ಪ್ರೀತಿಯ ವಿಚಾರ: ಯುವಕನಿಂದ ಮಹಿಳಾ ಬ್ಯಾಂಕ್‌ ಉದ್ಯೋಗಿ ಕಿಡ್ನ್ಯಾಪ್? | Love affair youth allegedly kidnaps woman bank employee in sirsi uttara kannada district


ಪ್ರೀತಿಯ ವಿಚಾರ: ಯುವಕನಿಂದ ಮಹಿಳಾ ಬ್ಯಾಂಕ್‌ ಉದ್ಯೋಗಿ ಕಿಡ್ನ್ಯಾಪ್?

ಪ್ರೀತಿಯ ವಿಚಾರ: ಯುವಕನಿಂದ ಮಹಿಳಾ ಬ್ಯಾಂಕ್‌ ಉದ್ಯೋಗಿ ಕಿಡ್ನ್ಯಾಪ್?

ಆತಂಕಗೊಂಡ ಯುವತಿಯ ಕುಟುಂಬಸ್ಥರು ಬುದ್ದಿಮಾತು ಹೇಳಿ ತಮ್ಮ ಸಂಬಂಧಿಕರ ಮನೆಯಾದ ಕುಮಟಾದ ಕೋಡ್ಕಣಿಗೆ ಮೇ 28ರಂದು ಕರೆದುಕೊಂಡು ಹೋಗಿದ್ದರು.‌ ಆದರೆ ಮೇ 31ರಂದು ಮನೆಗೆ ನುಗ್ಗಿದ ಆರೋಪಿಗಳು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಲೇಕಲ್ ಸೈಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯನ್ನು ಯುವಕರ ತಂಡ ಅಪಹರಣ ಮಾಡಿದೆ ಎಂದು ಯುವತಿಯ ಸಂಬಂಧಿಕರು ನೀಡಿದ ದೂರಿನ‌ ಹಿನ್ನೆಲೆ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ (27) ಅಪಹರಣಕ್ಕೊಳಗಾದ ಯುವತಿಯಾಗಿದ್ದು, ಈಕೆ ಶಿರಸಿಯ ಹುಲೇಕಲ್ ನಿವಾಸಿ ಎಲ್.ಐ.ಸಿ. ಏಜೆಂಟ್ ಸುಬ್ರಹ್ಮಣ್ಯ ಬಂಡಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಈ ವಿಷಯ ಮನೆಗೆ ತಿಳಿದಿದ್ದರಿಂದ ಆತಂಕಗೊಂಡ ಯುವತಿಯ ಕುಟುಂಬಸ್ಥರು, ಆಕೆಗೆ ಬುದ್ದಿಮಾತು ಹೇಳಿ, ತಮ್ಮ ಸಂಬಂಧಿಕರ ಮನೆಯಾದ ಕುಮಟಾದ ಕೋಡ್ಕಣಿಗೆ ಮೇ 28ರಂದು ಕರೆದುಕೊಂಡು ಹೋಗಿದ್ದರು.‌ ಆದರೆ, ಮೇ 31ರಂದು ಈ ಮನೆಗೆ ನುಗ್ಗಿದ ಆರೋಪಿಗಳಾದ ಸುಬ್ರಹ್ಮಣ್ಯ ಮಂಜುನಾಥ ಬಂಡಾರಿ, ವಿಮಲಾ ಮಂಜುನಾಥ ಬಂಡಾರಿ, ಅರವಿಂದ ರಮಾಕಾಂತ ಬಾಂದೇಕರ್, ಕುಮಾರ್ ಬಂಡಾರಿ, ರಕ್ಷಿತ್ ಬಾಂದೇಕರ್, ವಿನಾಯಕ ನಾಯ್ಕ್ ಸೇರಿದಂತೆ ಕೆಲವರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ.

ಇನ್ನು ಈ ವೇಳೆ ಯುವತಿಯ ಸಂಬಂಧಿಯಾದ ವೃದ್ದ ಬಾಲಚಂದ್ರ ಎಂಬವರ ಮೇಲೆ ಹಲ್ಲೆ ಮಾಡಿ, ಇತರರಿಗೆ ಧಮಕಿ ಹಾಕಿ, ಯುವತಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಈ ಕಾರಣದಿಂದ ಅಕ್ರಮ ಪ್ರವೇಶ ಹಾಗೂ ಮನೆಯವರಿಗೆ ಹಲ್ಲೆ ಮಾಡಿ, ಧಮಕಿ ಹಾಕಿ ಕಾಮಾಕ್ಷಿಯನ್ನು ಗೌಪ್ಯವಾಗಿ ಹಾಗೂ ಅಕ್ರಮ ಬಂಧನದಲ್ಲಿ ಇಡುವ ಉದ್ದೇಶದಿಂದ ಅಪಹರಿಸಿಕೊಂಡು ಹೋಗಲಾಗಿದೆ ಎಂದು ಯುವತಿ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ರವಿ ಗುಡ್ಡಿ ಅವರ ತಂಡ ತನಿಖೆ ಕೈಗೊಂಡಿದೆ.

8 ವರ್ಷದ ಪ್ರೀತಿಗೆ ಪೋಷಕರ ನಿರಾಕರಣೆ; ವಿಷ ಸೇವಿಸಿ ಯುವಕ ಸಾವು, ಸಾಮಾಜಿಕ ಜಾಲತಾಣದಲ್ಲಿ ಯುವತಿ, ಪೋಷಕ ಪೋಟೋ ಹಾಕಿ ಸ್ನೇಹಿತರ ಆಕ್ರೋಶ

ಹಾಸನ: ಮದುವೆ ನಿರಾಕಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದ್ದು ಪ್ರೇಮಿಯ ದುರಂತ ಅಂತ್ಯ ಕಂಡ ಲವ್‌ಸ್ಟೋರಿ ವಿಷಯ ವೈರಲ್ ಆಗಿದೆ. ಮೃತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿಸಿ ಯುವತಿ ಹಾಗೂ ಆಕೆಯ ಪೋಷಕರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಅನಿಲ್ (24) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಹೀಗಾಗಿ ಈತನ ಸ್ನೇಹಿತರು ಅನಿಲ್ ಪ್ರೇಯಸಿಯ ಕುಟುಂಬಸ್ಥರ ಫೋಟೋಗಳನ್ನು ವೈರಲ್ ಮಾಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದ ನಿವಾಸಿ ಅನಿಲ್, ಅದೇ ಊರಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಸುಮಾರು 8ವರ್ಷಗಳ ಕಾಲ ಇಬ್ಬರು ಓಡಾಡಿಕೊಂಡಿದ್ರು. ಈ ವಿಚಾರ ಹುಡುಗಿಯ ಪೋಷಕರಿಗೆ ಗೊತ್ತಾಗುತ್ತಿದ್ದಂತೆ, ಹೊರಗೆ ಹೋಗದಂತೆ ಸ್ಟ್ರಿಕ್ಟ್ ಮಾಡಿದ್ದಾರೆ. ಹುಡುಗ ಮನೆ ಬಳಿ ಹೋದ್ರು, ಹುಡುಗಿ ಕ್ಯಾರೆ ಎಂದಿಲ್ಲ. ಇದರಿಂದ ಮನನೊಂದ ಅನಿಲ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾಫಿ ಬೆಳೆಗಾರ ಗಂಗಾಧರ್-ಪಾರ್ವತಿ ಪುತ್ರ ಅನಿಲ್, ಕಾಫಿ ಬೆಳೆಗಾರ ಶಿವರಾಂ-ಸವಿತಾ ಪುತ್ರಿ ಭಾವನಾಳನ್ನ ಪ್ರೀತಿಸುತ್ತಿದ್ದ. ಆದ್ರೆ ಭಾವನಾ ಪೋಷಕರು ಮದುವೆ ನಿರಾಕರಿಸಿದ್ದರು. ಇದರಿಂದ ಮನನೊಂದು ಶುಕ್ರವಾರ ಬೆಳಿಗ್ಗೆ ಭಾವನಾಳ ಮನೆ ಮುಂದೆಯೇ‌ ವಿಷ ಸೇವಿಸಿದ್ದಾನೆ. ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅನಿಲ್ ಸಾವನ್ನಪ್ಪಿದ್ದಾರೆ. ಅನಿಲ್ ಸಾವಿಗೆ ಭಾವನಾ ಹಾಗೂ ಪೋಷಕರೇ ಕಾರಣ ಎಂದು ಅನಿಲ್ ಸ್ನೇಹಿತರು ಪೋಸ್ಟರ್ ಹಾಕಿದ್ದಾರೆ. ಭಾವನಾ ಆಕೆಯ ಪೋಷಕರು ಹಾಗೂ ಅನಿಲ್ ಭಾವಚಿತ್ರ ಹಾಕಿ‌ ನೋವು, ಆಕ್ರೋಶ ಹೊರಹಾಕಿದ್ದಾರೆ. ಆತ್ಮಹತ್ಯೆ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *