ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಭಾರತದ ಆಂತರಿಕ ವಿಷಯ, ನಾವೇಕೆ ಪ್ರತಿಕ್ರಿಯಿಸಬೇಕು?: ಬಾಂಗ್ಲಾದೇಶ ಸಚಿವ ಹಸನ್ ಮಹಮೂದ್ | Remarks on Prophet India’s internal matter says Bangladesh Minister Hasan Mahmud


ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಭಾರತದ ಆಂತರಿಕ ವಿಷಯ, ನಾವೇಕೆ ಪ್ರತಿಕ್ರಿಯಿಸಬೇಕು?: ಬಾಂಗ್ಲಾದೇಶ ಸಚಿವ ಹಸನ್ ಮಹಮೂದ್

ಡಾ.ಹಸನ್ ಮಹಮೂದ್

ಪ್ರವಾದಿ ವಿವಾದ ಬಾಂಗ್ಲಾದೇಶದಲ್ಲಿ ಪ್ರಧಾನ ವಿಷಯವೇನೂ ಅಲ್ಲ ಎಂದು ಹೇಳಿದ ಸಚಿವರು ನಾನೇಕೆ ಪ್ರಚೋದಿಸಬೇಕು, ನಾನು ಸಮಸ್ಯೆಯನ್ನು ಏಕೆ ಪ್ರಚೋದಿಸಬೇಕು? ಇಲ್ಲಿ ಇದು ಸಾಕಷ್ಟು ಗಮನವನ್ನು ಪಡೆದಿಲ್ಲ. ಬೆಂಕಿ ಹಚ್ಚುವುದು ನನ್ನ ಕೆಲಸವಲ್ಲ ಎಂದಿದ್ದಾರೆ.

ಪ್ರವಾದಿ ಬಗ್ಗೆ ಆಕ್ಷೇಪಾರ್ಹ (prophet muhammad row) ಹೇಳಿಕೆ ಬಗ್ಗೆ ಇರುವ ವಿವಾದವು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಢಾಕಾ ಸರ್ಕಾರವು ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಡಾ.ಹಸನ್ ಮಹಮೂದ್ (Dr Hasan Mahmud) ಹೇಳಿದ್ದಾರೆ.  “ಮೊದಲನೆಯದಾಗಿ ಇದು ಬಾಂಗ್ಲಾದೇಶಕ್ಕೆ ಇದು ಬಾಹ್ಯ ಸಮಸ್ಯೆಯಾಗಿದೆ. ಇದು ಭಾರತದ ಸಮಸ್ಯೆಯೇ ಹೊರತು ಬಾಂಗ್ಲಾದೇಶದಲ್ಲ(Bangladesh). ನಾವು ಏನನ್ನೂ ಹೇಳಬೇಕಾಗಿಲ್ಲ ಎಂದು ಮಹಮೂದ್ ಶನಿವಾರ ಸಂಜೆ ಢಾಕಾದಲ್ಲಿ ಭೇಟಿ ನೀಡಿದ ಭಾರತೀಯ ಪತ್ರಕರ್ತರ ಗುಂಪಿನೊಂದಿಗೆ ಅನೌಪಚಾರಿಕ ಸಂವಾದದಲ್ಲಿ ಹೇಳಿದರು. ಮಹಮೂದ್ ಈ ವಿಷಯದಲ್ಲಿ ಕ್ರಮ ಕೈಗೊಂಡಿದ್ದಕ್ಕಾಗಿ ಭಾರತೀಯ ಅಧಿಕಾರಿಗಳನ್ನು ಅಭಿನಂದಿಸಿದ್ದು ಈ ಸಮಸ್ಯೆಯನ್ನು ಮತ್ತಷ್ಟು ಕೆದಕುವುದಿಲ್ಲ ಎಂದಿದ್ದಾರೆ. ಬಿಜೆಪಿಯ ಇಬ್ಬರು ಮಾಜಿ ವಕ್ತಾರರು ಪ್ರವಾದಿಯವರ ಬಗ್ಗೆ ಮಾಡಿದ ಹೇಳಿಕೆಗಳ ವಿರುದ್ಧ ಹನ್ನೆರಡು ಮುಸ್ಲಿಂ ರಾಷ್ಟ್ರಗಳು ಮತ್ತು 57-ರಾಷ್ಟ್ರಗಳ ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಪ್ರತಿಭಟನೆ ಅಥವಾ ಖಂಡನೆ ಹೇಳಿಕೆಗಳನ್ನು ನೀಡಿರುವ ಸಮಯದಲ್ಲಿ ಢಾಕಾದ ಮೌನವು ರಾಜಿಯಾಗಲಿಲ್ಲವೇ ಎಂದು ಕೇಳಿದಾಗ, ನಾವು ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಂಡಿಲ್ಲ. ಪವಿತ್ರ ಪ್ರವಾದಿಯವರಿಗೆ ಯಾವುದೇ ಅವಮಾನ ಸಂಭವಿಸಿದಾಗ ಮತ್ತು ಎಲ್ಲಿಯಾದರೂ ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ. ಆದರೆ ಭಾರತ ಸರ್ಕಾರವು ಕ್ರಮ ಕೈಗೊಂಡಿದೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ನಾವು ಭಾರತ ಸರ್ಕಾರವನ್ನು ಅಭಿನಂದಿಸುತ್ತೇವೆ. ಈಗ ಕಾನೂನು ಅದರ ದಾರಿಯಲ್ಲಿ ಸಾಗಲಿದೆ ಎಂದು ಮಹಮೂದ್ ಹೇಳಿದ್ದಾರೆ.

