ಪ್ರೀತಿಯಿಂದ ಕೊಂಡ ಕಾರು ಮಾಲೀಕರ ಎದುರೇ ಸುಟ್ಟು ಭಸ್ಮವಾಯಿತು, ಅವರ ಕುಟುಂಬ ಸೇಫಾಗಿದೆ | Couple and their kids helplessly watch their car burning to ashes


ನಾವು ಇತ್ತೀಚಿಗೆ ಈ ವಿಷಯವನ್ನು ಚರ್ಚಸಿದ್ದೆವು. ಚಲಿಸುತ್ತಿರುವ ಕಾರುಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳವುದು ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಅಂಥ ಅವಗಢಗಳು ಸಂಭವಿಸುತ್ತಿರುವುದಕ್ಕೆ ನಿರ್ದಿಷ್ಟವಾದ ಕಾರಣಗಳೇನು ಅಂತ ಕಾರು ತಯಾರಿಕಾ ಕಂಪನಿಗಳು ಬಹಿರಂಗಪಡಿಸುತ್ತಿಲ್ಲ. ಹಾಗೆ ಸಂಭವಿಸುವ ಬೆಂಕಿ ಆಕಸ್ಮಿಕಗಳಲ್ಲಿ ಜನ ಪ್ರಾಣ ಕಳೆದುಕೊಂಡಿರುವ ಸಂದರ್ಭಗಳೂ ಇವೆ. ನಾವು ಯಾವುದೇ ನಿರ್ದಿಷ್ಟವಾದ ಕಾರು ತಯಾರಕಾ ಕಂಪನಿಯನ್ನು ದೂರುತ್ತಿಲ್ಲ. ಜನ ಕಾರು ಕೊಳ್ಳವುದು ತಮ್ಮ ಅನುಕೂಲಗಳಿಗೆ ಮತ್ತು ಕಂಫರ್ಟ್ಗಾಗಿ. ಆದರೆ, ಕಂಫರ್ಟ್ ಒದಗಿಸಬೇಕಾದ ಕಾರಿಗೆ ನಡು ರಸ್ತೆಯಲ್ಲಿ ಬೆಂಕಿ ಬಿದ್ದರೆ ಹೇಗೆ ಸ್ವಾಮಿ?

ಈ ವಿಡಿಯೋ ನೋಡಿ. ಇದು ನಮಗೆ ದಾವಣಗೆರೆ ತಾಲ್ಲೂಕಿನ ಬಾತಿ ಹೆಸರಿನ ಗ್ರಾಮದಲ್ಲಿ ನಡೆದಿರುವ ದುರ್ಘಟನೆ. ಚಲಿಸುತ್ತಿದ್ದ ಮಾರುತಿ ವ್ಯಾನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿ ಗಂಡ ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರಂತೆ. ಅದೃಷ್ಟವಶಾತ್ ಬೆಂಕಿ ಹೊತ್ತಿಕೊಳ್ಳುವ ಸುಳಿವು ಸಿಕ್ಕ ಕೂಡಲೇ ಅವರೆಲ್ಲ ಕಾರಿಂದ ಇಳಿದುಬಿಟ್ಟಿದ್ದಾರೆ. ಮುಂದೆ ನಡೆದಿದ್ದು ನಿಮಗೆ ಕಾಣುತ್ತಿರುವ ದೃಶ್ಯ.

ವ್ಯಾನ್ ಧಗಧಗನೆ ಉರಿಯುತ್ತಿದೆ. ಜನ ಅದರ ಹತ್ತಿರ ಹೋಗುವುದಕ್ಕೂ ಹೆದರುತ್ತಿದ್ದಾರೆ. ಕಾರಿನ ಮಾಲೀಕರ ಸ್ಥಿತಿ ಏನಾಗಿರಬೇಡ? ಅವರ ಪ್ರೀತಿಯ, ಎಲ್ಲ ಸಂದರ್ಭಗಳಲ್ಲಿ ನೆರವಾದ ವಾಹನ ಕಣ್ಣ ಮುಂದೆಯೇ ಸುಟ್ಟು ಭಸ್ಮವಾಗುವುದನ್ನು ನೋಡೋದು ಅತಿದೊಡ್ಡ ಯಾತನೆ.

ಇದನ್ನೂ ಓದಿ:   Andhra Pradesh Rain: ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ ಭಾರತೀಯ ವಾಯುಸೇನೆ; ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *