ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​: ವಿಡಿಯೋ ವೈರಲ್ | KSRTC bus conductor kicks a passenger and pushes him on the road: Video goes viral


ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಕಂಡಕ್ಟರ್ ಒದ್ದಿದ್ದಾನೆ. ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಚಲಿಸಿದೆ.

ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​: ವಿಡಿಯೋ ವೈರಲ್

ಪ್ರಯಾಣಿಕನನ್ನು ಕಾಲಿನಿಂದ ಒದ್ದು ಕೆಳಗಿಳಿಸಿದ ಕಂಡಕ್ಟರ್.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 08, 2022 | 10:23 AM
ಮಂಗಳೂರು: ಕೆಎಸ್ ಆರ್ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರು ತಾಲೂಕಿ‌ನ ಈಶ್ವರಮಂಗಲದಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ತಾಣಗಳಲ್ಲಿ ಕಂಡಕ್ಟರ್ ಅಮಾನವೀಯ ವರ್ತನೆ ವೈರಲ್ ಆಗಿದೆ. ಪ್ರಯಾಣಿಕ ಕಡಿದು ಬಸ್ ಹತ್ತಿದಾಗಲೇ ಕಂಡಕ್ಟರ್ ತಡೆದಿದ್ದಾನೆ. ಪ್ರಯಾಣಿಕನ ಕೊಡೆ ಕಿತ್ತೆಸೆದು ಬಸ್ ಒಳಗಡೆಯೇ ಕೈಯಿಂದ ಹಲ್ಲೆ ಮಾಡಲಾಗಿದೆ. ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಕಂಡಕ್ಟರ್ ಒದ್ದಿದ್ದಾನೆ. ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಚಲಿಸಿದೆ. ಸಾಮಾಜಿಕ ತಾಣಗಳಲ್ಲಿ ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ನಿರ್ವಾಹಕನ ದುರ್ವರ್ತನೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.