ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಇಂದು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದಿನಿಂದ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆಯಾದ್ರೂ, ದೇವಾಲಯಗಳನ್ನ ತೆರೆಯಲು ಅನುಮತಿ ನೀಡಿಲ್ಲ. ದೇವಾಲಯದ ಪ್ರವೇಶಕ್ಕೆ ನಿಷೇಧ ಇದ್ದರೂ ಕೂಡ ಕೊರೊನಾ ಲೆಕ್ಕಿಸದೆ ನಂಜನಗೂಡಿನತ್ತ ಭಕ್ತಸಮೂಹ ಧಾವಿಸುತ್ತಿದೆ.

ಕೋವಿಡ್ ಹಿನ್ನೆಲೆ ದೇವಾಲಯದ ಬಾಗಿಲು ಬಂದ್ ಆಗಿದ್ರೂ ಜನರು ದೇವಾಲಯದ ಹೊರಭಾಗದಲ್ಲಿ ನಿಂತು ಪೂಜೆ ಪುನಸ್ಕಾರ ಮಾಡಿ ನಂಜುಂಡನಿಗೆ ನಮಿಸುತ್ತಿದ್ದಾರೆ. ಹಲವಾರು ಮಂದಿ ಕಪಿಲಾ ನದಿಯಲ್ಲಿ ಮಿಂದೇಳುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಇಲ್ಲಿ ಗಣನೆಗೇ ಬಂದಿಲ್ಲ.

ಅದ್ರಲ್ಲೂ ಇಂದು ಸೋಮವಾರವಾದ ಕಾರಣ ನೂರಾರು ಸಂಖ್ಯೆಯಲ್ಲಿ ನಂಜನಗೂಡಿಗೆ ಸಾರ್ವಜನಿಕರು ಬಂದಿದ್ದು, ಮುಡಿಸೇವೆ, ಉರುಳುಸೇವೆ ಸೇರಿದಂತೆ ಮತ್ತಿತರ ಸೇವೆಗಳಲ್ಲಿ ತೊಡಗಿದ್ದಾರೆ.

ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಿದ್ದರೂ ತಾಲ್ಲೂಕು ಆಡಳಿತ ಮತ್ತು ದೇವಾಲಯದ ಆಡಳಿತ ಮಂಡಳಿ ಮೌನ ವಹಿಸಿದೆ ಎಂದು ಆರೋಪಿಸಲಾಗಿದೆ.

The post ಪ್ರವೇಶ ನಿಷೇಧವಿದ್ದರೂ ನಂಜನಗೂಡಿನಲ್ಲಿ ಭಕ್ತಸಾಗರ, ಕೊರೊನಾಗೆ ಕ್ಯಾರೆ ಎನ್ನದೇ ಕಪಿಲಾ ನದಿಯಲ್ಲಿ ಸ್ನಾನ appeared first on News First Kannada.

Source: newsfirstlive.com

Source link