ಮೈಸೂರು: ಕೆಎಸ್​ಆರ್​ಟಿಸಿ ಬಸ್​ ಪ್ರಯಾಣದ ದರದಲ್ಲಿ ಯಾವುದೇ ಏರಿಕೆ ಇಲ್ಲ ಅಂತಾ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ.

ಮೈಸೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಮಹಾಮಾರಿ ಕೊರೊನಾದಿಂದಾಗಿ ನಿಗಮ ಸಾಕಷ್ಟು ನಷ್ಟದಲ್ಲಿದೆ. ಜೊತೆಗೆ ಜನರು ಸಹ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ದರ ಏರಿಸುವುದು ಸರಿಯಲ್ಲ. ಹೀಗಾಗಿ ಸದ್ಯಕ್ಕೆ ದರ ಏರಿಸುವ ವಿಚಾರವನ್ನ ಕೈಬಿಟ್ಟಿದ್ದೇವೆ ಎಂದರು.

ಆದಾಯ ಬಂದ ನಂತರ ಪರಿಷ್ಕರಣೆ 
ಮತ್ತೆ ಸಾರಿಗೆ ನೌಕರರು ಮುಷ್ಕರದ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿ.. ಲಾಕ್‌ಡೌನ್‌ನಿಂದ ನಿಗಮಕ್ಕೆ 4000 ಕೋಟಿ ರೂಪಾಯಿ ನಷ್ಟ ಆಗಿದೆ. ಹೀಗಿದ್ದರೂ ನೌಕರರ 9 ಬೇಡಿಕೆಯಲ್ಲಿ 8 ಬೇಡಿಕೆಯನ್ನ ಈಗಾಗಲೇ ಈಡೇರಿಸಿದ್ದೇವೆ. ಕೋವಿಡ್​ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಪಾಡಲು ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರುವುದರಿಂದ ಈಗ ಬರುತ್ತಿರುವ ಆದಾಯ ಇಂಧನಕ್ಕೂ ಸಾಲುತ್ತಿಲ್ಲ ಅಂತಾ ಮಾಹಿತಿ ನೀಡಿದರು.

ಇಂತಹ ಸಮಯದಲ್ಲಿ ವೇತನ ಹೆಚ್ಚಳ ಮಾಡುವುದು ಕಷ್ಟ. ಹೀಗಾಗಿ ನಿಗಮಕ್ಕೆ ಆದಾಯ ಬರಲು ಶುರುವಾದ ನಂತರ ವೇತನ ಪರಿಷ್ಕರಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

The post ಪ್ರಯಾಣಿಕರಿಗೆ ಗುಡ್​​​​​ನ್ಯೂಸ್​.. KSRTC ಪ್ರಯಾಣದ ದರದಲ್ಲಿ ಯಾವುದೇ ಏರಿಕೆ ಇಲ್ಲ appeared first on News First Kannada.

Source: newsfirstlive.com

Source link