ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಪತ್ನಿ, ಪತ್ನಿ-ಪ್ರಿಯಕರ ಅರೆಸ್ಟ್ | Wife and his boyfriend arrested for trying to kill husband in yadgir


ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಪತ್ನಿ, ಪತ್ನಿ-ಪ್ರಿಯಕರ ಅರೆಸ್ಟ್

ಪ್ರಾತಿನಿಧಿಕ ಚಿತ್ರ

ಯಾದಗಿರಿ: ಪ್ರಿಯಕರನ ಜೊತೆ ಸೇರಿ ಹೆಂಡತಿ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ನವೆಂಬರ್ 18ರ ಮಧ್ಯರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೂವಿನಹಳ್ಳಿಯಲ್ಲಿ ಚಂದ್ರಕಲಾ ಎಂಬ ಮಹಿಳೆ ಪ್ರಿಯತಮ ಬಸನಗೌಡ ಜೊತೆ ಸೇರಿ ತನ್ನ ಗಂಡ ವಿಶ್ವನಾಥರೆಡ್ಡಿ ನಿದ್ದೆ ಮಾತ್ರೆ ಕೊಟ್ಟು ಕೊಲೆಗೆ ಯತ್ನಿಸಿದ್ದಾಳೆ. ಮೈದುನನ ಜೊತೆ ಇರುವ ಅನೈತಿಕ ಸಂಬಂಧ ಮುಚ್ಚಿ ಹಾಕಲು ಗಂಡನಿಗೆ ದೇವರ ಪ್ರಸಾದವೆಂದು ನೀರಿನಲ್ಲಿ ನಿದ್ದೆ ಮಾತ್ರೆ ಪುಡಿ ಹಾಕಿ ಮಲಗಿದ ಮೇಲೆ ಗಂಡನ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾಳೆ. ಈ ವೇಳೆ ವಿಶ್ವನಾಥರೆಡ್ಡಿ ಎಚ್ಚರಗೊಂಡು ಮೇಲೆದ್ದಿದ್ದಾರೆ. ಬಳಿಕ ವಿಶ್ವನಾಥರೆಡ್ಡಿ ಬಸನಗೌಡ, ಚಂದ್ರಕಲಾಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಇನ್ನು ಚಂದ್ರಕಲಾ ಹಾಗೂ ಪ್ರಿಯತಮ ಬಸನಗೌಡ ವಿಶ್ವನಾಥರೆಡ್ಡಿ ಹತ್ಯೆಗೆ ಪ್ಲ್ಯಾನ್ ಮಾಡಿದ್ದ ಬಗ್ಗೆ ಮಾತಾಡಿರುವ ಆಡಿಯೋ ಸಿಕ್ಕಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ವಿಶ್ವನಾಥರೆಡ್ಡಿ ಪತ್ನಿ ಚಂದ್ರಕಲಾ, ಪ್ರಿಯತಮ ಬಸನಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್​ ಸಹಾಯಕ್ಕೆ ನಿಂತ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ

ಖ್ಯಾತ ನಿರ್ದೇಶಕನ ಕಚೇರಿ ಮುಂದೆ ಕಾಣಿಸಿಕೊಂಡ ರಶ್ಮಿಕಾ; ಬಾಲಿವುಡ್​ನಲ್ಲಿ 3ನೇ ಚಿತ್ರ ಯಾರ ಜೊತೆ?

TV9 Kannada


Leave a Reply

Your email address will not be published. Required fields are marked *