಟದ 2ನೇ ಸೆಷನ್ಲ್ಲಿ ಟೀಮ್ ಇಂಡಿಯಾ ವಿರುದ್ಧದ ಪ್ರವಾಸಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಮೊದಲ ಸೆಷಲ್ನಲ್ಲಿ 61 ರನ್ಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಟೀಮ್ ಇಂಡಿಯಾ, 2ನೇ ಸೆಷನ್ನಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಭೋಜನ ವಿರಾಮದ ಬಳಿಕ ಬಿಗ್ ಇನ್ನಿಂಗ್ಸ್ ಕಟ್ಟೋ ಮುನ್ಸೂಚನೆ ನಿಡಿದ್ದ ಶುಭ್ಮನ್ ಗಿಲ್ 52 ರನ್ ಗಳಿಸಿದ್ದಾಗ ವೇಗಿ ಕೈಲ್ ಜೆಮಿಸನ್ ಓವರ್ನಲ್ಲಿ ಕ್ಲೀನ್ ಬೋಲ್ಡ್ ಆಗಿ ನಿರ್ಗಮಿಸಿದರೆ. ಈ ಬೆನ್ನಲ್ಲೇ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ಟಿಮ್ ಸೌಥಿ ಓವರ್ನಲ್ಲಿ ವಿಕೆಟ್ ಕೀಪರ್ ಟಾಮ್ ಬ್ಲಂಡಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಈ ಬಳಿಕ ಬಿಗ್ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆ ಹುಟ್ಟುಹಾಕಿದ್ದ ಹಂಗಾಮಿ ನಾಯಕ ರಹಾನೆ, 35 ರನ್ಗಳಿಗೆ ತಮ್ಮ ಆಟವನ್ನ ಅಂತ್ಯವಾಡಿದರು. ಸದ್ಯ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶ್ರೇಯಸ್ ಅಯ್ಯರ್ 17 ರನ್, ಆಲ್ರೌಂಡರ್ ಜಡೇಜಾ 6 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ 2ನೇ ಸೆಷನ್ ಅಂತ್ಯಕ್ಕೆ ಟೀಮ್ ಇಂಡಿಯಾ 56 ಓವರ್ಗಳಲ್ಲಿ 154 ರನ್ ಕಲೆಹಾಕಿ 4 ವಿಕೆಟ್ ಕಳೆದುಕೊಂಡಿದೆ.
That will be Tea on Day 1 of the 1st Test.#TeamIndia lose three wickets in the second session.
Scorecard – https://t.co/WRsJCUhS2d #INDvNZ @Paytm pic.twitter.com/SygJbWpp6n
— BCCI (@BCCI) November 25, 2021