ಪ್ರಯಾಣ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಮಹಾರಾಷ್ಟ್ರ, ಹೈ ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ | In view of Covid’s Omicron variant Maharashtra revises travel guidelines for all incoming passengers


ಪ್ರಯಾಣ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಮಹಾರಾಷ್ಟ್ರ, ಹೈ ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

ಪ್ರಾತಿನಿಧಿಕ ಚಿತ್ರ

ದೆಹಲಿ: ಮಹಾರಾಷ್ಟ್ರ (Maharashtra) ಸರ್ಕಾರವು ಎಲ್ಲಾ ಒಳಬರುವ ಪ್ರಯಾಣಿಕರಿಗೆ ತನ್ನ ಪ್ರಯಾಣ ಮಾರ್ಗಸೂಚಿಗಳನ್ನು (travel guidelines) ಗುರುವಾರ ಪರಿಷ್ಕರಿಸಿದೆ. ಕೇಂದ್ರ ಸರ್ಕಾರವು ಹೊರಡಿಸಿದ ಕೊವಿಡ್ 19 ಪ್ರಮಾಣಿತ ಕಾರ್ಯಾಚರಣೆಗಳು ಮತ್ತು ಮಾರ್ಗಸೂಚಿಗಳೊಂದಿಗೆ ತನ್ನ ಆದೇಶವು ಭಿನ್ನವಾಗಿದೆ ಎಂದು ಕೇಂದ್ರವು ರಾಜ್ಯಕ್ಕೆ ಪತ್ರ ಬರೆದ ಒಂದು ದಿನದ ನಂತರ ಮಹಾರಾಷ್ಟ್ರ ಈ ಪರಿಷ್ಕರಣೆ ಮಾಡಿದೆ. ಇತ್ತೀಚಿನ ಮಾರ್ಗಸೂಚಿಗಳ ಅಡಿಯಲ್ಲ  ಮೂರು “ಹೆಚ್ಚಿನ ಅಪಾಯದ” ರಾಷ್ಟ್ರಗಳ ಪ್ರಯಾಣಿಕರು ಕೊವಿಡ್‌ನ ಓಮಿಕ್ರಾನ್(Omicron) ರೂಪಾಂತರಿ ಆತಂಕದ ದೃಷ್ಟಿಯಿಂದ ಮಹಾರಾಷ್ಟ್ರದ ವಿಮಾನ ನಿಲ್ದಾಣದ ಪರಿಷ್ಕೃತ ನಿಯಮಗಳ ಅಡಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್​​ಗೆ (institutional quarantine) ಒಳಗಾಗುತ್ತಾರೆ. ಆದಾಗ್ಯೂ, “ಅಪಾಯದಲ್ಲಿರುವ” ರಾಷ್ಟ್ರಗಳ ಪ್ರಯಾಣಿಕರು ಕೇಂದ್ರದ ನಿಯಮಗಳನ್ನು ಅನುಸರಿಸಬೇಕು. ಹೈ ರಿಸ್ಕ್ ಅಥವಾ”ಹೆಚ್ಚಿನ ಅಪಾಯದ” ರಾಷ್ಟ್ರಗಳೆಂದರೆ ದಕ್ಷಿಣ ಆಫ್ರಿಕಾ, ಬೋಟ್ಸ್ವಾನ ಮತ್ತು ಜಿಂಬಾಬ್ವೆ. ಈ ರಾಷ್ಟ್ರಗಳ ಪ್ರಯಾಣಿಕರನ್ನು “ಆದ್ಯತೆಯ ಮೇಲೆ ಡಿಬೋರ್ಡ್ ಮಾಡಲಾಗುವುದು. ಇವರನ್ನು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ” ಎಂದು ಹೊಸ ನಿಯಮಗಳು ಹೇಳಿವೆ.

ಈ ನಿಯಮವು ಅವರ ಆಗಮನದ 15 ದಿನಗಳ ಮೊದಲು ಯಾವುದೇ ಸಮಯದಲ್ಲಿ ಈ ರಾಷ್ಟ್ರಗಳಿಗೆ ಭೇಟಿ ನೀಡಿದ ಜನರಿಗೆ ಮತ್ತು ರೋಗಲಕ್ಷಣಗಳನ್ನು ಹೊಂದಿರುವ ಯಾವುದೇ ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಸಾಂಸ್ಥಿಕ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ ನಂತರ ಪ್ರಯಾಣಿಕರು ಆರ್​​ಟಿಪಿಸಿಆರ್ (RTPCR )ಪರೀಕ್ಷೆಗೆ ಒಳಗಾಗುತ್ತಾರೆ. ಫಲಿತಾಂಶವು ನಕಾರಾತ್ಮಕವಾಗಿದ್ದರೆ, ಏಳು ದಿನಗಳ ಹೋಮ್ ಕ್ವಾರಂಟೈನ್‌ಗೆ  ಒಳಗಾಗುತ್ತಾರೆ. “ಅಪಾಯದಲ್ಲಿರುವ” ರಾಷ್ಟ್ರಗಳ ಪ್ರಯಾಣಿಕರಿಗೆ ಇನ್ನು ಮುಂದೆ ಆಗಮನದ ನಂತರ ಸಾಂಸ್ಥಿಕ ಕ್ವಾರಂಟೈನ್ ಅಗತ್ಯವಿಲ್ಲ.

ದೇಶೀಯ ಪ್ರಯಾಣಿಕರು ಆಗಿದ್ದರೆ , ಪ್ರಯಾಣಿಕರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿರಬೇಕು ಅಥವಾ ಋಣಾತ್ಮಕ RT-PCR ವರದಿಯನ್ನು ಹೊಂದಿರಬೇಕು, ಇದಕ್ಕಾಗಿ ಪರೀಕ್ಷೆಯನ್ನು 72 ಗಂಟೆಗಳ ಒಳಗೆ ವಿಮಾನ ಹತ್ತುವ ಮೊದಲು ನಡೆಸಲಾಗುತ್ತದೆ.

ಬುಧವಾರ, ಮಹಾರಾಷ್ಟ್ರ ಸರ್ಕಾರವು ‘ಅಪಾಯದಲ್ಲಿರುವ’ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಏಳು ದಿನಗಳ ಸಾಂಸ್ಥಿಕ ಸಂಪರ್ಕತಡೆಯನ್ನು ಕಡ್ಡಾಯಗೊಳಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರವೊಂದನ್ನು ಕಳುಹಿಸಿದ್ದು, ಅದರ ಮಾರ್ಗಸೂಚಿಗಳೊಂದಿಗೆ ಹೊಂದಿಕೊಳ್ಳುವಂತೆ ಒತ್ತಾಯಿಸಿದೆ.

ಇಂದಿನಿಂದ 50 ಕ್ಕೂ ಹೆಚ್ಚು ರಾಷ್ಟ್ರಗಳು ಒಮಿಕ್ರಾನ್‌ ಪ್ರಕರಣಗಳನ್ನು ಹೊಂದಿವೆ ಅಥವಾ “ಅಪಾಯದಲ್ಲಿದೆ”. ಈ ಪಟ್ಟಿಯಲ್ಲಿ ಯುಕೆ, ಜರ್ಮನಿ, ಸ್ಪೇನ್, ಬೆಲ್ಜಿಯಂ ಮತ್ತು ಇಟಲಿಯಂತಹ ಯುರೋಪಿಯನ್ ರಾಷ್ಟ್ರಗಳು ಸೇರಿವೆ. ಅಲ್ಲದೆ, ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಇಸ್ರೇಲ್, ಹಾಂಗ್ ಕಾಂಗ್ ಮತ್ತು ಜಪಾನ್ ಒಮಿಕ್ರಾನ್ ಪ್ರಕರಣಗಳನ್ನು ದೃಢಪಡಿಸಿವೆ.

TV9 Kannada


Leave a Reply

Your email address will not be published. Required fields are marked *