ಪ್ರಾಣಿಪ್ರಿಯ ಧೋನಿಗೆ ಪಕ್ಷಿಗಳ ಮೇಲೂ ಎಲ್ಲಿಲ್ಲದ ಪ್ರೀತಿ; ಟೀ ಕುಡಿಯುವಾಗ ಕಂಪನಿ ಕೊಡುತ್ತಂತೆ ಗಿಣಿ..!


ಟಿ-20 ವಿಶ್ವಕಪ್​​​ನಲ್ಲಿ ರಾಷ್ಟ್ರೀಯ ಸೇವೆ ಮುಗಿಸಿ ತವರಿಗೆ ಮರಳಿರುವ ಧೋನಿ ರಿಲ್ಯಾಕ್ಸ್​ ಮೂಡ್​​ಗೆ ಜಾರಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿರುವ ಜಿಮ್​​ನಲ್ಲಿ ಸಖತ್​ ಕಸರತ್ತು ನಡೆಸ್ತಿದ್ದು, ಮುಂದಿನ ಐಪಿಎಲ್​​ಗೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ಇದೀಗ ಹೊಸ ಅವತಾರದಲ್ಲಿ ಮಿಸ್ಟರ್​ ಕೂಲ್​​, ಪ್ರತ್ಯಕ್ಷವಾಗಿದ್ದು, ಅಭಿಮಾನಿಗಳು ಆ ಲುಕ್​ಗೆ ಫಿದಾ ಆಗಿದ್ದಾರೆ.

ಪತ್ನಿ ಸಾಕ್ಷಿ ಸಿಂಗ್​ ಅವರೇ ಈ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತುಂಬಾ ಮುಗ್ಧನಂತೆ, ಸಾದಾಸೀದ ವ್ಯಕ್ತಿಯಂತೆ ಕಾಣುವ ಧೋನಿ, ಚಹಾ ಸವಿಯುತ್ತಾ ಮುದ್ದು ಗಿಳಿಮರಿಯನ್ನ ತನ್ನ ಭುಜದ ಮೇಲೆ ಕೂರಿಸಿಕೊಂಡಿದ್ದಾರೆ. ಹಾಗೇ ಗಿಳಿಮರಿ ಜೊತೆ ಮಾತು ಬೆರೆಸುತ್ತಾ ಚಹಾ ಸವಿಯುತ್ತಿದ್ದಾರೆ ಎಂಬಂತೆ ಕಾಣ್ತಿದೆ.

ಇನ್ನು ಈ ಫೋಟೋಗೆ ಮಹಿ ಆ್ಯಂಡ್​ ಹಿಸ್​ ಹನಿ ಎಂದು ವಿಭಿನ್ನ ಕ್ಯಾಪ್ಷನ್​ ಬರೆದಿರುವ ಸಾಕ್ಷಿ, ಚಾಯ್​​ ಡೇಡ್​ ಎಂದು ಹ್ಯಾಷ್​ಟ್ಯಾಗ್​​ ಹಾಕಿ ಗಮನ ಸೆಳೆದಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ಶೇರ್​​ ಮಾಡ್ತಿದ್ದು, ಕೂಲ್​ ಧೋನಿ ಅವರ ಸಾಫ್ಟ್​​ ಲುಕ್​​ಗೆ ಫಿದಾ ಆಗಿದ್ದಾರೆ.

 

View this post on Instagram

 

A post shared by Sakshi Singh Dhoni (@sakshisingh_r)

The post ಪ್ರಾಣಿಪ್ರಿಯ ಧೋನಿಗೆ ಪಕ್ಷಿಗಳ ಮೇಲೂ ಎಲ್ಲಿಲ್ಲದ ಪ್ರೀತಿ; ಟೀ ಕುಡಿಯುವಾಗ ಕಂಪನಿ ಕೊಡುತ್ತಂತೆ ಗಿಣಿ..! appeared first on News First Kannada.

News First Live Kannada


Leave a Reply

Your email address will not be published. Required fields are marked *