ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಹನ್ನೆರಡು ದಿನಗಳು ಕಳೆದಿವೇ. ಆದರೂ ಸಹ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳ ನೋವು ಕೊಂಚವೂ ಕಡಿಮೆಯಾಗಿಲ್ಲ. ಪ್ರತಿ ದಿನ ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ.
ನಿನ್ನೆಯಷ್ಟೇ ಪುನೀತ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯವನ್ನು ಡೊಡ್ಮನೆ ಕುಟುಂಬಸ್ಥರು ನೆರವೇರಿಸಿದ್ದಾರೆ. ಇನ್ನು ಇಂದು ಆರೆಮನೆ ಮೈದಾನಲ್ಲಿ ಅಪ್ಪು ಅಭಿಮಾನಿಗಳಿಗಾಗಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 25 ರಿಂದ 30 ಸಾವಿರ ಜನರು ಇದುವರೆಗೂ ಊಟ ಮಾಡಿದ್ದಾರೆ. ಇದೇವೇಳೆ ರಾಘವೇಂದ್ರ ರಾಜ್ಕುಮಾರ್ ತಮ್ಮ ಸಹೋದರ ಪುನೀತ್ರನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಬಗ್ಗೆ ಭಾವನಾತ್ಮಕವಾದ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
” ಅಪ್ಪು ಮಗನೇ ನಿರುದ್ಯೋಗಿ ಆಗಿದ್ದ ನನಗೆ ನೀನು ಸಮಾಜ ಸೇವೆ ಮಾಡುವ ಕೆಲಸವನ್ನು ಕೊಟ್ಟಿದ್ದೀಯಾ. ಯಾರಿಗೂ ಹೇಳದೆ ಕಿವುಡ ಮೂಗನಾಗಿ ಮತ್ತು ಕುರುಡನಾಗಿ ಸಮಾಜ ಸೇವೆ ಮಾಡುವಾಗ ಸದಾ ನಿನ್ನ ಆಲೋಚನೆಗಳೊಂದಿಗೆ ಬಾಳುವ ಆ ಪ್ರೀತಿಯ ಶಕ್ತಿಯನ್ನು ನನಗೆ ಕೊಡು” ಎಂದು ರಾಫಣ್ಣ ಬರೆದುಕೊಂಡಿದ್ದಾರೆ.