ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಮಾವ ಅಳಿಯ ಅಂತಿದ್ದ ಮಂಜು-ಪ್ರಶಾಂತ್ ಇದೀಗ ಎಣ್ಣೆ ಸೀಗೆಕಾಯಿಯಂತೆ ಆಗಿದ್ದಾರೆ.

ಮೊನ್ನೆ ಬಿಗ್‍ಬಾಸ್ ನೀಡಿದ್ದ ಟಾಸ್ಕ್‌ವೊಂದರಲ್ಲಿ ಸೋಲಲು ಮಂಜುನೇ ಕಾರಣ ಎಂದು ಪ್ರಶಾಂತ್ ಮನೆಮಂದಿಗೆಲ್ಲಾ ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೆ ನಿನ್ನೆ ಮಂಜು ವಿರುದ್ಧ ಪ್ರಶಾಂತ್ 38 ಗಂಟೆಗಳ ಕಾಲ ಉಪವಾಸ ಸತ್ಯಗ್ರಹ ನಡೆಸಲು ಕೂಡ ಮುಂದಾಗಿದ್ದರು. ಸದ್ಯ ಇಂದು ನಿಧಿ ಸುಬ್ಬಯ್ಯ ಬಳಿ ಮಂಜುನಿಂದ ಅನ್ಯಾಯವಾಗಿದೆ ಎಂದು ಪ್ರಶಾಂತ್ ಹೇಳಿದ್ದರು. ಈ ಇಬ್ಬರ ಮಾತು ಕೇಳಿಸಿಕೊಂಡು ದಿವ್ಯಾ ಸುರೇಶ್ ಈ ಬಗ್ಗೆ ಮಂಜು ಬಳಿ ಚರ್ಚೆ ನಡೆಸಿದರು.

ಬೆಡ್ ರೂಮ್ ಏರಿಯಾದಲ್ಲಿ ಮಂಜು ಕುಳಿತಿದ್ದ ವೇಳೆ ದಿವ್ಯಾ ಸುರೇಶ್, ನಿನ್ನಂದ ಅನ್ಯಾಯವಾಗಿದೆ ಎಂದು ನಿಧಿ ಸುಬ್ಬಯ್ಯ ಬಳಿ ಪ್ರಶಾಂತ್ ಹೇಳುತ್ತಿದ್ದರು. ನೀನು ಎಲ್ಲರನ್ನು ಇನ್‍ಫ್ಲೂಯನ್ಸ್ ಮಾಡಿದ್ಯಾ ಹಾಗೂ ಪ್ರಶಾಂತ್ ಕ್ಯಾಪ್ಟನ್ ಆಗಬಾರದು ಎಂಬ ಕಾರಣಕ್ಕೆ ಫೇವರಿಸಮ್ ಮಾಡಿದ್ಯಾ ಅಂತಿದ್ದರು.

ಆದರೆ ಅನ್ಯಾಯ ಆಗಿದೆ ಎಂದಾಗ ಅವರ ಬಳಿ ಹೋಗಿ ಮಾತನಾಡಬೇಕು. ನೀನು ಏನು ಅನ್ಯಾಯವಾಗಿದೆ ಎಂದು ಕೇಳಿದಾಗಲೂ ಅವರು ಉತ್ತರಿಸದೇ ಸುಮ್ಮನೆ ಇದ್ದರೆ, ಅದು ತಪ್ಪಾಗುತ್ತದೆ. ಅಂದಿನದ್ದು, ಅಂದೇ ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ನಾನು ಎಲ್ಲದಕ್ಕೂ ಹೋರಾಡುತ್ತೇನೆ, ದಿಕ್ಕಾರ ಎಂದರೆ ಅದಕ್ಕೆ ಏನು ಅರ್ಥಬರುತ್ತದೆ ಎನ್ನುತ್ತಾರೆ. ಆಗ ಮಂಜು ಹೋಗಲಿ ಬಿಡು ಅವರು ಮಾತನಾಡಿದಾಗ ಮಾತನಾಡುತ್ತೇನೆ ಎಂದಿದ್ದಾರೆ.

ನಂತರ ದಿವ್ಯಾ ಸುರೇಶ್ ಮಾತಿಗೆ ಮುಂಚೆ ಜನಗಳಿಗೆ ಕಾಣಿಸುತ್ತಿರುತ್ತದೆ ಅಲ್ವಾ ಎಂದು ಹೇಳುತ್ತಾರೆ. ಆದ್ರೆ ಅದೇ ಜನವೇ ಅಂದು ಕೂಡ ನಿಧಿ ಸುಬ್ಬಯ್ಯ ಜೊತೆ ಜಗಳವಾದಾಗ ಕಾಲ್ ಮಾಡಿ ಉಗಿದ್ರಾಲ್ವಾ ಎಂದು ಚರ್ಚೆ ನಡೆಸಿದ್ದಾರೆ.

The post ಪ್ರಶಾಂತ್‍ಗೆ ಮಂಜುನಿಂದ ಅನ್ಯಾಯ ಆಗಿದ್ಯಾ? appeared first on Public TV.

Source: publictv.in

Source link