ಪ್ರವಾದಿ ವಿವಾದ ಬಾಂಗ್ಲಾದೇಶದಲ್ಲಿ ಪ್ರಧಾನ ವಿಷಯವೇನೂ ಅಲ್ಲ ಎಂದು ಹೇಳಿದ ಸಚಿವರು ನಾನೇಕೆ ಪ್ರಚೋದಿಸಬೇಕು, ನಾನು ಸಮಸ್ಯೆಯನ್ನು ಏಕೆ ಪ್ರಚೋದಿಸಬೇಕು? ಇಲ್ಲಿ ಇದು ಸಾಕಷ್ಟು ಗಮನವನ್ನು ಪಡೆದಿಲ್ಲ. ಬೆಂಕಿ ಹಚ್ಚುವುದು ನನ್ನ ಕೆಲಸವಲ್ಲ ಎಂದಿದ್ದಾರೆ.

ಬಾಂಗ್ಲಾದೇಶದ ವಿರೋಧ ಪಕ್ಷಗಳು ಮತ್ತು ಇಸ್ಲಾಮಿಸ್ಟ್ ಗುಂಪುಗಳು ಪವಿತ್ರ ಪ್ರವಾದಿಯ ಹೆಸರನ್ನು ವಿವಾದ ಮಾಡಿದಾಗಲೂ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ತಮ್ಮ ಸರ್ಕಾರ ವಿಫಲವಾಗಿದೆ ಎಂದು ದಾಳಿ ಮಾಡಿದೆ.

ಆದಾಗ್ಯೂ, ಬಾಂಗ್ಲಾದೇಶ ಸರ್ಕಾರವು ಪ್ರಚೋದನೆಗೆ ಒಳಗಾಗದೆ  ದೃಢ ನಿಲುವು ಪ್ರಕಟಿಸಿದೆ. ದೇಶದ ಆಡಳಿತಾರೂಢ ಅವಾಮಿ ಲೀಗ್‌ನ ಹಿರಿಯ ಪದಾಧಿಕಾರಿಯೂ ಆಗಿರುವ ಮಹಮೂದ್, ಉತ್ತರ ಬಾಂಗ್ಲಾದೇಶದ ಗೈಬಂಡಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ “ಅನಗತ್ಯ ಗೊಂದಲ ಅಥವಾ ಪ್ರಚೋದನೆ” ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

TV9 Kannada


Leave a Reply

Your email address will not be published.