ದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಮಹತ್ವದ ಸರ್ವ ಪಕ್ಷ ಸಭೆ ದೆಹಲಿಯ 7, ಲೋಕ್ ಕಲ್ಯಾಣ್ ಮಾರ್ಗ್​ನಲ್ಲಿ ಪ್ರಾರಂಭವಾಗಿದೆ. ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ವಿಚಾರಗಳಾದ ಗಡಿನಿರ್ಧಾರ, ರಾಜ್ಯತ್ವ, ವಿಧಾನಸಭಾ ಚುನಾವಣೆಗಳನ್ನು ನಡೆಸುವ ವಿಷಯಗಳು ಚರ್ಚೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಈ ಸರ್ವಪಕ್ಷ ಸಭೆಗೆ ಕನಿಷ್ಠ 14 ರಾಜಕೀಯ ಪಕ್ಷಗಳ ನಾಯಕರನ್ನ ಆಹ್ವಾನಿಸಲಾಗಿತ್ತು. ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ(PDP), ನ್ಯಾಷನಲ್ ಕಾನ್ಫರೆನ್ಸ್​ (NC)ಸೇರಿದಂತೆ ಹಲವು ಪಕ್ಷಗಳು ನಾಯಕರು ಪಾಲ್ಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್, ಕಾಂಗ್ರೆಸ್ ನಾಯಕ ಗುಲಾಮ್ ಅಹ್ಮದ್ ಮಿರ್, ಗುಲಾಮ್ ನಬಿ ಆಜಾದ್, ತಾರಾ ಚಂದ್, ಪಿಡಿಪಿಯ ಮೆಹ್​ಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್​ನ ಫಾರೂಕ್ ಅಬ್ದುಲ್ಲಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದಾರೆ.

ಸರ್ವಪಕ್ಷ ಸಭೆಯ ಅಜೆಂಡಾ ಏನೆಂಬುದನ್ನು ಈವರೆಗೂ ಘೋಷಿಸಿಲ್ಲವಾದರೂ 370 ನಿಷ್ಕ್ರಿಯಗೊಳಿಸಿದ್ದು, ಅದಕ್ಕೆ ಕಾಶ್ಮೀರದ ರಾಜಕೀಯ ಪಕ್ಷಗಳು ನಿರಂತರ ವಿರೋಧ ವ್ಯಕ್ತಪಡಿಸಿರುವುದರ ಮಧ್ಯೆ ಕರೆದಿರುವ ಸರ್ವಪಕ್ಷ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

The post ಪ್ರಾರಂಭವಾಯ್ತು ಮಹತ್ವದ ಕಾಶ್ಮೀರಿ ನಾಯಕರ ಸಭೆ: ಏನೇನೆಲ್ಲಾ ಆಗಲಿದೆ ಚರ್ಚೆ..? appeared first on News First Kannada.

Source: newsfirstlive.com

Source link