ನವದೆಹಲಿ: ನೂತನ ಶೈಕ್ಷಣಿಕ ವರ್ಷದಿಂದ 8 ರಾಜ್ಯಗಳ 14 ಇಂಜನಿಯರಿಂಗ್ ಕಾಲೇಜುಗಳ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಕೋರ್ಸುಗಳನ್ನು ನಡೆಸುವ ನಿರ್ಧಾರವನ್ನು ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಅವರು ಸ್ವಾಗತಿಸಿದ್ದಾರೆ. ಹೀಗೆಂದು ಖುದ್ದು ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರೇ ತನ್ನ ಟ್ವಿಟರ್​​ ಖಾತೆಯಲ್ಲಿ ಕನ್ನಡದಲ್ಲಿ ಸರಣಿ ಟ್ವೀಟ್​ ಮಾಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಎಐಸಿಟಿಇ ಬಿಟೆಕ್ ಪ್ರೋಗ್ರಾಂಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಂದರೆ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಗುಜರಾತಿ, ಮಲಯಾಳಂ, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಹಾಗು ಒಡಿಯಾಗಳಲ್ಲಿ ನೀಡಲು ಸಮ್ಮತಿಸಿರುವುದರಕ್ಕೆ ಉಪರಾಷ್ಟ್ರಪತಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸದ್ಯದಲ್ಲೇ ರಾಜಕೀಯ ಪ್ರವೇಶಿಸಲಿದ್ದಾರಾ ಐಪಿಎಸ್​​​ ಅಧಿಕಾರಿ ಭಾಸ್ಕರ್​​ ರಾವ್​​​?

ಇನ್ನೂ ಹೆಚ್ಚಿನ ಇಂಜನಿಯರಿಂಗ್ ಕಾಲೇಜುಗಳು ಹಾಗು ಇತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಪ್ರಾದೇಶಿಕ ಭಾಷೆಯಲ್ಲಿ ಕೋರ್ಸ್‌ಗಳನ್ನು ನಡೆಸುವ ಬಗ್ಗೆ ಉಪರಾಷ್ಟ್ರಪತಿಯವರು ಆಶಯ ವ್ಯಕ್ತಪಡಿಸಿರುವುದಾಗಿ ಮತ್ತೊಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

The post ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ; ಕನ್ನಡದಲ್ಲೇ ಟ್ವೀಟ್​ ಮಾಡಿ ಸ್ವಾಗತಿಸಿದ ಉಪರಾಷ್ಟ್ರಪತಿ appeared first on News First Kannada.

Source: newsfirstlive.com

Source link