ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ: ಕುವೈತ್​​ನ ಸೂಪರ್ ಮಾರ್ಕೆಟ್​​ಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಬಹಿಷ್ಕಾರ | BJP official’s Remarks about the Prophet Muhammad Kuwaiti supermarket pulled Indian products from its shelves


ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ: ಕುವೈತ್​​ನ ಸೂಪರ್ ಮಾರ್ಕೆಟ್​​ಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಬಹಿಷ್ಕಾರ

ಕುವೈತ್ ಸೂಪರ್ ಮಾರ್ಕೆಟ್​​ನಲ್ಲಿ ಭಾರತದ ಉತ್ಪನ್ನಗಳ ಮೇಲೆ ಪ್ಲಾಸ್ಟಿಕ್ ಕವರ್ ಹೊದಿಸಿರುವುದು

Image Credit source: AFP

ಕುವೈತ್ ಸಿಟಿಯ ಹೊರಗಿರುವ ಸೂಪರ್ ಮಾರ್ಕೆಟ್‌ನಲ್ಲಿ ಅಕ್ಕಿಯ ಚೀಲಗಳು, ಮಸಾಲೆಗಳು ಮತ್ತು ಮೆಣಸಿನಕಾಯಿಗಳ ಕಪಾಟುಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿತ್ತು. ಅರೇಬಿಕ್ ಭಾಷೆಯಲ್ಲಿ “ನಾವು ಭಾರತೀಯ ಉತ್ಪನ್ನಗಳನ್ನು ತೆಗೆದುಹಾಕಿದ್ದೇವೆ” ಎಂದು ಬರೆಯಲಾಗಿದೆ.

ಕುವೈತ್ ಸಿಟಿ: ಪ್ರವಾದಿ ಮೊಹಮ್ಮದ್ (Prophet Muhammad) ಕುರಿತು ಬಿಜೆಪಿ (BJP) ನಾಯಕರು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಸೋಮವಾರ ಆಕ್ರೋಶ ಹೆಚ್ಚಾಗಿದ್ದು ಕುವೈತ್ (Kuwait) ಸೂಪರ್ ಮಾರ್ಕೆಟ್ ಭಾರತೀಯ ಉತ್ಪನ್ನಗಳನ್ನು ತನ್ನ ಕಪಾಟಿನಿಂದ ಹೊರತೆಗೆದಿದೆ. ಅಲ್-ಅರ್ದಿಯಾ ಕೋ-ಆಪರೇಟಿವ್ ಸೊಸೈಟಿ ಅಂಗಡಿಯ ಕಾರ್ಮಿಕರು ಬಿಜೆಪಿ ನಾಯಕರ ಹೇಳಿಕೆಗಳನ್ನು “ಇಸ್ಲಾಮೋಫೋಬಿಕ್” ಎಂದು ಖಂಡಿಸಿ ಪ್ರತಿಭಟಿಸಿದ್ದು ಚಹಾ ಮತ್ತು ಭಾರತದ ಇತರ ಉತ್ಪನ್ನಗಳನ್ನು ಟ್ರಾಲಿಗಳಲ್ಲಿ ತುಂಬಿಸಲಾಗಿದೆ. ಸೌದಿ ಅರೇಬಿಯಾ, ಕತಾರ್ ಮತ್ತು ಈ ಪ್ರದೇಶದ ಇತರ ದೇಶಗಳು ಸೇರಿದಂತೆ ಕೈರೋದ ಪ್ರಭಾವಿ ಅಲ್-ಅಜರ್ ವಿಶ್ವವಿದ್ಯಾಲಯವು ಬಿಜೆಪಿಯ ವಕ್ತಾರರ ಹೇಳಿಕೆಯನ್ನು ಖಂಡಿಸಿವೆ. ಕುವೈತ್ ಸಿಟಿಯ ಹೊರಗಿರುವ ಸೂಪರ್ ಮಾರ್ಕೆಟ್‌ನಲ್ಲಿ ಅಕ್ಕಿಯ ಚೀಲಗಳು, ಮಸಾಲೆಗಳು ಮತ್ತು ಮೆಣಸಿನಕಾಯಿಗಳ ಕಪಾಟುಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿತ್ತು. ಅರೇಬಿಕ್ ಭಾಷೆಯಲ್ಲಿ “ನಾವು ಭಾರತೀಯ ಉತ್ಪನ್ನಗಳನ್ನು ತೆಗೆದುಹಾಕಿದ್ದೇವೆ” ಎಂದು ಬರೆಯಲಾಗಿದೆ. “ನಾವು, ಕುವೈತ್​​ನ ಮುಸ್ಲಿಂ ಜನರು, ಪ್ರವಾದಿಯನ್ನು ಅವಮಾನಿಸುವುದನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಅಂಗಡಿಯ ಸಿಇಒ ನಾಸರ್ ಅಲ್-ಮುತೈರಿ ಹೇಳಿರುವುದಾಗಿ ಎಎಫ್‌ಪಿಗೆ ವರದಿ ಮಾಡಿದೆ . ಕಂಪನಿಯಾದ್ಯಂತ ಬಹಿಷ್ಕಾರವನ್ನು ಪರಿಗಣಿಸಲಾಗುತ್ತಿದೆ ಎಂದು ಈ ಅಂಗಡಿಗಳಶ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗಳು ಮುಸ್ಲಿಂ ರಾಷ್ಟ್ರಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿವೆ.

ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅನಿಲ-ಸಮೃದ್ಧ ಗಲ್ಫ್ ರಾಜ್ಯಕ್ಕೆ ವ್ಯಾಪಾರವನ್ನು ಉತ್ತೇಜಿಸುವ ಉದ್ದೇಶದಿಂದ ಭೇಟಿ ನೀಡಿದ್ದರಿಂದ, “ಇಸ್ಲಾಮೋಫೋಬಿಕ್” ಕಾಮೆಂಟ್‌ಗಳಿಗಾಗಿ ಭಾರತವು ಕ್ಷಮೆಯಾಚಿಸಬೇಕು ಎಂದು ಕತಾರ್ ಭಾನುವಾರ ಒತ್ತಾಯಿಸಿತು.

ಕತಾರ್ ಮತ್ತು ಕುವೈತ್ ನಂತರ ಇರಾನ್ ಕೂಡಾ ಭಾರತೀಯ ರಾಯಭಾರಿಯನ್ನು ಕರೆಸಿದೆ ಎಂದು ಎಂದು ರಾಜ್ಯ ಸುದ್ದಿ ಸಂಸ್ಥೆ ಐಆರ್​ಎನ್​​ಎ (IRNA) ಭಾನುವಾರ ತಡರಾತ್ರಿ ತಿಳಿಸಿದೆ.

ಇಸ್ಲಾಂ ಧರ್ಮದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಅಲ್-ಅಝರ್ ವಿಶ್ವವಿದ್ಯಾನಿಲಯವು ಈ ಹೇಳಿಕೆಗಳು “ನಿಜವಾದ ಭಯೋತ್ಪಾದನೆ” ಮತ್ತು “ಇಡೀ ಜಗತ್ತನ್ನು ಮಾರಣಾಂತಿಕ ಬಿಕ್ಕಟ್ಟು ಮತ್ತು ಯುದ್ಧಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.

ಸೌದಿ ಮೂಲದ ಮುಸ್ಲಿಂ ವರ್ಲ್ಡ್ ಲೀಗ್ ಬಿಜೆಪಿ ನಾಯಕರ ಹೇಳಿಕೆಗಳು “ದ್ವೇಷವನ್ನು ಪ್ರಚೋದಿಸಬಹುದು” ಎಂದು ಹೇಳಿದ್ದು, ಸೌದಿ ಅರೇಬಿಯಾದ ಮಹಾ ಮಸೀದಿ ಮತ್ತು ಪ್ರವಾದಿ ಮಸೀದಿಯ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿ ಇದನ್ನು “ಹೇಯ ಕೃತ್ಯ” ಎಂದು ಕರೆದಿದೆ.

TV9 Kannada


Leave a Reply

Your email address will not be published.