ಪ್ರಾಣಿ ಸಂಗ್ರಹಾಲಯ ಕಾವಲುಗಾರರ ಕಣ್ತಪ್ಪಿಸಿ ಸಿಂಹದ ಗುಹೆ ಬಳಿ ಹೋದ ಯುವಕ ಒದೆ ತಿಂದು ಪೊಲೀಸರ ಅತಿಥಿಯಾದ! | The youth who went near lion’s cave in Hyderabad Zoo is in police custody now


ಮೂರ್ಖತನದ ಪರಮಾವಧಿ ಅಂದರೆ ಇದೇ. 31-ವರ್ಷ ವಯಸ್ಸಿನ ಯುವಕ ಪ್ರಾಣಿ ಸಂಗ್ರಹಾಲಯದಲ್ಲಿನ ಸಿಂಹದ ಗುಹೆ ಮೇಲೆ ಕುಳಿತು ಅವನಿಗಿಂತ ಸುಮಾರು 10 ಅಡಿ ಕೆಳಗಿರುವ ಸಿಂಹವನ್ನು ಕೆಣಕುತ್ತಿದ್ದಾನೆ. ಅವನನ್ನು ನೋಡಿ ಆಫ್ರಿಕನ್ ಸಿಂಹ ಗರ್ಜಿಸುತ್ತಿದ್ದರೆ, ಅವನಿಗೆ ತಮಾಷೆಯೆನಿಸುತ್ತಿದೆ. ಅಕಸ್ಮಾತ್ ಅವನು ಜಾರುಬಂಡೆಯಂತಿರುವ ಕಲ್ಲಿನ ಮೇಲಿಂದ ಕೆಳಕ್ಕೆ ಜಾರಿದರೆ, ಮೂರು ಸಂಗತಿಗಳು ಸಂಭವಿಸುತ್ತಿದ್ದವು. ಯುವಕನ ಪ್ರಾಣಹರಣ, ಸಿಂಹಕ್ಕೆ ಭರ್ಜರಿ ಔತಣ ಮತ್ತು ಅವನನ್ನು ಅಲ್ಲಿಯವರೆಗೆ ಹೋಗಲು ಬಿಟ್ಟ ಪ್ರಾಣಿ ಸಂಗ್ರಹಾಲಯದ ಕಾವಲುಗಾರರ ನೌಕರಿಹರಣ.

ಅಂದಹಾಗೆ, ನಮಗೆ ಈ ವಿಡಿಯೋ ಹೈದರಾಬಾದ್ ಮೃಗಾಲಯನಿಂದ ಲಭ್ಯವಾಗಿದೆ. ಈ ವ್ಯಕ್ತಿ-ಹೆಸರು ಏನು ಅಂತ ನಮಗೆ ಗೊತ್ತಾಗಿಲ್ಲ, ಅವನು ಕಾವಲುಗಾರರ ಕಣ್ಣು ತಪ್ಪಿಸಿ ಅಲ್ಲಿಯವರೆಗೆ ಹೋಗಿದ್ದಾನೆ. ಅಸಲಿಗೆ ಸಿಂಹದ ಗುಹೆಯ ಅಷ್ಟು ಹತ್ತಿರಕ್ಕೆ ಯಾರನ್ನೂ ಬಿಡುವುದಿಲ್ಲ. ಕಾಡಿನ ರಾಜನೊಂದಿಗೆ ಚೆಲ್ಲಾಟ ಆಡಿದ ನಂತರ ಅವನ ಸ್ಥಿತಿ ಏನಾಯ್ತು ಅಂತ ನಿಮಗೆ ವಿಡಿಯೊನಲ್ಲಿ ಕಾಣುತ್ತದೆ.

ಸಿಂಹದ ಗರ್ಜನೆ ಕೇಳಿ ಏನೋ ಎಡವಟ್ಟಾಗಿದೆ ಅನ್ನೋದನ್ನು ಮನವರಿಕೆ ಮಾಡಿಕೊಂಡ ಕಾವಲುಗಾರರು, ಗುಹೆಯ ಬಳಿ ಬಂದಾಗ ಈ ಭೂಪ ಕಾಣಿಸಿದ್ದಾನೆ. ಅವನನ್ನು ಆಚೆ ಎಳೆದುಕೊಂಡು ಹೋಗಿ ಚೆನ್ನಾಗಿ ತದುಕಿದ್ದಾರೆ. ಅದು ವಿಡಿಯೋನಲ್ಲಿ ಕಾಣುತ್ತಿದೆ. ಅದಾದ ಮೇಲೆ ಅವನನ್ನು ಎಳೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಸಮ್ಮನಿರದೆ ಬಿಟ್ಕೊಂಡ್ರು ಅಂತಾರಲ್ಲ, ಹಾಗಿದೆ ಇವನ ಕತೆ!

ಇದನ್ನೂ ಓದಿ:   Madhuri Dixit: ಮಾಧುರಿ ದೀಕ್ಷಿತ್ ನೃತ್ಯಕ್ಕೆ ಫಿದಾ ಆದ ಅಭಿಮಾನಿಗಳು; ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *