ಪ್ರಶಾಂತ್​ ನೀಲ್​ ಮಗಳಿಗೆ ರವೀನಾ ಟಂಡನ್​ ಮಾಡಿದ ಕ್ಯೂಟ್​ ವಿಶ್​ ಹೇಗಿತ್ತು ಗೊತ್ತಾ?


ಕೆಜಿಎಫ್​ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಮಗಳಿಗೆ ಬಾಲಿವುಡ್​ ನಟಿ ರವೀನಾ ಟಂಡನ್ ಅವರ ಪತಿ ಹಾಗೂ ತಮ್ಮ ಕಡೆಯಿಂದ ಒಂದು ಕ್ಯೂಟ್ ವಿಶ್ ತಿಳಿಸಿದ್ದಾರೆ. ಹೌದು ನಟಿ ರವೀನಾ ಟಂಡನ್​ ಸದ್ಯ ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಸಿನಿಮಾ ಕೆಜಿಎಫ್​-2 ಚಿತ್ರದಲ್ಲಿ ರಮೀಕಾ ಸೇನ್​ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.

ನಿರ್ದೇಶಕ ಪ್ರಶಾಂತ್​ ನೀಲ್​ ಸಿನಿಮಾ ವಿಚಾರಕ್ಕೆ ಎಷ್ಟು ಪ್ರಾಮುಖ್ಯತೆ ಕೂಡುತ್ತಾರೆ ಅಷ್ಟೇ ಪ್ರಾಮುಖ್ಯತೆ ತಮ್ಮ ಫ್ಯಾಮಿಲಿಗೆ ನೀಡುತ್ತಾರೆ. ಶೂಟಿಂಗ್​ನಿಂದ ಸ್ವಲ್ಪ ಬ್ರೇಕ್​ ಸಿಕ್ಕಿದ್ರೆ ಸಾಕು ಪ್ರಶಾಂತ್​ ನೀಲ್​ ತಮ್ಮ ಫ್ಯಾಮಿಲಿ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಇಷ್ಟು ದಿನ ತಮಗೆ ಸಮಯ ಸಿಕ್ಕಾಗೆಲ್ಲ ತನ್ನ ಮಕ್ಕಳ ಜೊತೆ ಆಟವಾಡುತ್ತಿದ ನೀಲ್​ಗೆ ಈಗ ತನ್ನ ಮಗಳಿಗೆ ಶಾಲೆ ಶುರುವಾಗಿರೋದು ಬೇಸರವಾಗಿದೆಯಂತೆ.

ಪ್ರಶಾಂತ್​ ನೀಲ್​ ಮಗಳು ಇಂದಿನಿಂದ ಶಾಲೆಗೆ ಹೊಗಲು ಆರಂಭಿಸಿದ್ದಾರೆ. ಆದ್ರೆ ಅವರಿಗೆ ಈ ವಿಚಾರ ಬೇಸರದ ಸಂಗತಿಯಾಗಿದೆ ಅಂತ ನೀಲ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ತನ್ನ ಮಗಳ ಜೊತೆಗಿರುವ ಪೋಟೋ ಹಂಚಿಕೊಂಡು “ಇಂದು ನನ್ನ ಮಗಳ ಮೊದಲ ಶಾಲೆಯ ದಿನ.. ಅವಳು ಇಲ್ಲದ ನನ್ನ ಮನೆಯನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯಾವಾಗುತ್ತಿಲ್ಲ ” ಎಂದು ಪ್ರಶಾಂತ್​ ಬರೆದುಕೊಂಡಿದ್ದಾರೆ.

ಇನ್ನು ಪ್ರಶಾಂತ್​ ಅವರ ಈ ಪೋಸ್ಟ್​ಗೆ ನಟಿ ರವೀನಾ ಟಂಡನ್​ ಕಮೆಂಟ್​ ಮಾಡಿದ್ದು ” ಓ ದೇವರೇ ನನ್ನ ಮಗಳು ರಾಶಾಳನ್ನು ಮೊದಲ ದಿನ ಶಾಲೆಗೆ ಕಳುಹಿಸಿದ್ದಾಗ ನನಗೂ ಹೀಗೆ ಅನ್ನಿಸಿತ್ತು. ನಿಮ್ಮ ಮಗಳಿಗೆ ಒಳ್ಳೆಯದಾಗಲಿ.. ನನ್ನ ಹಾಗೂ ಅನಿಲ್​ ಕಡೆಯಿಂದ ಅವಳಿಗೆ ಶುಭಾಶಯವನ್ನು ತಿಳಿಸುತ್ತೇನೆ.” ಅಂತ ರವೀನಾ ಕಮೆಂಟ್​ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *