ಬೆಂಗಳೂರು: ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದ ಇಂಜಿನಿಯರಿಂಗ್ ಪದವೀಧರೆ ರೇಣುಕಾ ಎಂಬಾಕೆಯನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನ ಖಾಸಗಿ ಕಾಲೇಜ್​ನಲ್ಲಿ ಸಿದ್ಧಾರ್ಥ್ ಎಂಬುವನನ್ನ ಪ್ರೀತಿಸುತ್ತಿದ್ದ ರೇಣುಕಾಳಿಂದ ಪೊಲೀಸರಿಗೆ ಅನುಮಾನ ಬಾರದಂತೆ ಸಿದ್ದಾರ್ಥ್ ಗಾಂಜಾ ಸಪ್ಲೈ ಮಾಡಿಸ್ತಿದ್ದ ಎನ್ನಲಾಗಿದೆ. ಸಿದ್ದಾರ್ಥ್ ಫೋನ್​ನಿಂದ ಕಾನ್ಫರೆನ್ಸ್ ಕಾಲ್​ನಲ್ಲಿ ಕಸ್ಟಮರ್​ಗೆ ಕಾಲ್ ಮಾಡ್ತಿದ್ದ ರೇಣುಕಾ ಆಂಧ್ರಪ್ರದೇಶದಿಂದ ಬಂದು ಮುಖ್ಯ ರಸ್ತೆಗಳಲ್ಲಿರುವ ಓಯೋ ರೂಮ್​ಗೆ ಕಸ್ಟಮರ್​ಗೆ ಬರಲು ಹೇಳಿ ಅಲ್ಲೇ ಗಾಂಜಾ ಸಪ್ಲೈ ಮಾಡುತ್ತಿದ್ದಳಂತೆ.

ಸದಾಶಿವನಗರ ಪಿಎಸ್​ಐ ಶೋಭಾ ಅಂಡ್ ಟೀಂ ಆರೋಪಿಯನ್ನ ಬಂಧಿಸಿದ್ದು ಆಕೆಯಿಂದ 2.5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಸದ್ಯ ಪ್ರೇಮಿ ಸಿದ್ದಾರ್ಥ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

The post ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದಿದ್ದ ಇಂಜಿನಿಯರಿಂಗ್ ಪದವೀಧರೆ ಅರೆಸ್ಟ್ appeared first on News First Kannada.

Source: newsfirstlive.com

Source link