ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಮೈಸೂರು.. ಪ್ರವಾಸಿ ತಾಣಗಳತ್ತ ಭೇಟಿ ನೀಡಿ ದಿಲ್ ಖುಷ್

ಕೊರೊನಾ 3ನೇ ಅಲೆಯ ಅತಂಕದ ನಡುವೆ ಮೈಸೂರು ದಸರಾ ಶುರುವಾಗಿದೆ. ಕೊರೊನಾ ಕಡಿಮೆಯಿದ್ದರೂ ಸಾಕಷ್ಟು ನಿರ್ಬಂಧ ವಿಧಿಸಲಾಗಿದ್ದು, ಈ ಬಾರಿ ಕೂಡ ಸರಳ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿದೆ. ಆದ್ರೂ ದಸರಾ ಹಬ್ಬ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಅರಮನೆ ನಗರಿಗೆ ಹರಿದು ಬರ್ತಿದೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಅಂಬಾ ವಿಲಾಸ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿದೆ. ಆದ್ರೂ, ಕೂಡ ಇಡೀ ಮೈಸೂರಿನಾದ್ಯಂತ ಸಂಭ್ರಮ, ಸಡಗರ ಮನೆಮಾಡಿದೆ. ಒಂದೆಡೆ ನಗರದಾದ್ಯಂತ ಝಗಮಗಿಸುತ್ತಿರುವ ವಿದ್ಯುತ್‌ ದೀಪಾಲಂಕಾರ, ಮತ್ತೊಂದೆಡೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ನೆಚ್ಚಿನ ತಾಣ.

ನಾಡಹಬ್ಬ ದಸರಾ ಮತ್ತು ಸಾಲು ಸಾಲು ರಜೆ ಇರುವುದರಿಂದ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದಸರಾ ವೇಳೆ ಜಂಬೂ ಸವಾರಿ ನೋಡೋಕಂತೂ ಆಗಲ್ಲ, ಅಟ್‌ಲೀಸ್ಟ್‌ ಟೂರಿಸ್ಟ್‌ ಪ್ಲೇಸ್‌ಗಳಿಗಾದ್ರೂ ಭೇಟಿ ನೀಡೋ ಅವಕಾಶ ಸಿಕ್ಕಿರೋದು ತುಂಬಾ ಸಂತೋಷವಾಗುತ್ತಿದೆ ಅಂತಿದ್ದಾರೆ ಪ್ರವಾಸಿಗರು.

ಈ ಬಾರಿ ವಿದ್ಯುತ್ ದೀಪಾಲಂಕಾರ ವೀಕ್ಷಣೆ ಅವಧಿಯನ್ನ ವಿಸ್ತರಣೆ ಮಾಡಲಾಗಿದ್ದು, ರಾತ್ರಿ 10.30 ರವರೆಗೆ ದೀಪಾಲಂಕಾರ ನೋಡಲು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ. ದೀಪಾಲಂಕಾರವನ್ನು ನೋಡುವುದರ ಜೊತೆಗೆ ಹಲವು ಕಡೆಗಳಲ್ಲಿ ಯುವಕ, ಯುವತಿಯರು ದೀಪಗಳ ಮುಂದೆ ಸೆಲ್ಪಿಗೆ ಫೋಸ್​​​ ಕೊಟ್ರೆ. ಪುಟ್ಟಮಕ್ಕಳು ಬಣ್ಣ ಬಣ್ಣದ ದೀಪಗಳನ್ನು ನೋಡಿ ಕುಣಿದು ಖುಷಿ ಪಟ್ಟರು.

ಒಟ್ಟಿಗೆ ಸ್ಥಳೀಯರು, ಪ್ರವಾಸಿಗರು, ಬಂದಿರುವುದರಿಂದ ಅರಮನೆ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಆಗಿದ್ದು, ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸಲು ಹರಸಾಹಸ ಪಟ್ಟರು. ಒಟ್ಟಾರೆ, ಈ ಎಲ್ಲಾ ಬೆಳವಣಿಗೆಗಳು ಮೈಸೂರಿನಲ್ಲಿ ಟ್ರಾಫಿಕ್‌ ಉಂಟುಮಾಡಿದ್ರೆ, ಮತ್ತೊಂದೆಡೆ ಜನರು ಕೊರೊನಾ ನಿಯಮವನ್ನೇ ಮರೆತು ದಸರಾ ಸಂಭ್ರಮದಲ್ಲಿ ತೊಡಗಿದ್ದಾರೆ. ಇವೆಲ್ಲವೂ ಮೈಸೂರು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ.

News First Live Kannada

Leave a comment

Your email address will not be published. Required fields are marked *